ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮುದ್ದೆ ಮುರಿಯುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಲೇ ಇದೆ.
ಹೌದು… ಪ್ರಜ್ವಲ್ ವಿರುದ್ಧ ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಬಂದಿದ್ದು, ವರದಿಯು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಮತ್ತು ಆಡಿಯೊದಲ್ಲಿ ಗುರುತನ್ನು ದೃಢಪಡಿಸಿದೆ ಎಂದು ವಿಶೇಷ ತನಿಖಾ ತಂಡ ಹೈಕೋರ್ಟ್ಗೆ ಗುರುವಾರ ಹೇಳಿದೆ.
ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ತೀರ್ಪನ್ನು ಕಾಯ್ದಿರಿಸಿದ್ದಾರೆ.ಇದೀಗ ಈ ಮೂಲಕ ಪ್ರಜ್ವಲ್ ಗೆ ಹೊಸ ತಲೆನೋವು ಶುರುವಾಗಿದೆ.
ವೈರಲ್ ಆದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಅಸಲಿ; ಎಫ್ ಎಸ್ ಎಲ್ ನಿಂದ ವರದಿ
ಬೆಂಗಳೂರು : ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸದ್ಯಕ್ಕಂತೂ ಬಿಡುಗಡೆ ಭಾಗ್ಯ ಇಲ್ಲ ಅನ್ಸುತ್ತೆ. ಈಗಗಾಲೇ ಅವರು ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಇತ್ತ ಅವರ ಸಹೋದರ ಅಸಹಜ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಜೈಲು ಸೇರಿ ಇದೀಗ ರಿಲೀಸ್ ಆಗಿದ್ದಾರೆ. ಆದರೆ ಪ್ರಜ್ವಲ್ ಮಾತ್ರ ಇನ್ನು ಕಂಬಿ ಎಣಿಸುತ್ತಲೇ ಇದ್ದಾರೆ.
ಸದ್ಯ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಒಂದು ಎದುರಾಗಿದೆ. ವೈರಲ್ ಆದ ಪ್ರಜ್ವಲ್ ರೇವಣ್ಣ ಅವರ ವೀಡಿಯೋಗೆ ಸಂಬಂಧಪಟ್ಟಂತೆ ಎಫ್ ಎಸ್ ಎಲ್ ವರದಿ ಹೊರ ಬಿದ್ದಿದೆ. ಅದರಲ್ಲಿ ಪ್ರಜ್ವಲ್ ಗೆ ಬಿಗ್ ಶಾಕ್ ಎದುರಾಗಿದೆ. ವೈರಲ್ ಆದ ಪ್ರಜ್ವಲ್ ಅವರ ವೀಡಿಯೋಗಳು ಅಸಲಿ ಎಂದು ವರದಿ ಹೇಳಿದೆ.
ವರದಿ ಹೊರ ಬಿದ್ದ ಬೆನ್ನಲ್ಲೇ ಇದೀಗ ಎಸ್ ಐಟಿ ಅಧಿಕಾರಿಗಳು ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸವು ತಯಾರಿ ಮಾಡಿಕೊಂಡಿದ್ದಾರೆ. ಶೀಘ್ರವೇ ಅದನ್ನು ಕೋರ್ಟ್ ಗೆ ಸಲ್ಲಿಸಲಿದ್ದಾರೆ. ಎರಡು ವಾರದೊಳಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ಕಡೆ ವೈರಲ್ ಆದ ಅಶ್ಲೀಲ ವಿಡಿಯೋ ಮಾರ್ಪ ಮಾಡಿದ್ದಲ್ಲ ಎಂದು ವರದಿ ಬಂದಿದ್ದು ಈ ಇದನ್ನೇ ಇಟ್ಟುಕೊಂಡು ಆರೋಪ ಪಟ್ಟಿ ಸಲ್ಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ . ಹಾಗಾಗಿ ಸದ್ಯಕ್ಕಂತೂ ಪ್ರಜ್ವಲ್ ರೇವಣ್ಣ ಅವರಿಗೆ ಜೈಲೇ ಗತಿ ಎಂಬಂತೆ ಕಂಡು ಬರುತ್ತಿದೆ.