ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಗೆ ದಿನಕ್ಕೊಂದು ರೀತಿಯ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ನಟ ದರ್ಶನ್ ಅವರ ಮನೆಯಲ್ಲಿ 85 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಆ 85 ಲಕ್ಷ ರೂಪಾಯಿಗೆ ಸಂಬಂಧಪಟ್ಟಂತೆ ಇಂದು ಐಟಿ ಅಧಿಕಾರಿಗಳು ದರ್ಶನ್ ಅವರನ್ನು ಬಳ್ಳಾರಿ ಜೈಲಿನಲ್ಲೇ ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನು ಇಂದು ಐಟಿ ಅಧಿಕಾರಿಗಳು ದರ್ಶನ್ ಅವರನ್ನು ವಿಚಾರಣೆಗೆ ಒಳಪಡಿಸುತ್ತಿರುವ ಹಿನ್ನೆಲೆ ಬೆಳಗ್ಗೆಯೇ ದರ್ಶನ್ ಪರ ಆಡಿಟರ್ ಎಂ ಎಸ್ ರಾವ್ ಆಗಮಿಸಿದ್ದರು. ಆಡಿಟರ್ ಆಗಮನದ ಬೆನ್ನಲ್ಲೇ ಎರಡು ಕಾರುಗಳಲ್ಲಿ ಐಟಿ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಬಂದಿದ್ದಾರೆ. ಐಟಿ ಅಧಿಕಾರಿಗಳು ಬರುತ್ತಿದ್ದಂತೆ ಸಂದರ್ಶಕರ ಕೊಠಡಿಗೆ ಬಂದ ಡಿ ಬಾಸ್ ಅಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಐಟಿ ಅಧಿಕಾರಿಗಳ ವಿಚಾರಣೆ ವೇಳೆ ದರ್ಶನ್ ಅವರ ವ್ಯವಹಾರಕ್ಕೆ ಸಂಬಂಧಪಟ್ಟಂತೆ ದರ್ಶನ್ ಪರ ಆಡಿಟರ್ ಎಂ ಎಸ್ ರಾವ್ ಎಲ್ಲಾ ದಾಖಲೆಗಳನ್ನು ಒದಗಿಸಿದ್ದಾರೆ ಎನ್ನಲಾಗಿದೆ. ಕೆಲವು ಹೊತ್ತು ವಿಚಾರಣೆ ನಡೆಸಿದ ಬಳಿಕ ಐಟಿ ಅಧಿಕಾರಿಗಳು ತೆರಳಿದ್ದಾರೆ ಎನ್ನಲಾಗಿದೆ.
ಐಟಿ ಟೆನ್ಶನ್ ಮಧ್ಯೆ ಬೇಲ್ ಟೆನ್ಶನ್:
ಐಟಿ ಟೆನ್ಶನ್ ಮಧ್ಯೆ ಬೇಲ್ ಟೆನ್ಶನ್ ನಡುವೆ ಇದೀಗ ದರ್ಶನ್ ಅವರಿಗೆ ಬೇಲ್ ಟೆನ್ಶನ್ ಕೂಡ ಶುರುವಾಗಿದೆ. ಈಗಾಗಲೇ ದರ್ಶನ್ ಅವರು ಬೇಲ್ ಗೆ ಅರ್ಜಿ ಸಲ್ಲಿಸಿದ್ದು ಆ ಅರ್ಜಿಯ ವಿಚಾರಣೆ ನಾಳೆ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ನಡೆಯಲಿದೆ.ಈಗಗಾಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು, ದರ್ಶನ್ ಅವರಿಗೂ ಕೂಡ ನಾಳೆ ಜಾಮೀನು ಸಿಗುತ್ತೆ ಅಂತಾ ಅವರ ಅಭಿಮಾನಿಗಳು ಅಂದುಕೊಂಡಿದ್ದಾರೆ. ಪವಿತ್ರಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ಕೂಡ ನಾಳೆಯೇ ಇರೋದರಿಂದ ಇಬ್ಬರಲ್ಲಿ ಯಾರಿಗೆ ಬೇಲ್ ಸಿಗುತ್ತೆ ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಮೂವರಿಗೆ ಜಾಮೀನು ಸಿಕ್ಕಿದ ಬೆನ್ನಲ್ಲೇ ದರ್ಶನ್ ಅವರನ್ನು ಭೇಟಿಯಾಗಿ ಚರ್ಚಿಸಿದ ವಕೀಲರು
ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತುಮಕೂರು ಜೈಲಿನಲ್ಲಿ ಇದ್ದ ಮೂವರು ಆರೋಪಿಗೆ ಜಾಮೀನು ದೊರೆತಿದೆ. ಎ 15 ಕಾರ್ತಿಕ್ , ಎ16 ನಿಖಿಲ್ ನಾಯಕ್ ಹಾಗೂ ಎ 17 ಕೇಶವ ಮೂರ್ತಿಗೆ ಜಾಮೀನು ದೊರೆತಿದೆ. ಎ 15 ಕಾರ್ತಿಕ್ , ಎ16 ನಿಖಿಲ್ ನಾಯಕ್ ಗೆ 57ನೇ ಸಿ ಸಿ ಹೆಚ್ ಕೋರ್ಟ್ ಜಾಮೀನು ನೀಡಿದರೆ ಎ 17 ಕೇಶವ ಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದೆ. ಇನ್ನು ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ದರ್ಶನ್ ಪರವಾದ ವಕೀಲರು ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ದರ್ಶನ್ ಅವರ ಪರವಾದ ವಕೀಲ ಸುನೀಲ್ ಅವರು ಸೆ.27ಕ್ಕೆ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಹಿನ್ನಲೆ ಕಾನೂನು ಸಮರ ಸಂಬಂಧಿಸಿದಂತೆ ನಾವು ಅವರಿಗೆ ಚರ್ಚೆ ನಡೆಸಿದೆವು ಎಂದು ತಿಳಿಸಿದ್ದಾರೆ. ಸೆಷನ್ಸ್ ಕೋರ್ಟ್ ಗೆ ಬೆಲ್ ಅರ್ಜಿ ಸಲ್ಲಿಸಲಾಗಿದೆ .302 ಕೇಸ್ ಆಗಿರುವುದರಿಂದ ಸೆಷನ್ಸ್ ಕೋರ್ಟ್ ನಲ್ಲಿ ಬೇಲ್ ಸಿಕ್ಕಿಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದರು.
ದರ್ಶನ್ ಅವರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ಜೈಲು ಸಿಬ್ಬಂದಿಗೆ ಮನವಿ ಮಾಡಿದ್ದೇವೆ. ಆರೋಪಿಗೆ ಬೆಡ್, ತಲೆ ದಿಂಬು, ಚಾಪೆ ಸೇರಿದಂತೆ ಮೂಲಭೂತ ಸೌಲಭ್ಯ ನೀಡುವಂತೆ ತಿಳಿಸಿದ್ದೇವೆ. ಜೈಲಿನ ನಿಯಮದ ಪ್ರಕಾರ ಯಾವುದೇ ಆರೋಪಿಗೆ ಮೂಲಭೂತ ಸೌಕರ್ಯ ನೀಡಬೇಕು. ಆರೋಗ್ಯ ಸಮಸ್ಯೆಯ ಹಿನ್ನೆಲೆ ಮೆಡಿಕಲ್ ಬೆಡ್ ನೀಡುವಂತೆ ಆರೋಪಿ ದರ್ಶನ್ ಬೇಡಿಕೆ ಇಟ್ಟಿದ್ದಾರೆ.ವೈದ್ಯಕೀಯ ತಪಾಸಣೆ ವರದಿಯನ್ನು ಜೈಲು ಅಧಿಕಾರಿಗಳಿಗೆ ನೀಡಲಾಗಿದೆ.ಈ ಕುರಿತು ವೈದ್ಯರ ಮಾಹಿತಿ ಪಡೆದು ನಿರ್ಧರಿಸಲಾಗುವುದು ಎಂದು ಜೈಲು ಸಿಬ್ಬಂದಿ ಭರವಸೆ ನೀಡಿದ್ದಾರೆ ಎಂದು ಲಾಯರ್ ತಿಳಿಸಿದ್ದಾರೆ.
ಇನ್ನು ಮೇಲಾಧಿಕಾರಿಗಳ ಜೊತೆ ಚರ್ಚಿಸಿ, ಕಾನೂನು ಚೌಕಟ್ಟು ಪರಿಶೀಲಿಸಿ ಮೂಲ ಸೌಕರ್ಯ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತೆ. ಈ ಕುರಿತು ಜೈಲು ಸೂಪಿರಿಡೆಂಟ್ ಆರ್.ಲತಾ ಅವರು ಭರವಸೆ ಕೊಟ್ಟಿದ್ದಾರೆ.ಒಂದು ವೇಳೆ ನೀಡದೇ ಇದ್ದರೆ ಮಾನಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ದರ್ಶನ್ ಪರವಾದ ವಕೀಲ ಸುನೀಲ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.