ಬೆಂಗಳೂರು: ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬನ್ನ ಬೆರೆಸಿದರೆ ಅದು ಅಪರಾಧ ಎಂದು ಬೆಂಗಳೂರಿನಲ್ಲಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ ಆರೋಪ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಪ್ರಾಣಿಗಳ ಕೊಬ್ಬನ್ನ ಬೆರೆಸಿದರೆ ಅದು ಅಪರಾಧ, ತಪ್ಪು.ತನಿಖೆ ಆಗಲಿ, ತಪ್ಪಿತಸ್ಥ ವಿರುದ್ಧ ಕ್ರಮ ಆಗಲಿ.ತಿರುಪತಿ ಲಡ್ಡು ಪಾವಿತ್ರ್ಯತೆ ಹೊಂದಿದೆ.ಭಕ್ತಿಯಿಂದ ಜನ ಪ್ರಸಾದ ಎಂದು ಸ್ವೀಕಾರ ಮಾಡುತ್ತಾರೆ.ಕೆಎಂಎಫ್ ಅಧ್ಯಕ್ಷರ ಜೊತೆಗೆ ನಿನ್ನೆ ಮಾತಾಡಿದ್ದೇನೆ.ಇದು ಘನಗೋರ ತಪ್ಪು, ಈ ರೀತಿ ಆಗಬಾರದು.ಜನರ ಧಾರ್ಮಿಕ ಭಾವನೆ ಜೊತೆ ಆಟ ಆಡಬಾರದು.ಭಾವನಾತ್ಮಕದ ಸಂಬಂಧ ಜನ ಹೊಂದಿದ್ದಾರೆ ಎಂದಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಕೇಂದ ಸಚಿವ ಪ್ರಲ್ಹಾದ್ ಜೋಶಿ ತಿರುಪತಿ ಪ್ರಸಾದದ ವಿಷಯದಲ್ಲಿ ಬಹಳ ಗಂಭೀರ ಆರೋಪ ಕೇಳಿ ಬಂದಿದೆ.ಹಿಂದಿನ ಸರ್ಕಾರ ಮೊದಲು ನಂದಿನಿ ತುಪ್ಪ ಖರೀದಿ ಮಾಡ್ತೀದ್ರು.ನಂತರ ಅದನ್ನು ಬಂದ್ ಮಾಡಿದ್ರು.ನಂದಿನಯ ತುಪ್ಪ ಖರೀದಿ ಬಂದ್ ಮಾಡಿದ ಬಳಿಕ ಕೃತ್ಯ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ.ಲ್ಯಾಬ್ ರಿಪೋರ್ಟ್ ಚಂದ್ರಬಾಬು ನಾಯ್ಡು ಬಿಡುಗಡೆ ಮಾಡಿದ್ದಾರೆ.ನಾಯ್ಡು ಒಳ್ಳೆಯ ಆಡಳಿತಗಾರ,ಅವರ ಹೇಳಿದ್ದಾರೆ ಅಂದ್ರೆ ಸತ್ಯ ಇರಲಬೇಕು.ಲ್ಯಾಬ್ ರಿಪೋರ್ಟ್ ಬಂದಿರೋ ಕಾರಣ ಸಮಗ್ರ ತನಿಖೆ ಆಗಬೇಕು.ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು.ಅಲ್ಲಿನ ಹಿಂದಿನ ಸರ್ಕಾರ ಹಿಂದೂ ವಿರೋಧಿ ಕೆಲಸ ಮಾಡಿದೆ.ಕಾಂಗ್ರೆಸ್ ಕೂಡಾ ಇಡೀ ದೇಶದಲ್ಲಿ ಹಿಂದೂ ವಿರೋಧಿ ಕೆಲಸ ಮಾಡ್ತಿದೆ ಎಂದಿದ್ದಾರೆ.ಇದನ್ನು ನಾವು ತಾರ್ಕಿಕ ಅಂತ್ಯಕ್ಕೆ ತಗೆದುಕೊಂಡು ಹೋಗ್ತೀವಿ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.ಎಲ್ಲ ಕಡೆಯೂ ಜನರ ಶ್ರದ್ದೆಗೆ ಧಕ್ಕೆ ತರೋ ಕೆಲಸ ಮಾಡಬಾರದು.ಎಲ್ಲ ಕಡೆಯೋ ಪ್ರಸಾದವನ್ನು ಕಾಲ ಕಾಲಕ್ಕೆ ತಪಾಸಣೆ ಮಾಡಬೇಕು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮುನಿರತ್ನ ಪ್ರಕರಣದ ಬಗ್ಗೆ ಮಾತನಾಡಿದ ಅವರು ಮುನಿರತ್ನ ವಿಚಾರದಲ್ಲಿ ನಾನು ಮಾತಾಡಿದಾಗ ಅನೇಕ ಬೆಳವಣಿಗೆ ಆಗಿವೆ.ಉಪ್ಪು ತಿಂದವರು ನೀರು ಕುಡಿಯಲೇ ಬೇಕು.ಅವರ ಮೇಲೆ ಗಂಭೀರ ಆರೋಪ ಇವೆ,ತನಿಖೆ ಆಗಲಿ.ಆರ್ ಅಶೋಕ್, ಶೋಭಾ ಕರಂದ್ಲಾಜೆ ಮೇಲೆ ದ್ವೇಷ ಮಾಡ್ತೀದಿರಿ.ನಿಮ್ಮ ಶಾಸಕರ ಮೇಲೆ ಕೇಸ್ ಹಾಕಿದ್ರು,ಅರೆಸ್ಟ್ ಮಾಡಿಲ್ಲ. ಮುನಿರತ್ನ ಮೇಲೆ ರೇಪ್ ಇತ್ಯಾದಿ ಆರೋಪ ಇದೆ.ತನಿಖೆ ಮಾಡಲಿ,ಹಾಗೆ ಉಳಿದವರನ್ನು ಅರೆಸ್ಟ್ ಮಾಡಲಿ ಎಂದಿದ್ದಾರೆ ಪ್ರಹ್ಲಾದ್ ಜೋಶಿ.
ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ ಆಗಿವೆ.ಸೇಮ್ ಎರಡು ಘಟನೆ ನಡೆದಿವೆ ಅಂತಾರೆ, ಎರಡು ಯಾಕೆ ಘಟನೆ ನಡೆಯಬೇಕು ಎಂದು ಜೋಶಿ ಪ್ರಶ್ನಿಸಿದ್ದಾರೆ.ಕೊಪ್ಪಳ ದಲ್ಲಿ ಮಸೀದಿ ಬಂದ್ರೆ ಗಣೇಶ ನಿಲ್ಲಸಬೇಕಂತೆ.ನಾವ ಬೆಳಿಗ್ಗೆ ಪೂಜೆ ಮಾಡೋವಾಗ ನಮಾಜ್ ಮಾಡ್ತಾರೆ.ಹಾಗಾದ್ರೆ ನಮಾಜ್ ನಿಲ್ಲಸ್ತಾರಾ ಎಂದು ಜೋಶಿ ಪ್ರಶ್ನೆ ಮಾಡಿದ್ದಾರೆ. ಕೊಪ್ಪಳ,ನಾಗಮಂಗಲದಲ್ಲಿ ನಡೆದ ಘಟನೆ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಉದಾಹರಣೆ. ನಾವ ಯಾವ ಗೊಡ್ಡು ಬೆದರಿಕೆ ಬಗ್ಗೋದಿಲ್ಲ .ವಿದೇಶ ನೆಲದಲ್ಲಿ ನಿಂತು ಭಾರತವನ್ನು ಅಪಮಾನ ಮಾಡೋದು ಸರಿ ಅಲ್ಲ ಎಂದಿದ್ದಾರೆ.ಇದು ಅವರ ಅಪ್ರಬುದ್ದತೆಗೆ ಸಾಕ್ಷಿ.ಮುಸಲ್ಮಾನರು ಭಾರತ್ ಮಾತಾ ಕೀ ಜೈ ಅಂತಾರೋ ಅಲ್ಲಿವರೆಗೂ ನಮ್ಮ ಅಭ್ಯಂತರ ಇಲ್ಲ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದಿರಾ ಕ್ಯಾಂಟಿನ್ ವಿಚಾರ ನನಗೆ ಸಂಪೂರ್ಣ ಮಾಹಿತಿ ಇಲ್ಲ.ನಾವ ಇಂದಿರಾ ಕ್ಯಾಂಟಿನ್ ಮಾಡಬೇಡಿ ಅಂತಾ ಹೇಳಲ್ಲ.ಸ್ಮಶಾನ ಇದ್ರೆ ಪಾಲಿಕೆ ಅದನ್ನು ಸರಿ ಮಾಡಬೇಕು..ಸೌಹಾರ್ದಯುತವಾಗಿ ಎಲ್ಲ ಸರಿ ಮಾಡಬೇಕು ಎಂದಿದ್ದಾರೆ.