ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಅಲ್ಲಿ ಪರಪ್ಪನ ಅಗ್ರಹಾರದಲ್ಲಿ ಸಿಗುತ್ತಿದ್ದ ಯಾವ ರಾಜ ಮರ್ಯಾದೆ ಕೂಡ ಸಿಗುತ್ತಿಲ್ಲ. ದರ್ಶನ್ ಇಲ್ಲಿ ಸಾಮಾನ್ಯ ಕೈದಿಯಂತೆ ಇದ್ದು ಅವರನ್ನು ವಿಶೇಷಾ ಭದ್ರತಾ ಸೆಲ್ ನಲ್ಲಿ ಇರಿಸಲಾಗಿದೆ.
ಇನ್ನು ಬಳ್ಳಾರಿ ಜೈಲು ಸೇರುತ್ತಿದ್ದಂತೆ ನಟ ದರ್ಶನ್ ಬೆನ್ನು ನೋವಿದೆ. ಹಾಗಾಗಿ ಸರ್ಜಿಕಲ್ ಚೆಯರ್ ಬೇಕು ಎಂದು ಮನವಿ ಮಾಡಿದ್ದರು,ಅದರಂತೆ ಅವರಿಗೆ ವೈದ್ಯರು ನೀಡಿ ವೈದ್ಯಕೀಯ ವರದಿಯ ಆಧಾರದಲ್ಲಿ ಸರ್ಜಿಕಲ್ ಚಯರ್ ನೀಡಲಾಗಿತ್ತು. ಆ ಬಳಿಕ ಒಂದೆರಡು ದಿನಗಳಲ್ಲಿ ಹೊಸ ಬೇಡಿಕೆ ಇಟ್ಟಿದ್ದರು. ನನಗೆ ಹೊರಗೆ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಚಾರ್ಚ್ ಶೀಟ್ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು. ಹಾಗಾಗಿ ನನ್ನ ಸೆಲ್ ಗೆ ಟಿವಿ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿದ್ದರು. ಆದರೆ ಜೈಲು ಸಿಬ್ಬಂದಿ ಅದಕ್ಕೆ ಅಧಿಕಾರಿಗಳ ಅನುಮತಿ ಬೇಕು ಎಂದಿದ್ದರು. ಆದರೆ ಇದೀಗ ದರ್ಶನ್ ಸೆಲ್ ಗೆ ಟಿವಿ ಹಾಕಲಾಗಿದೆ.ಆದರೆ ಕೆಲವೇ ಕೆಲವು ಚಾನೆಲ್ ಗಳನ್ನು ನೋಡಲು ಮಾತ್ರ ದರ್ಶನ್ ಗೆ ಅವಕಾಶ ನೀಡಲಾಗಿದೆ. ಆದರೆ ನಟ ದರ್ಶನ್ ಅವರಿಗೆ ಖಾಸಗಿ ಚಾನೆಲ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿಲ್ಲ. ಬದಲಾಗಿ ಕೇವಲ ಡಿಡಿ ಚಂದನ ಸೇರಿದಂತೆ ಇತರೆ ಸರ್ಕಾರಿ ಚಾನಲ್ ವೀಕ್ಷಿಸಲು ಅವಕಾಶ ನೀಡಲಾಗಿದೆ.
ಅಂದು ಏನ್ರೀ ಮೀಡಿಯಾ ಅಂದ ಡಿ ಬಾಸ್ ರಿಂದ , ಇಂದು ಟಿವಿ ಬೇಕು ಎಂದು ಜೈಲಾಧಿಕಾರಿಗಳಿಗೆ ಬೇಡಿಕೆ
ಬಳ್ಳಾರಿ; ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ರೆ ರಾಜ ಮರ್ಯಾದೆ ನೀಡಲಾಗುತ್ತಿದೆ ಎಂಬ ವಿಚಾರ ಬಯಲಾಗುತ್ತಿದ್ದಂತೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಿದ್ದಂತೆ ನಟ ದರ್ಶನ್ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟ ಪಡುತ್ತಿದ್ದಾರೆ ಎನ್ನಲಾಗಿದೆ.ಅಲ್ಲದೇ ಸೆಲ್ ನಲ್ಲಿ ಒಬ್ಬರೇ ಇರೋದರಿಂದ ನಟ ದರ್ಶನ್ ಗೆ ಮಾತನಾಡೋದಕ್ಕೆ ಯಾರ್ ಸಿಗ್ತಾರೆ ಅಂತಾ ಕಾಯೋ ಹಾಗಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜನಂತಿದ್ದ ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿ ಕಟ್ಟಿ ಹಾಕಿದಂತಾಗಿದೆ. ಹೊರಗಡೆ ಜಗತ್ತಿನಲ್ಲಿ ಏನಾಗುತ್ತಿದೆ ಅನ್ನೋದೇ ಗೊತ್ತಾಗುತ್ತಿಲ್ಲ. ಹಾಗಾಗಿ ಜೈಲಿನ ಸಿಬ್ಬಂದಿ ಬಳಿ ಎಲ್ಲವನ್ನು ಕೇಳಿ ದರ್ಶನ್ ತಿಳಿದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ನಿರ್ಧರಿಸಿದ್ದು ಅದರ ಅಪ್ ಡೇಟ್ ಪಡೆಯಲು ದರ್ಶನ್ ಗೆ ಟಿವಿ ಬೇಕೇ ಬೇಕು. ಹಾಗಾಗಿ ಜೈಲಿನ ಸಿಬ್ಬಂದಿ ಬಳಿ ದರ್ಶನ್ ನನಗೆ ಟಿವಿ ಬೇಕು ಅಂತಾ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬೆನ್ನು ನೋವಿನ ಹಿನ್ನೆಲೆ ದರ್ಶನ್ ಗೆ ಸರ್ಜಿಕಲ್ ಚಯರ್ ನೀಡಲು ಅನುಮತಿ ಕೊಡಲಾಗಿದೆ. ಅದರ ಬೆನ್ನಲ್ಲೇ ಇದೀಗ ಟಿವಿಗೆ ಜೈಲಿನ ಸಿಬ್ಬಂದಿ ಬಳಿ ಬೇಡಿಕೆ ಇಟ್ಟಿದ್ದು ನಿಮಗೆ ಟಿವಿ ಬೇಕು ಅಂದ್ರೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎಂದು ಜೈಲಿನ ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಹೊರಗಡೆ ಏನ್ ಬೆಳವಣಿಗೆಗಳು ಆಗ್ತಿವೆ ಎಂದು ನಟ ದರ್ಶನ್ ಗೆ ಗೊತ್ತಾಗದೇ ಇರೋದರಿಂದ ಜೈಲಿನ ಸಿಬ್ಬಂದಿ ಬಳಿ ಹೊರಗೇನಾಗ್ತಿದೆ ಎಂದು ಕೇಳಿ ತಿಳಿದುಕೊಳ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಜೈಲಿನ ಬಳಿ ಯಾರು ಅಭಿಮಾನಿಗಳು ಬರುವುದು ಬೇಡ ಎಂದು ಜೈಲು ಸಿಬ್ಬಂದಿ ಮೂಲಕ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ.