ಮಂಡ್ಯ ಜಿಲ್ಲೆ ಯಾವತ್ತು ಕೋಮು ದಳ್ಳುರಿಗೆ ಅವಕಾಶ ಕೊಟ್ಟಿಲ್ಲ, ಕೊಡುವುದಿಲ್ಲ ಎಂದು ಮಳವಳ್ಳಿಯಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದ್ದಾರೆ.ನಾಗಮಂಗಲದಲ್ಲಿ ಕೋಮು ಗಲಭೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಹಿಂದೆ ಒಂದು ಸಣ್ಣ ಗಲಾಟೆ ನಡೆದಿತ್ತು.ಬೆರಳೆಣಿಕೆಯಷ್ಟು ಜನರ ವೈಯಕ್ತಿಕ ವಿಚಾರ ಮುಂದಿಟ್ಟುಕೊಂಡು ನಡೆದ ಘಟನೆ ಇದು. ಕೆಲವೊಂದು ಪ್ರಚೋದನಾಕಾರಿ ವಿಚಾರ ನಡೆಯುತ್ತಿದೆ. ಒಬ್ಬರು ಗಣ್ಯ ವ್ಯಕ್ತಿಗಳೇ ಪೆಟ್ರೋಲ್ ಬಾಂಬ್, ಲಾಂಗ್ ಬಗ್ಗೆ ಮಾತನಾಡಿದ್ದಾರೆ.ಪ್ರಚೋದನೆ ಬೇಡ. ಒಂದು ವರ್ಗದ ಬಗ್ಗೆ ಪ್ರಚೋದನೆ ಮಾಡಿ ಮಾತನಾಡೋದು.ಸರ್ಕಾರದ ಬಗ್ಗೆ ಪ್ರಚೋದನೆ ಮಾಡಿ ಮಾತನಾಡುವುದು ಸರಿಯಲ್ಲ. ಎಲ್ಲರು ಸರ್ಕಾರ ನಡೆಸಿದ್ದಾರೆ, ಅವಶ್ಯಕತೆ ಇಲ್ಲ.ಮಂಡ್ಯ ಜಿಲ್ಲೆ ಯಾವತ್ತು ಕೋಮು ದಳ್ಳುರಿಗೆ ಅವಕಾಶ ಕೊಟ್ಟಿಲ್ಲ, ಕೊಡುವುದಿಲ್ಲ ಎಂದಿದ್ದಾರೆ.
ಇದು ಒಂದು ಸಣ್ಣ ಘಟನೆ, ಅದನ್ನ ಮರೆಯಬೇಕು.ಎಲ್ಲರು ಒಟ್ಟಾಗಿ ಬಾಳುವುದನ್ನ ಕಲಿಯಬೇಕು.ಪ್ರಚೋದನೆ ಅವಶ್ಯಕತೆ ಇಲ್ಲ.ಸಹಜವಾಗಿ ಸರ್ಕಾರ ಎಲ್ಲದಕ್ಕೂ ಹೊಣೆನೇ.ಸಾರ್ವಜನಿಕರು ತಪ್ಪು ಮಾಡಿದ್ರೆ ಸರ್ಕಾರ ಮಾಡಿಸಿದೆ ಅಂತೀರಾ?ಇದು ಸಣ್ಣ ಘಟನೆ, ಇದಕ್ಕೆ ವೈಭವಿಕರಿಸುವುದು ಬೇಕಾಗಿಲ್ಲ.ಕೆಲವು ವ್ಯಕ್ತಿಗಳ ವೈಯಕ್ತಿಕ ವಿಚಾರ ಇದು.ಇದು ಧರ್ಮ, ಜಾತಿ, ಗಣಪತಿ ವಿಚಾರ ಅಲ್ಲ.ತನಿಖೆ ಬಳಿಕ ಸತ್ಯ ಹೊರಗೆ ಬರುತ್ತೆ.ನಾಗಮಂಗಲ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರ. ಪಾಪ ಮೊದಲಿನಿಂದಲೂ ಅವರನ್ನ ಕೆಣಕುತ್ತಿದ್ದಾರೆ.ಯಾವುದರಲ್ಲಾದರೂ ಸಿಕ್ಕಿಸಲು ಸಂಚು ನಡೆಯುತ್ತಿದೆ.ತನಿಖೆಗಳು ಉತ್ತರ ಕೊಡುತ್ತೆ.ಲಾಂಗ್, ಪೆಟ್ರೋಲ್ ಬಾಂಬ್, ಎಲ್ಲಾದರು ಇದ್ಯಾ? ಸುಮ್ಮನೆ ಪ್ರಚಾರ ಮಾಡ್ತಾರೆ.ಅಂತರ್ ಧರ್ಮೀಯರು ವಿಶ್ವಾಸದಲ್ಲಿದ್ದಾರೆ.ಆ ವಿಶ್ವಾಸ ಕೆಡಿಸುವ ಕೆಲಸ ಮಾಡ್ತಾರೆ.ನಮ್ಮೂರಲ್ಲು ನಡೆಯುತ್ತೆ, ಸಣ್ಣಪುಟ್ಟ ಗಲಭೆ ಆಗುತ್ತೆ.ಸಣ್ಣದ್ದನ್ನ ಬೆಳೆಸೋದಲ್ಲ, ಶಾಂತಿಗೆ ಪ್ರಖ್ಯಾತಿಯಾಗಿರುವುದು ನಮ್ಮ ಮಂಡ್ಯ.ಇಂತಹ ಕೋಮು ಗಲಭೆಗೆ ಅವಕಾಶ ಇಲ್ಲ.ನಮ್ಮ ಜನ ಅನ್ನ ಕೊಟ್ಟು ಗೊತ್ತು ಹೊರತು ದ್ವೇಷ ಮಾಡೋದು ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಸಿಎಂ ಕುರ್ಚಿ ಖಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಕುರ್ಚಿ ಖಾಲಿ ಎಲ್ಲಿದೆ?.ನಮ್ಮ ನಾಡಿನ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ.ಡಿ.ಕೆ.ಶಿವಕುಮಾರ್, ಎಂ.ಬಿ. ಪಾಟೀಲ್, ಹೆಚ್.ಕೆ. ಪಾಟೀಲ್, ದೇಶಪಾಂಡೆ, ಪರಮೇಶ್ವರ್ ಸೇರಿದಂತೆ ಎಲ್ಲರೂ ಅಣ್ಣ ತಮ್ಮಂದಿರ ರೀತಿ ಇದ್ದಾರೆ.ಯಾರೇ ನಮಗೆ ಎಷ್ಟೆ ತೊಂದರೆ ಕೊಡಲಿ, ಕೆಡುಕು ಮಾಡಲಿ ಅಂಜುವುದಿಲ್ಲ, ಅಳುಕೋದಿಲ್ಲ.ಸರ್ಕಾರ ಜನರ ಪರ ಇದೆ. ಗ್ಯಾರಂಟಿ ಜೊತೆ ಸರ್ಕಾರ ಗ್ಯಾರಂಟಿ ಇದೆ, ಇರಲಿದೆ.ನಾನು ಭವಿಷ್ಯ ನುಡಿತ್ತೀನಿ ಅನ್ಕೋಬೇಡಿ.ನಮ್ಮ ಸಿಎಂ ಶುದ್ದ, ಪ್ರಾಮಾಣಿಕರು, ಅವರ ಪಾತ್ರ ಮುಡಾದಲ್ಲಿ ಇಲ್ಲ ಎಂದಿದ್ದಾರೆ.
ಇದರ ಮಧ್ಯೆ ಜಲಪಾತೋತ್ಸವ ನೆಪದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಆರೋಪಕ್ಕೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಿರುದ್ಧ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.ಮಳವಳ್ಳಿಯ ಗಗನಚುಕ್ಕಿಯಲ್ಲಿ ಮಾತನಾಡಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಜಲಪಾತೋತ್ಸವಕ್ಕೆ ಯಾರು ಬಿಡುವುದು ಬೇಡ, ತಡೆದಿಟ್ಟುಕೊಳ್ಳಲಿ.ಅವರು ಕಪ್ಪು ಬಾವುಟ ಪ್ರದರ್ಶಿಸಿದರು ನಮಗೆ ಚಿಂತೆ ಇಲ್ಲ.ಅವರಿಗೆ ತೊಂದರೆ ಇದ್ರೆ ಕಾವೇರಿ ನದಿಗೆ ಅಡ್ಡಲಾಗಿ ನಿಂತು ನೀರು ನಿಲ್ಲಿಸಲಿ.ಕನ್ನಂಬಾಡಿ 124.08, ಕಬಿನಿ, ಹಾರಂಗಿ, ಹೇಮಾವತಿ ಡ್ಯಾಂ ಭರ್ತಿ ಇದೆ.ಈ ನೀರನ್ನ ನಿಲ್ಲಿಸಿಕೊಳ್ಳೋದಕ್ಕೆ ಜಾಗ ಎಲ್ಲಿದೆ?ನೀರು ಹರಿದು ಬರ್ತಿದೆ.ಆ ಸಂದರ್ಭದಲ್ಲಿ ಕಾರ್ಯಕ್ರಮ ಅಷ್ಟೇ.ಅವರು ಅಧಿಕಾದಲ್ಲಿದ್ದಾಗ 103 ಅಡಿ ಇದ್ದಾಗ ನೀರು ಬಿಡಿಸಿಕೊಂಡು ಏನು ಮಾಡಿದ್ರು ಗೊತ್ತಿದೆ.ಇದು ನನ್ನ ಮನೆ ಕಾರ್ಯಕ್ರಮ ಅಲ್ಲ, ರಾಜಕಾರಣ ಮಾಡ್ತಿಲ್ಲ.ಕ್ಷೇತ್ರದಲ್ಲಿ ಪ್ರವಾಸಿ ತಾಣದ ಅಭಿವೃದ್ಧಿ ಮತ್ತು ಸರ್ಕಾರದ ಕಾರ್ಯಕ್ರಮ.ಗಗನಚುಕ್ಕಿ ಜಲಪಾತೋತ್ಸವ ಸಾರ್ವಜನಿಕರ ಕಾರ್ಯಕ್ರಮ.ನೀರಾವರಿಯಲ್ಲಿ ಮಹಾನ್ ತಜ್ಞರು, ಬಹಳಷ್ಟು ನೀರಾವರಿ ಯೋಜನೆ ತಂದಿದ್ದಾರೆ.ಇವಾಗ ಅವರ ಬಗ್ಗೆ ಮಾತನಾಡಲ್ಲ, ಮುಂದೆ ಮಾತನಾಡ್ತೇನೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಿರುದ್ಧ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿಡಿಕಾರಿದ್ದಾರೆ.