ಮನೆ Latest News ಬಿಜೆಪಿ ಕಾಲದ ಹಗರಣ ತನಿಖೆಗೆ ಉಪಸಮಿತಿ ರಚನೆ ವಿಚಾರ; ಕೇಸ್ ಸ್ಪೀಡಪ್ ಮಾಡಲು‌ ಕಮಿಟಿ ಮಾಡಿದ್ದೇವೆ...

ಬಿಜೆಪಿ ಕಾಲದ ಹಗರಣ ತನಿಖೆಗೆ ಉಪಸಮಿತಿ ರಚನೆ ವಿಚಾರ; ಕೇಸ್ ಸ್ಪೀಡಪ್ ಮಾಡಲು‌ ಕಮಿಟಿ ಮಾಡಿದ್ದೇವೆ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ್

0

 

ಬೆಂಗಳೂರು: ಬಿಜೆಪಿ ಕಾಲದ ಹಗರಣ ತನಿಖೆಗೆ ಉಪಸಮಿತಿ ರಚನೆ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಕೇಸ್ ಸ್ಪೀಡಪ್ ಮಾಡಲು‌ ಕಮಿಟಿ ಮಾಡಿದ್ದೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಯಾವ್ಯಾವ ಕೇಸ್ ಬಾಕಿ ಇದ್ದಾವೆ ಅಂತ ಗುರುತಿಸಿದ್ದೇವೆ.ಬಹಳ ಕೇಸ್ ಧೂಳು ಹಿಡಿದಿವೆ.ಡಿಪಾರ್ಟ್ಮೆಂಟ್ ನಲ್ಲಿ ತನಿಖೆ ನಡೆದಿವೆ.ಆದ್ರೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಿದ್ದೇವೆ.ಅದಕ್ಕಾಗಿ ಸಮಿತಿ ಮಾಡಿದ್ದಾರೆ.ಕೇಸ್ ಸ್ಪೀಡಪ್ ಮಾಡಲು‌ ಈ ಕಮಿಟಿ ಮಾಡಿದ್ದೇವೆ.ಪೊಲೀಸ್ ಇಲಾಖೆಯಲ್ಲಿ ಬಾಕಿ ಕೇಸ್ ಗೆ ನಾನು ಸೂಚನೆ ಕೊಟ್ಟಿದ್ದೇನೆ.ಮೂರು ತಿಂಗಳಿಗೊಮ್ಮೆ ರಿವ್ಯೂ ಮಾಡ್ತಾರೆ.ಇದನ್ನೇ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ತೀರ್ಮಾನ ಆಗಿದ್ದು .ಈ ವಾರ ಕ್ಯಾಬಿನೆಟ್ ಸಬ್ ಕಮಿಟಿ ಸಭೆ ಆಗುತ್ತೆ ಎಂದಿದ್ದಾರೆ.

ಇನ್ನು ಈ ಬಗ್ಗೆ ಸಿಎಂ ಸಿಎಂ ಸಿದ್ದರಾಮಯ್ಯ ಅವರು ಕೂಡ ಪ್ರತಿಕ್ರಿಯಿಸಿದ್ದು,ಗೃಹ ಸಚಿವರ ನೇತೃತ್ವದಲ್ಲಿ ಸಮತಿ ಮಾಡಿದ್ದಾರೆ.ಪ್ರಿಯಾಂಕ್ ಖರ್ಗೆ, ಪಾಟೀಲ್ , ಸಂತೋಷ ಲಾಡ್,  ಕೃಷ್ಣ ಭೈರೇಗೌಡ ಇದ್ದಾರೆ.ಸುಮಾರು ೨೧ ಹಗರಣ ಕಳೆದ ಸರ್ಕಾರದಲ್ಲಿ ಆಗಿದೆ.ಹಗರಣಗಳ ತನಿಖೆ ಮಾಡಿ ಸಂಪುಟಕ್ಕೆ ವರದಿ ಸಲ್ಲಿಸಲು ಹೇಳಿದ್ದೀನಿ. ಎಲ್ಲದಕ್ಕೂ ತನಿಖೆಗೆ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ಕೋವಿಡ್ ೧೯, ೪೦% ಸೇರಿ ಹಲವು ಹಗರಣ ಅಷ್ಟೇ ತನಿಖೆ ಗೆ ಹೇಳಿದ್ದೀನಿ.ಯಾವ್ಯಾವ ಕೇಸ್ ಯಾವ್ಯಾವ ಹಂತದಲ್ಲಿ ಇದ್ದಾವೆ ಅನ್ನೋದನ್ಮ ನೋಡಲು ಶಿಫಾರಸು ಮಾಡಲು ಹೇಳಿದ್ದೀನಿ.ಅದಕ್ಕೆ ಸಮಿತಿ ಮಾಡಿದ್ದೀವಿ, ಅವರು ವರದಿ‌ಕೊಟ್ಟಮೇಲೆ ನಂತರ ಕ್ರಮಕೈಗೊಳ್ಳಲಿದ್ದಾರೆ.ಅದಕ್ಕಾಗಿ ತ್ವರಿತ ವಾಗಿ ಕೊಡಿ ಎಂದಿದ್ದೇವೆ.ಬಿಜೆಪಿಯವರು ನನ್ನ ಮೇಲೆ ರಾಜಕೀಯ ಮಾಡಿದ್ದಾರೆ.ದ್ವೇಷದ ರಾಜಕೀಯ ಮಾಡಲ್ಲ ನಾವು.ಹಿಂದೆಯೂ ಮಾಡಿಲ್ಲ ಈಗಲೂ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಕೂಡ ಈ ಬಗ್ಗೆ ರಿಯ್ಯಾಕ್ಟ್ ಮಾಡಿದ್ದು ತಡವಾದರೂ ಸಹ ಸರ್ಕಾರ ಈಗ ತೀರ್ಮಾನಕ್ಕೆ ಬಂದಿದ್ದು ಸ್ವಾಗತ.ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಕಾಲದ ಹಗರಣ ತನಿಖೆ ಮಾಡ್ತೇವೆ ಎಂದು ಹೇಳಿದ್ವಿ.ಈಗ ಸಮಿತಿಯವರು ಬೇಗ ತನಿಖೆ ಮಾಡಿ ವರದಿ ಕೊಡಲಿ.ಲೆಕ್ಕಪತ್ರ ಸಮಿತಿ ಮುಂದೆಯೂ ಕೆಲ ಪ್ರಕರಣಗಳಿವೆ.ಕೋವಿಡ್ ಸಂದರ್ಭದಲ್ಲಿ ಕರ್ನಾಟಕ ಮಾತ್ರವಲ್ಲ ಕೇಂದ್ರದಲ್ಲೂ ಕೆಲ ಲೋಪದೋಷಗಳು ಆಗಿವೆ.ಬಂದ ತಕ್ಷಣವೇ ಗ್ಯಾರಂಟಿ ಅನುಷ್ಠಾನ ಮಾಡುವುದರಲ್ಲಿ ಬ್ಯೂಸಿಯಾಗಿದ್ದರು.ನಾವು ಸುಮ್ಮನೆ ಇದ್ದಿದ್ದೆ ಬಿಜೆಪಿಗೆ ವರವಾಗಿದೆ ಎಂದಿದ್ದಾರೆ. ಇನ್ನು ರಾಹುಲ್ ಗಾಂಧಿಗೆ ಹಿರಿಯ ಪತ್ರದ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲರೂ ಸಹ ಹಿರಿಯರು.ಪತ್ರ ಬರೆಯುವ ಹಕ್ಕು ಅವರಿಗಿದೆ, ಅದರ ಬಗ್ಗೆ ನಾನು‌ ಮಾತಾಡಲ್ಲ.ಎಸ್.ಐಟಿ ತನಿಖೆಯಲ್ಲಿ ನಾಗೇಂದ್ರ ಹೆಸರು ಇರಲಿಲ್ಲ.ಇಡಿ ಜಾರ್ಜ್ ಶೀಟ್ ನಲ್ಲಿ ಹೆಸರಿದೆ.ಮೊದಲಿಂದಲೂ ಪ್ರತಿಪಕ್ಷಗಳ ವಿರುದ್ಧ ಇಡಿ ಬಳಸುತ್ತಿದ್ದಾರೆ.ವ್ಯಾಪಂ ದೊಡ್ಡ ಹಗರಣ ಆಗಿದೆ.ಮೊದಲು ಅದರ ತನಿಖೆ ಆಗಲಿ.ಆ ಮೇಲೆ ನಾಗೇಂದ್ರ ವಿರುದ್ಧ ಇಡಿ ತನಿಖೆ ಮಾಡಲಿ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ,