ಮನೆ Latest News ನಾಗೇಂದ್ರ ವಿರುದ್ಧ ED ಚಾರ್ಜ್ ಶೀಟ್ ಸಲ್ಲಿಕೆ ವಿಚಾರ: ಕಾಂಗ್ರೆಸ್ ಹಗರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ...

ನಾಗೇಂದ್ರ ವಿರುದ್ಧ ED ಚಾರ್ಜ್ ಶೀಟ್ ಸಲ್ಲಿಕೆ ವಿಚಾರ: ಕಾಂಗ್ರೆಸ್ ಹಗರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದ ಎಂಎಲ್ಸಿ ರವಿಕುಮಾರ್

0

ಬೆಂಗಳೂರು: ನಾಗೇಂದ್ರ ವಿರುದ್ಧ ED ಚಾರ್ಜ್ ಶೀಟ್ ಸಲ್ಲಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಎಂಎಲ್ಸಿ ರವಿಕುಮಾರ್  ಕಾಂಗ್ರೆಸ್ ಹಗರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ವ್ಯವಸ್ಥಿತವಾಗಿ ಹಗರಣ ಮುಚ್ಚಿಹಾಕುವ ಪ್ರಯತ್ನ ಮಾಡಿದೆ.ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಮುಚ್ಚಿಹಾಕಲು SIT ನಲ್ಲಿ ಅವರ ಹೆಸರೇ ಬಿಟ್ಟು ಕ್ಲೀನ್ ಚಿಟ್ ನಿಡೀದ್ದಾರೆ.ಇದು SIT ತನಿಖೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದೆ.ED ಕೂಡ ತನಿಖೆ ಮಾಡಿದೆ.ಅದರಲ್ಲಿ ನಾಗೇಂದ್ರ ಮೊದಲ ಆರೋಪಿ.ಗ್ಯಾರಂಟಿ ಕೊಟ್ಟಿದ್ದು ಸಿದ್ದರಾಮಯ್ಯ ಅವರು.ವಾಲ್ಮೀಕಿ ನಿಗಮದ ಹಗರಣ ಆಗಲು ಸಿಎಂ ಸಿದ್ದರಾಮಯ್ಯ ಕಾರಣ.ದಲಿತರ SCPTSP ಹಣ ವರ್ಗಾವಣೆ ಆಗಲು ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ರವಿಕುಮಾರ್ ಹೇಳಿದ್ದಾರೆ.

ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು.ನಾಗೇಂದ್ರಗೆ ಕೆಟ್ಟ ಹೆಸರು ತರೋದಲ್ಲ.ಸಿದ್ದರಾಮಯ್ಯ ಅವರೇ ನಂಬರ್ ಒನ್ ಅಪರಾಧಿ.ಅವರೇ ರಾಜೀನಾಮೆ ಕೊಡಬೇಕು ಎಂದಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ರಿಯ್ಯಾಕ್ಟ್ ಮಾಡಿದ್ದು ನಾನು ಕೋರ್ಟ್ ವಿಚಾರ ಮಾತನಾಡಲ್ಲ.ನಾಗೇಂದ್ರ ವಿಚಾರದಲ್ಲಿ ಇನ್ನೂ ತನಿಖೆ ನಡೀತಿದೆ. ಇಡಿ ಯವರು ಜಾರ್ಜ್ ಶೀಟ್ ಹಾಕಿದ್ದಾರೆ, ಎಸ್ ಐ ಟಿ ನವರು ಹಾಕಿದ್ದಾರೆ.ಅಲ್ಟಿಮೇಟ್ ಆಗಿ ಡಿಸಿಜೆನ್ ತೆಗೆದುಕೊಳ್ಳುವವರು ಯಾರು.ಕೋರ್ಟ್ ನಲ್ಲಿ ಎಲ್ಲವೂ ಪ್ರೂ ಆಗುತ್ತದೆ.ಎವಿಡೆನ್ಸ್ ಕಲೆಕ್ಟ್ ಮಾಡಿದ್ದಾರೆ.ಬಳಿಕ ಚಾರ್ಜ್ ಶೀಟ್ ಹಾಕಿದ್ದಾರೆ. ಸರಿಯೋ ತಪ್ಪೋ ಅಂತ ಹೇಳುವವರು ಯಾರು?ಕೋರ್ಟ್ ಅಲ್ವಾ..?ಯಾವ ಶಿಕ್ಷೆ ಕೋಡಬೇಕು ಎಂದು ಕೋರ್ಟ್ ನಿರ್ಧಾರ ಮಾಡುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಾಲ್ಮೀಕಿ ಹಗರಣ ಇಡಿ ಚಾರ್ಜ್ ಶೀಟ್ ವಿಚಾರ ; ದಲಿತರಿಗೆ ಅನ್ಯಾಯ ಮಾಡಿ ಹಣ ದುರ್ಬಳಕೆ ಮಾಡಿದ್ದಾರೆ ಎಂದ ಗೋವಿಂದ ಕಾರಜೋಳ

ವಾಲ್ಮೀಕಿ ಹಗರಣ ಇಡಿ ಚಾರ್ಜ್ ಶೀಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದು ದಲಿತರಿಗೆ ಅನ್ಯಾಯ ಮಾಡಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ದಲಿತರಿಗೆ ಅನ್ಯಾಯ ಮಾಡಿ ಆ ಹಣವನ್ನು ಚುನಾವಣೆಗೆ ಬಳಸಿದ್ದಾರೆ.ಯಾವ ಯಾವ ಬೂತ್ ಗೆ ಎಷ್ಟು ಹಣ ಹಂಚಿದ್ದಾರೆ ಎನ್ನೋದು ಸಿಕ್ಕಿದೆ.21 ಕೋಟಿ ಬಗ್ಗೆ ಸಂಪೂರ್ಣ ದಾಖಲೆ ಸಿಕ್ಕಿದೆ ಎಂದಿದ್ದಾರೆ.ಚುನಾವಣೆ ಆಯೋಗ ಹೇಳಿದ್ದಕ್ಕಿಂತ ಹೆಚ್ಚು ಚುನಾವಣೆಗೆ ಬಳಸಿದ್ದಾರೆ.ಇದಕ್ಕೆ ಕೇವಲ ನಾಗೇಂದ್ರ ಮಾತ್ರ ಅಲ್ಲ. ಸಿಎಂ ಸಿದ್ದರಾಮಯ್ಯ ನೈತಿಕತೆ ಹೊರಬೇಕು ಎಂದು ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.

ಇನ್ನು  ರಾಹುಲ್ ಗಾಂಧಿ ವಿಪಕ್ಷ ನಾಯಕ ಆಗಿದ್ದು ದುರ್ದೈವ ಎಂದ ಅವರು ರಾಹುಲ್ ವಿದೇಶಕ್ಕೆ ಹೋಗಿ ಮೀಸಲಾತಿ ಬಗ್ಗೆ ಮಾತಾಡಿದ್ದಾರೆ.ಒಂದು ವ್ಯವಸ್ಥೆ ಹೇಗಿದೆ ಎನ್ನೋದೆ ಅವರಿಗೆ ಗೊತ್ತಿಲ್ಲ. ಅವರೊಬ್ಬ ಅಪ್ರಬುದ್ಧ. ಮೀಸಲಾತಿ ಬಗ್ಗೆ ಮಾತಾಡುವ ಮುನ್ನ ಜಾತಿ ವ್ಯವಸ್ಥೆ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.ಮೀಸಲಾತಿ ಸಂವಿಧಾನ ನೀಡಿದ ಒಂದು ವ್ಯವಸ್ಥೆ.ವಿದೇಶಕ್ಕೆ ಹೋಗಿ ಚೀನಾದಲ್ಲಿ ಜಾಬ್ ಸಿಗುತ್ತದೆ. ಭಾರತದಲ್ಲಿ ಇಲ್ಲ ಎನ್ನುತ್ತಾರೆ.ಇವರು ಯಾರ ಪರ ಇದ್ದಾರೆ?೧೪೦ ಕೋಟಿ ಜನರಿಗೆ ರಾಹುಲ್ ಯಾರ ಪರ ಎನ್ನುವ ಪ್ರಶ್ನೆ ಮೂಡಿದೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.