ಬೆಂಗಳೂರು; ನಾಳೆ ಹಾಗೂ ನಾಡಿದ್ದು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ರವಿ ಕುಮಾರ್ ಹೇಳಿಕೆ ನೀಡಿದ್ದಾರೆ.ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿ ಹೋರಾಟ ಮಾಡಲಾಗುತ್ತದೆ ಎಂದು ರವಿಕುಮಾರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಮೀಸಲಾತಿ ಬಂದ್ ಮಾಡುತ್ತೇವೆ ಎಂದು ವಿದೇಶದಲ್ಲಿ ನೀಡಿದ ಹೇಳಿಕೆಗೆ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಮೀಸಲಾತಿ ಕಾಂಗ್ರೆಸ್ ಭಿಕ್ಷೆ ಅಲ್ಲ.ಮೀಸಲಾತಿ ದಲಿತರ ಬರ್ತ್ ರೈಟ್ಸ್ ಎಂದು ರವಿಕುಮಾರ್ ಅವರು ಹೇಳಿದ್ದಾರೆ.ಅಂಬೇಡ್ಕರ್ ಬದುಕಿದ್ದಾಗ ಅವರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್.ಈಗ ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಅಂಶವನ್ನೇ ಇಲ್ಲವಾಗಿಸಲು ಹೊರಟಿದ್ದಾರೆ.ನಾವು ಮೀಸಲಾತಿ ರದ್ದು ಮಾಡಿ ಸಮಾನತೆ ತರ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.ಅದು ಸಾಧ್ಯವಿಲ್ಲ ಎಂದು ರವಿಕುಮಾರ್ ಹೇಳಿದ್ದಾರೆ.
ನಮ್ಮ ದೇಶದ ಪಾರ್ಲಿಮೆಂಟಿನ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೇರಿಕಾಗೆ ಹೋಗಿದ್ದಾರೆ.ಅಲ್ಲಿ ಭಾಷಣ ಮಾಡ್ತಾ ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಮೀಸಲಾತಿ ನಿಲ್ಲಿಸ್ತೇವೆ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ.ರಿಸರ್ವೇಷನ್ ಬಗ್ಗೆ ಯಾವ ರೀತಿ ಆಕ್ರೋಶ ಇದೆ, ವಿರೋಧ ಇದೆ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.ಸಮಾನತೆ ಬರಬೇಕಾದರೆ ರಿಸರ್ವೇಷನ್ ನಿಲ್ಲಿಸೋದಾಗಿ ಹೇಳಿದ್ದಾರೆ.ರಾಹುಲ್ ಗಾಂಧಿ ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಸಂವಿಧಾನದ ಪುಸ್ತಕ ತೋರಿಸ್ತಾ ಓಡಾಡ್ತಿದ್ರು.ಅದೇ ಸಂವಿಧಾನದಲ್ಲಿ ಅಂಬೇಡ್ಕರ್ ದಲಿತರಿಗೆ ಮೀಸಲಾತಿ ಬಗ್ಗೆ ಹೇಳಿದ್ದಾರೆ.ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕು.ಖರ್ಗೆ ಅವರಿಗೆ, ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡ್ತೀನಿ.ಸಂವಿಧಾನ ರಕ್ಷಣೆ ಮಾಡ್ತೀನಿ, ಮೀಸಲಾತಿ ಉಳಿಸ್ತೀನಿ ಅಂದ್ರಲ್ಲಾ ಇದೇನಾ.?ಎಂದು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಶ್ನೆ ಮಾಡಿದ್ದಾರೆ.
SC, ST ಗಳನ್ನ ರಕ್ಷಣೆ ಮಾಡಬೇಕು, ಸಂವಿಧಾನ ಉಳಿಸಬೇಕು ಅಂತಿದ್ರಲ್ಲ.ರಾಹುಲ್ ಗಾಂಧಿ ರಿಸರ್ವೇಷನ್ ನಿಲ್ಲಿಸ್ತೀವಿ ಅಂತ ಹೇಳಿದ್ದಾರೆ.ನಾಳೆ ಮತ್ತು ನಾಡಿದ್ದು ರಾಜ್ಯದಲ್ಲಿ ರಾಹುಲ್ ಗಾಂಧಿ ಪ್ರತಿಕೃತಿ ದಹನ ಮಾಡ್ತೀವಿ.ಅಂಬೇಡ್ಕರ್ ಸೋಲಿಸಿದ್ದು ಇದೇ ಕಾಂಗ್ರೆಸ್.ದಲಿತರ ಬದುಕಿನ ಮೀಸಲಾತಿಗೆ ಕೊಡಲಿ ಪೆಟ್ಟು ಹಾಕಲು ಹೊರಟಿದ್ದಾರೆ.ದೇಶದಲ್ಲಿ ರಿಸರ್ವೇಷನ್ ಅನ್ನೋದು SC, STಗಳು ಹುಟ್ಟುತ್ತಲೇ ಬಂದಿರೋ ಹಕ್ಕು.ದಲಿತರು ಮನುಷ್ಯರ ರೀತಿಯಲ್ಲಿ ಬದುಕಬೇಕು ಅಂತ ಸಂವಿಧಾನದಲ್ಲೇ ಬರೆದ್ರು.ನೆಹರು ಅವರು 1955ರಲ್ಲಿ ಕಾಕಾ ಕಾಲೇಕರ್ ವರದಿ ಮಂಡನೆ ಆದಾಗ ರಿಸರ್ವೇಷನ್ ವಿರೋಧಿಸಿದ್ರು.ಮಂಡಲ್ ಕಮೀಷನ್ ವರದಿಯನ್ನ ರಾಜೀವ್ ಗಾಂಧಿ ಅವರೂ ವಿರೋಧಿಸಿದ್ರು.ಸಂವಿಧಾನದಲ್ಲಿ ರಿಸರ್ವೇಷನ್ ಕೊಡೋದನ್ನ ಕಾಂಗ್ರೆಸ್ ಸಹಿಸುತ್ತಿಲ್ಲ.ಆರು ಅಮೇಂಡ್‌ಮೆಂಟ್ ತಂದಿದ್ದು ಕಾಂಗ್ರೆಸ್, ಆ ಮೂಲಕ ಅವಮಾನ ಮಾಡಿದ್ದಾರೆ.SC, ST ಗಳಿಗೆ ಗೌರವ ಕೊಡಬೇಕು, ಅವರ ಹಕ್ಕು ರಕ್ಷಣೆ ಮಾಡಬೇಕು ಎಂದಿದ್ದಾರೆ.
ಇನ್ನು ವಾಲ್ಮೀಕಿ ಹಗರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು SCPTSP ಹಣ ವರ್ಗಾವಣೆ ಮಾಡಿದ್ದಾರೆ.ವಾಲ್ಮೀಕಿ ನಿಗಮದ ಹಣ ಕೊಳ್ಳೆ ಹೊಡೆದಿದ್ದಾರೆ.ಇದು ಕಾಂಗ್ರೆಸ್ ನಾಯಕರ ಬ್ಲಡ್ಡಲ್ಲೇ ದಲಿತ ವಿರೋಧಿತನ ಇದೆ.ಇದನ್ನ ವಿರೋಧಿಸಿ, ನಾಳೆ ನಾಡಿದ್ದು ರಾಹುಲ್ ಗಾಂಧಿ ಪ್ರತಿಕೃತಿ ದಹನ ಮಾಡಲಿದ್ದೇವೆ ಎಂದಿದ್ದಾರೆ.
ವಾಲ್ಮೀಕಿ ಹಗರಣ ಇಡಿ ಚಾರ್ಜ್ ಶೀಟ್ ವಿಚಾರ ; ದಲಿತರಿಗೆ ಅನ್ಯಾಯ ಮಾಡಿ ಹಣ ದುರ್ಬಳಕೆ ಮಾಡಿದ್ದಾರೆ ಎಂದ ಗೋವಿಂದ ಕಾರಜೋಳ
ವಾಲ್ಮೀಕಿ ಹಗರಣ ಇಡಿ ಚಾರ್ಜ್ ಶೀಟ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದು ದಲಿತರಿಗೆ ಅನ್ಯಾಯ ಮಾಡಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ದಲಿತರಿಗೆ ಅನ್ಯಾಯ ಮಾಡಿ ಆ ಹಣವನ್ನು ಚುನಾವಣೆಗೆ ಬಳಸಿದ್ದಾರೆ.ಯಾವ ಯಾವ ಬೂತ್ ಗೆ ಎಷ್ಟು ಹಣ ಹಂಚಿದ್ದಾರೆ ಎನ್ನೋದು ಸಿಕ್ಕಿದೆ.21 ಕೋಟಿ ಬಗ್ಗೆ ಸಂಪೂರ್ಣ ದಾಖಲೆ ಸಿಕ್ಕಿದೆ ಎಂದಿದ್ದಾರೆ.ಚುನಾವಣೆ ಆಯೋಗ ಹೇಳಿದ್ದಕ್ಕಿಂತ ಹೆಚ್ಚು ಚುನಾವಣೆಗೆ ಬಳಸಿದ್ದಾರೆ.ಇದಕ್ಕೆ ಕೇವಲ ನಾಗೇಂದ್ರ ಮಾತ್ರ ಅಲ್ಲ. ಸಿಎಂ ಸಿದ್ದರಾಮಯ್ಯ ನೈತಿಕತೆ ಹೊರಬೇಕು ಎಂದು ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ಇನ್ನು ರಾಹುಲ್ ಗಾಂಧಿ ವಿಪಕ್ಷ ನಾಯಕ ಆಗಿದ್ದು ದುರ್ದೈವ ಎಂದ ಅವರು ರಾಹುಲ್ ವಿದೇಶಕ್ಕೆ ಹೋಗಿ ಮೀಸಲಾತಿ ಬಗ್ಗೆ ಮಾತಾಡಿದ್ದಾರೆ.ಒಂದು ವ್ಯವಸ್ಥೆ ಹೇಗಿದೆ ಎನ್ನೋದೆ ಅವರಿಗೆ ಗೊತ್ತಿಲ್ಲ. ಅವರೊಬ್ಬ ಅಪ್ರಬುದ್ಧ. ಮೀಸಲಾತಿ ಬಗ್ಗೆ ಮಾತಾಡುವ ಮುನ್ನ ಜಾತಿ ವ್ಯವಸ್ಥೆ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.ಮೀಸಲಾತಿ ಸಂವಿಧಾನ ನೀಡಿದ ಒಂದು ವ್ಯವಸ್ಥೆ.ವಿದೇಶಕ್ಕೆ ಹೋಗಿ ಚೀನಾದಲ್ಲಿ ಜಾಬ್ ಸಿಗುತ್ತದೆ. ಭಾರತದಲ್ಲಿ ಇಲ್ಲ ಎನ್ನುತ್ತಾರೆ.ಇವರು ಯಾರ ಪರ ಇದ್ದಾರೆ?೧೪೦ ಕೋಟಿ ಜನರಿಗೆ ರಾಹುಲ್ ಯಾರ ಪರ ಎನ್ನುವ ಪ್ರಶ್ನೆ ಮೂಡಿದೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.