ಮನೆ Latest News ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸ್ಯಾಂಡಲ್ ವುಡ್ ನಿರ್ಮಾಪಕ ಸಂಘದ ನಿಯೋಗ

ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸ್ಯಾಂಡಲ್ ವುಡ್ ನಿರ್ಮಾಪಕ ಸಂಘದ ನಿಯೋಗ

0

ಬೆಂಗಳೂರು; ಸ್ಯಾಂಡಲ್ ವುಡ್ ನಿರ್ಮಾಪಕ ಸಂಘದ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು. ಸಾರಾ ಗೋವಿಂದ್ ನೇತೃತ್ವದ ಸ್ಯಾಂಡಲ್ ವುಡ್ ನಿರ್ಮಾಪಕ ಸಂಘದ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿತು.

ಭೇಟಿ ಬಳಿಕ ಮಾತನಾಡಿದ ಸಾರಾ ಗೋವಿಂದ್ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಸಮಸ್ಯೆ ಇವೆ.ಇನ್ನು ನಿರ್ಮಾಪಕ ಸಂಘದ ಹೊಸ ಕಟ್ಟಡ ಉದ್ಘಾಟನೆ ಆಗಬೇಕಿದೆ.ಅದರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡಿದ್ವಿ.ಅದನ್ನ ನೆನಪಿಸೋದಕ್ಕೆ ಅಂತ ಬಂದು ಭೇಟಿ ಮಾಡಿದ್ದೇವೆ.ಅಷ್ಟು ಬಿಟ್ಟರೇ ಬೇರೇನು ಇಲ್ಲ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಫೈರ್ ನಿಯೋಗ ಮನವಿ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಯಾವ ಫೈರ್ ರೀ? ಏನಿದೆ ಕನ್ನಡ ಇಂಡಸ್ಟ್ರಿ ನಲ್ಲಿ?ಇಲ್ಲಿ ಆ ರೀತಿ ಯಾವುದೇ ಘಟನೆ ಆಗಿಲ್ಲ.ಏನಾದ್ರೂ ಇದ್ರೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಮಸ್ಯೆ ಹೇಳಬಹುದು.ಇಂತಹ ನೂರಾರು ಸಮಸ್ಯೆ ಬಗೆಹರಿಸಿದ್ದೀವಿ.ನಮಗೂ ಫೈರ್ ಗೂ ಸಂಬಂಧ ಇಲ್ಲ.ಈಗಾಗಲೇ ಮಹಿಳಾ ಆಯೋಗದ ಅಧ್ಯಕ್ಷರು ನಮ್ಮ ಮಂಡಳಿ ಅಧ್ಯಕ್ಷರ ಜೊತೆ ಸಂಪರ್ಕ ಮಾಡಿ ಸಭೆ ಕರೆದಿದ್ದಾರೆ. ಇದೇ ೧೬ ರಂದು ಸಭೆ ಆಗುತ್ತೆ.ಅಲ್ಲಿ ಏನ್ ತೀರ್ಮಾನ ತೆಗೆದುಕೊಳ್ಳುತ್ತೇವೆ ಅದನ್ನ ಹೇಳುತ್ತೇವೆ.ಇನ್ನೂ ಕೆಲ ನಟ, ನಟಿಯರು ಸಹಿ ಹಾಕಿಲ್ಲ, ಕೆಲವರು ಹೇಳಿದ್ದಾರೆ ಅಷ್ಟೇ.ಯಾರೂ ಕೂಡ ನಮ್ಮ ಮಂಡಳಿ ಬಿಟ್ಟು ಹೋಗಲ್ಲ.ಈ ವಿಚಾರಕ್ಕೆ ನಾವು ಸಿಎಂ ಭೇಟಿ ಮಾಡಿಲ್ಲ.ಸುಮ್ಮನೇ ವಿಷ್ಯ ಬಂದಾಗ ಕೇಳಿದರು ಎಂದಿದ್ದಾರೆ.

ಇನ್ನುವಾಣಿಜ್ಯ ಮಂಡಳಿ ಉಂಟು, ಅದರ ಮುಖಾಂತರ ಬರಬೇಕು ಅಂತಾರೆ.ಮುಂದಿನ ದಿನಗಳಲ್ಲಿ ಸಭೆ ನಂತ್ರ ಎಲ್ಲವೂ ಬಗೆಹರಿಯುತ್ತದೆ.ನಮ್ಮ ಮೀಟು ಅಂತಹದ್ದು ಏನೂ ಇಲ್ಲ.ಯಾರೂ ಕೂಡ ಚಿತ್ರ ಮಾಡದೇ ಇರೋರು ಅಲ್ಲಿ ಇರೋದು ಎಂದು ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಸಾರಾ ಗೋವಿಂದ್ ಹೇಳಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಫೈಯರ್ ನಿಯೋಗ

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರನ್ನು ಫೈಯರ್ ನಿಯೋಗ ಭೇಟಿ ಮಾಡಿತು. ಕಾವೇರಿ ನಿವಾಸದಲ್ಲಿ ಫೈಯರ್  ಸದಸ್ಯರು ಭೇಟಿ ಮಾಡಿದ್ರು.ಆ ದಿನಗಳು ಸಿನಿಮಾ ಖ್ಯಾತಿಯ ಚೇತನ್, ಶೃತಿ ಹರಿಹರನ್ ಸೇರಿದಂತೆ ನಾಲ್ಕು ಜನರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು. ಕೇರಳದ ಹೇಮಾ ಕಮಿಟಿ ಮಾದರಿ ಕರ್ನಾಟದಲ್ಲೂ ಕಮಿಟಿ ರಚಿಸುವಂತೆ ನಿಯೋಗ ಮನವಿ ಮಾಡಿದೆ.

ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆ ತಡೆಗಟ್ಟುವ ಸಲುವಾಗಿ ಕಮಿಟಿ ರಚನೆಗೆ ನಿಯೋಗ ಒತ್ತಾಯಿಸಿದೆ.ಈಗಾಗಲೇ 153 ಜನ ಸಹಿ ಮಾಡಿರುವ ಪತ್ರ ಸರ್ಕಾರಕ್ಕೆ ತಲುಪಿಸಲಾಗಿದೆ.ಇನ್ನು ನಿಯೋಗ ಭೇಟಿ ಮಾಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈಗ ಮನವಿ ಕೊಟ್ಟಿದ್ದಾರೆ.ಕೇರಳದಲ್ಲಿ ಆಗಿರುವ ರೀತಿ ಇಲ್ಲಿ ಆಗಿದೆ ಅಂತ ಹೇಳಿದ್ದಾರೆ.ಕಮಿಷನ್ ಮಾಡೋಕೆ ಮನವಿ ಮಾಡಿದ್ದಾರೆ.ಮನವಿಯನ್ನು ಪರಿಶೀಲನೆ ಮಾಡ್ತೀನಿ ಅಂತಾ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ರಾಜ್ಯದಲ್ಲೂ ಪ್ರತಿಧ್ವನಿಸುತ್ತಿರುವ ಹೇಮಾ ಕಮಿಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.ಕೇರಳದ ಹೇಮಾ ಕಮಿಟಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.ದೇಶದಲ್ಲಿ ಮಹಿಳೆಯರು ಶೇ.೫೦ರಷ್ಟು ಇದ್ದೇವೆ.ಪ್ರಧಾನಿ ಮೋದಿ ಭೇಟಿ ಬಚಾವೋ ಬೇಟಿ ಪಡಾವೋ ಅಂತಾರೆ.ಮಹಿಳೆಯರ ಮೇಲೆ ಎಷ್ಟು ದೌರ್ಜನ್ಯ ಆಗುತ್ತಿದೆ..?.ಇಡೀ ದೇಶದಲ್ಲೂ ದೌರ್ಜನ್ಯ ಹೆಚ್ಚಾಗುತ್ತಿದೆ.ಇದನ್ನ ಮೊದಲು ನಿಲ್ಲಿಸಬೇಕು, ನಮಗೂ ಸಮಾನತೆ ಬೇಕು ಎಂದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಯಾವುದೇ ಕ್ಷೇತ್ರ ಆಗಲಿ ಮಹಿಳೆಯರಿಗೆ ದೌರ್ಜನ್ಯ ಆಗಬಾರದು.ಸರ್ಕಾರ ಮಹಿಳೆಯರ ಸುರಕ್ಷಿತೆ ಬಗ್ಗೆ ಕಾಳಜಿ ವಹಿಸುತ್ತೆ.ಏನಾದ್ರೂ ಆದರೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ.ಕಮಿಟಿ ರಚನೆಗೆ ಸಿಎಂ ಸಿದ್ದರಮಾಯ್ಯ ಅವರನ್ನು ಭೇಟಿ ಮಾಡಿದ್ದಾರೆ.ಸಿಎಂ ಸಿದ್ದರಾಮಯ್ಯ ಸಹ ಅವರಿಗೆ ಸ್ಪಂದನೆ ನೀಡಿದ್ದಾರೆ ಎಂದರು.

ಇನ್ನು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯರನ್ನ ನಟಿ ಸಂಜನಾ ಭೇಟಿಯಾಗಿದ್ದಾರೆ. ಈ ವೇಳೆ ರಾಜ್ಯದಲ್ಲೂ ಕೇರಳ ಮಾದರಿಯಲ್ಲಿ  ಲೈಂಗಿಕ ದೌರ್ಜನ್ಯಗಳ ತನಿಖೆಗೆ ಸಮಿತಿ ರಚನೆಗೆ ಒತ್ತಾಯಿಸಿದ್ದಾರೆ.