ಮನೆ ಪ್ರಸ್ತುತ ವಿದ್ಯಮಾನ ಆಂಟಿ ಟೆರರಿಸ್ಟ್ ತನಿಖೆ ಮಾಡಲು ಈ ಸರ್ಕಾರ ಬಿಡ್ತಿಲ್ಲ;ಬಿಜೆಪಿ ವಕ್ತಾರ ಭಾಸ್ಕರ್ ರಾವ್ ಸುದ್ದಿಗೋಷ್ಟಿಯಲ್ಲಿ ಹೇಳಿಕೆ

ಆಂಟಿ ಟೆರರಿಸ್ಟ್ ತನಿಖೆ ಮಾಡಲು ಈ ಸರ್ಕಾರ ಬಿಡ್ತಿಲ್ಲ;ಬಿಜೆಪಿ ವಕ್ತಾರ ಭಾಸ್ಕರ್ ರಾವ್ ಸುದ್ದಿಗೋಷ್ಟಿಯಲ್ಲಿ ಹೇಳಿಕೆ

0

ಬೆಂಗಳೂರು; ಆಂಟಿ ಟೆರರಿಸ್ಟ್ ತನಿಖೆ ಮಾಡಲು ಈ ಸರ್ಕಾರ ಬಿಡ್ತಿಲ್ಲ ಎಂದು ಬಿಜೆಪಿ ವಕ್ತಾರ ಭಾಸ್ಕರ್ ರಾವ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ನಿನ್ನೆ ರಾತ್ರಿ ಗಂಭೀರವಾದ ಸೂಚನೆ ಪ್ರಕಟ ಆಗಿದೆ.NIA ಟೆರರಿಸ್ಟ್ ಬಗ್ಗೆ ಇನ್ವೆಸ್ಟಿಗೇಷನ್ ಮಾಡಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.ಅದರಲ್ಲಿ ಬಿಜೆಪಿ ಕಚೇರಿ ಬ್ಲಾಸ್ಟ್ ಮಾಡುವ ಉದ್ದೇಶ ಇತ್ತು ಅನ್ನೋದು ಗೊತ್ತಾಗಿದೆ.ಅದು ಸಾಧ್ಯವಾಗದೇ ಇದ್ದಾಗ ರಾಮೇಶ್ವರ ಕೆಫೆಗೆ ಹೋಗಿ ಬ್ಲಾಸ್ಟ್ ಮಾಡಿದ್ರು ಅಂತಿದೆ.ಒಂದು ರಾಷ್ಟ್ರೀಯ ಪಕ್ಷದ ಕಚೇರಿಗೆ ಭದ್ರತೆ ನೀಡದೆ, ಸರ್ಕಾರ ವೈಫಲ್ಯ ಆಗಿದೆ.ಇದು ಸಿಎಂ‌ ಹಾಗೂ ಗೃಹಸಚಿವರಿಗೆ ಬರುತ್ತೆ.ಸಿಟಿಯಲ್ಲಿ ಆಂಟಿ ಟೆರರಿಸ್ಟ್ ಇಂಟಲಿಜೆನ್ಸ್ ಇದೆ.ಯಡಿಯೂರಪ್ಪ ಅವರು ಸಿಎಂ‌ ಆಗಿದ್ದಾಗ, ನಾನು ಕಮೀಷನರ್ ಆಗಿದ್ದಾಗ ಈ ಇಂಟಲಿಜೆನ್ಸ್ ಮಾಡಿದ್ದೆ.ಆಂಟಿ ಟೆರರಿಸಂ ಅಲ್ಲೇ ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.

ಈ ಸರ್ಕಾರ ಬಂದು 14 ತಿಂಗಳಾದ್ರೂ ರಿವ್ಯೂ ಮಾಡಿಲ್ಲ.ಹಾಗಾಗಿ NIA ಪದೇಪದೇ ಬಂದು ರೇಡ್ ಮಾಡಿ, ಅರೆಸ್ಟ್ ಕೂಡ ಮಾಡ್ತಿದೆ.ಆಂಟಿ ಟೆರರಿಸ್ಟ್ ತನಿಖೆ ಮಾಡಲು ಈ ಸರ್ಕಾರ ಬಿಡ್ತಿಲ್ಲ.ಸಿಸಿಬಿ ಕಡೆಯಿಂದ ಮಾಡಿಸ್ತಿದ್ದಾರೆ.ಕರೆಪ್ಷನ್ ಹಾಗೂ ಮನಿ ಇರೋವರೆಗೂ ಹೋಮ್ ಡಿಪಾರ್ಟ್‌ಮೆಂಟ್ ಎಂಬಂತಾಗಿದೆ. ನಾನು ಇಲಾಖೆ ಮೇಲೆ ಆರೋಪ ಮಾಡ್ತಿಲ್ಲ.ಇಲಾಖೆಯ ಇನ್ಫ್ರಾಸ್ಟ್ರಕ್ಚರ್ ಬಗ್ಗೆ ಮಾತಾಡ್ತಿದ್ದೇನೆ.ನಾನು ಡಿಪಾರ್ಟ್‌ಮೆಂಟ್ ಇದ್ದವನು.ISD ಯನ್ನ ಯಾಕೆ ಸರಿಯಾಗಿ ರಿವ್ಯೂ ಮಾಡ್ತಿಲ್ಲ.ಸಿಸಿಬಿ ಇರೋದೇ ವಸೂಲಿ ಮಾಡೋಕೆ.ನಾನು ಬರೋಕೆ ಮೊದಲು, ಇದ್ದಾಗ, ನಂತರ ಬರೀ ವಸೂಲಿ ಮಾಡಿಕೊಂಡೇ ಇದ್ದಾರೆ.ಕೋಟ್ಯಾಂತರ ಕೊಟ್ಟು ಸಿಸಿಬಿಗೆ ಯಾಕೆ ಪೋಸ್ಟಿಂಗ್ ಹೋಗ್ತಾರೆ.?ಜನ ಸಾಮಾನ್ಯರಿಗೆ ಸಿಸಿಬಿ ಇಂದ ನ್ಯಾಯ ಸಿಗ್ತಿದೆಯಾ.?ಸಿಸಿಬಿ ಇಂದಲೇ ಹೆಚ್ಚು ಕ್ರೈಮ್ ಆಗ್ತಿದೆ.ಹೆಚ್ಚು ಕ್ರೈಮ್ ಮಾಡೋವ್ರಿಂದ ವಸೂಲಿ ಮಾಡ್ತಿರೋದ್ರಿಂದಲೇ ಕ್ರೈಮ್ ಹೆಚ್ಚಾಗ್ತಿದೆ.ಸಿಸಿಬಿ ಮುಚ್ಚೋದ್ರಿಂದ ಬೆಂಗಳೂರು ಸೇಫ್ ಆಗುತ್ತೆ. ಎಂದಿದ್ದಾರೆ.

ಇನ್ನು ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ಮಾತನಾಡಿ ರಿಪೋರ್ಟ್‌‌ನಲ್ಲಿ ಬಿಜೆಪಿ ಕಚೇರಿ ಜಗನ್ನಾಥ ಭವನ ಬ್ಲಾಸ್ಟ್ ಮಾಡಬೇಕು ಅಂದು ಕೊಂಡಿತ್ತು ಅನ್ನೋದು ಗೊತ್ತಾಗಿದೆ.ಇದು ಎರಡನೇ ಬಾರಿ ಟಾರ್ಗೆಟ್ ಮಾಡಿದ್ದಾರೆ.ಮೊದಲು ಬ್ಲಾಸ್ಟ್ ಆದಾಗ ಯಾರಿಗೂ ಸಮಸ್ಯೆ ಆಗಿರಲಿಲ್ಲ.ಆದ್ರೆ ಈಗ ಇಲ್ಲಿ ಆಗದೆ, ರಾಮೇಶ್ವರ ಕೆಫೆಗೆ ಬಾಂಬ್ ಇಟ್ಟಿದ್ದಾರೆ.ಗೃಹ ಇಲಾಖೆ ವೈಫಲ್ಯ ಆಗಿದೆ.ಪೊಲೀಸರು ಏನು ಮಾಡ್ತಿದ್ದಾರೆ.?ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗ್ತಾರೆ.ಭಯೋತ್ಪಾದಕರನ್ನ ಮೈ ಬ್ರದರ್ಸ್‌ ಅಂತಾರೆ.ಕುಕ್ಕರ್ ಬ್ಲಾಸ್ಟ್ ಮಾಡೋರು ಶಿವಮೊಗ್ಗ, ಭಟ್ಕಳ, ಕರ್ನಾಟಕದಲ್ಲಿ ಸಿಗ್ತಾರೆ.ಅವರನ್ನ ರಕ್ಷಣೆ ಮಾಡುವ, ಫಂಡ್ ಮಾಡುವ ಕೆಲಸ ಮಾಡ್ತಿದ್ದಾರೆ.ಭಯೋತ್ಪಾದಕರಿಗೆ, PFIಗೆ ಭಯ ಇಲ್ಲದಂತಾಗಿದೆ.ಸರಿಯಾಗಿ ಆಡಳಿತ ಮಾಡಲಾಗದಿದ್ರೆ ರಾಜೀನಾಮೆ ಕೊಟ್ಟು ಹೋಗಿ . ಇದು ಗೃಹ ಇಲಾಖೆಯ ಫೇಲ್ಯೂರ್ ಎಂದಿದ್ದಾರೆ.

ಬಿಜೆಪಿ ನಾಯಕರ ಆರೋಪಕ್ಕೆ ಗೃಹ ಸಚಿವ ಪರಮೇಶ್ವರ್ ತಿರುಗೇಟು ಕೊಟ್ಟಿದ್ದಾರೆ.ನಾನು ಕಾಮೆಂಟ್ ಮಾಡೋದು ಸಮಂಜಸ ಅಲ್ಲವೇನೋ.ಅವರೇ ADGP ಆಗಿದ್ರು.ಅವರ ಕಾಲದಲ್ಲಿ ಏನು ಆಗಿತ್ತು ಅಂತ ಹೇಳಬೇಕಾ.?ಒಟ್ಟಾರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ.ರಾಷ್ಟ್ರೀಯ ಹಂತದ ವಿಚಾರದಲ್ಲೂ ಕಠಿಣ ಕ್ರಮ ಕೈಗೊಂಡಿದ್ದೇವೆ.ರಾಮೇಶ್ವರ ಕೆಫೆಗೆ ತಕ್ಷಣವೇ ಕರ್ನಾಟಕ ಪೊಲೀಸರು ಅವನನ್ನ ಟ್ರಾಕ್ ಮಾಡಿದ್ದೆವು.ಬಳಿಕ NIA ಎಂಟ್ರಿ ಆಯ್ತು‌.ಕರ್ನಾಟಕ ಪೊಲೀಸರು ಕೊಟ್ಟ ಮಾಹಿತಿ ಪಡೆದು, NIA ಪಶ್ಚಿಮ ಬಂಗಾಳಕ್ಕೆ ಹೋದ್ರು ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಹೇಳಿದ್ದಾರೆ