ಮನೆ Blog ಈಡೇರಿತು ದರ್ಶನ್ ಬಹು ದಿನಗಳ ಬೇಡಿಕೆ: ಡಿ ಬಾಸ್ ಸೆಲ್ ಗೆ ಬಂತು ಟಿವಿ

ಈಡೇರಿತು ದರ್ಶನ್ ಬಹು ದಿನಗಳ ಬೇಡಿಕೆ: ಡಿ ಬಾಸ್ ಸೆಲ್ ಗೆ ಬಂತು ಟಿವಿ

0

ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜನಂತಿದ್ದ ನಟ ದರ್ಶನ್ ಗೆ ಬಳ್ಳಾರ ಜೈಲನ ಅಕ್ಷರಶಃ ನರಕವಾಗಿದೆ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳೋಕೆಲ ಪರದಾಡುತ್ತಿದ್ದಾರೆ. ಜೈಲು ಸೇರಿದಾಗಿನಿಂದ ಡಿ ಬಾಸ್ ಹಿಂಸೆ ಅನುಭವಿಸುತ್ತಿದ್ದಾರೆ. ಇನ್ನು ದರ್ಶನ್ ಜೈಲು ಅಧಿಕಾರಿಗಳ ಬಳಿ ಆರಂಭದಲ್ಲೇ ಬೇಡಿಕೆ ಇಟ್ಟಿದ್ದರು. ತನ್ನ ಸೆಲ್ ಗೆ ಹೇವಿ ಭದ್ರತಾ ಇರೋ ಕಾರಣ ಹೊರ ಜಗತ್ತಿನಲ್ಲಿ ದರ್ಶನ  ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಐದು ದಿನಗಳ ಹಿಂದೆ ಸೆಲ್ ಸೇರುತ್ತಿದ್ದಂತೆ ಸೆಲ್ ನಲ್ಲಿ ಟಿವಿ ಹಾಕುವಂತೆ ಬೇಡಿಕೆ ಇಟ್ಟಿದ್ದರು ದರ್ಶನ್. ಇದೀಗ ಆ ಬೇಡಿಕೆ ಈಡೇರಿದೆ.

ಸರ್ಜಿಕಲ್ ಚೇರ್, ಪೋನ್ ಕಾಲ್ ಬಳಿಕ ಟಿವಿ ವ್ಯವಸ್ಥೆ ದರ್ಶನ್ ನೀಡಲಾಗಿದೆ.ಜಾರ್ಜ್ಶೀಟ್  ಸಲ್ಲಿಕೆ ಸೇರಿದಂತೆ ಹೊರ ಜಗತ್ತಿನ ವಿಷಯ ತಿಳಿದುಕೊಳ್ಳವ ಕುತೂಹಲ ಹಿನ್ನೆಲೆ.ಗಳವಾರ ಟಿವಿ‌ ನೀಡಬೇಕೆಂದು ಮನವಿ ಮಾಡಿದ್ದಾರೆ ದರ್ಶನ್.ಜೈಲು ನಿಯಮದ ಪ್ರಕಾರ ಟಿವಿ ನೀಡಬಹುದು.. .ದರೆ ಟಿವಿ ರಿಪೇರಿ ಇದ್ದ ಹಿನ್ನೆಲೆ ಈವರೆಗೂ ನೀಡಿರಲಿಲ್ಲ..ಇದು ದರ್ಶನ್ ಗೆ ಟಿವಿ ಲಭ್ಯ..ಹೈಯರ್ ಕಂಪನಿ, 32 ಇಂಚಿನ ಟಿವಿ ದರ್ಶನ್ ಇರುವ ಸೆಲ್‌ನಲ್ಲಿ ಹಾಲಾಗಿದೆ.

ಇದರ ಮಧ್ಯೆ ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ದರ್ಶನ್‌ಗೆ ತಣ್ಣೀರು ಸ್ನಾನವೇ ಗತಿ. ಎಂಬಂತಾಗಿದೆ.ನಿತ್ಯ ತಣ್ಣೀರು ಸ್ನಾನ ಮಾಡುತ್ತಿದ್ದಾರೆ ದರ್ಶನ್.ಸಿನೀರಿನ ಅವಕಾಶ ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ಇಲ್ಲ..9 ದಿನಗಳಿಂದ ಜೈಲ್‌ನಲ್ಲಿ ತಣ್ಣೀರು ಸ್ನಾನ..ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಜೈಲಿನ ವಾಸ್ತವತೆ ಬದಲಾಗಿದೆ.

 

ಚಾರ್ಜ್ ಶೀಟ್ ನಲ್ಲಿ ರೇಣುಕಾಸ್ವಾಮಿ ವಿರುದ್ಧ ಡಿ ಗ್ಯಾಂಗ್ ಮೆರೆದ ಕ್ರೌರ್ಯದ ಇಂಚಿಂಚೂ ಅನಾವರಣ;ರೇಣುಕಾಸ್ವಾಮಿ ಬಿಟ್ ಬಿಡಿ ದಮ್ಮಯ್ಯ ಅಂತಾ ಬೇಡಿಕೊಳ್ಳುತ್ತಿರುವ ಫೋಟೋ ವೈರಲ್

 

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಪಟ್ಟಂತೆ ನಿನ್ನೆ ಪೊಲೀಸರು ಕೋರ್ಟ್ ಗೆ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಡಿ ಗ್ಯಾಂಗ್ ರೇಣುಕಾಸ್ವಾಮಿಯನ್ನು ಯಾವ ರೀತಿ ಕೊಲೆ ಮಾಡಿದೆ ಎಂಬ ಇಂಚಿಂಚೂ ಮಾಹಿತಿ ಕೂಡ ಅನಾವರಣವಾಗಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿಯನ್ನು ಡಿ ಗ್ಯಾಂಗ್ ಯಾವ ರೀತಿ ಹಲ್ಲೆ ಮಾಡಿ ಕೊಲೆ ಮಾಡಿತು ಅನ್ನೋದಕ್ಕೆ ಸಂಬಂಧಪಟ್ಟಂತೆ  ಫೋಟೋ ರಿವೀಲ್ ಆಗಿದೆ. ಗಡ್ಡಿ ಮನುಷ್ಯನಂತಿದ್ದ ರೇಣುಕಾಸ್ವಾಮಿ ಬಿಟ್ ಬಿಡಿ ನನ್ನ ದಮ್ಮಯ್ಯ ಅಂತಾ ಬೇಡಿಕೊಳ್ಳುತ್ತಿರುವ ಫೋಟೋ ವೈರಲ್ ಆಗಿದೆ. ಫೋಟೋ ನೋಡಿದ್ರೇನೆ ಗೊತ್ತಾಗುತ್ತೆ. ಡಿ ಗ್ಯಾಂಗ್ ಯಾವ ರೀತಿ ಚಿತ್ರಹಿಂಸೆ ನೀಡಿ ಆತನನ್ನು ಕೊಲೆ ಮಾಡಿದೆ ಅಂತಾ.

ಈಗಾಗಲೇ ಪೊಲೀಸರು ದರ್ಶನ್, ಅವರ ಸ್ನೇಹಿತೆ ಪವಿತ್ರಾ ಗೌಡ ಮತ್ತು 15 ಸಹಚರರ ವಿರುದ್ಧ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯಕ್ಕೆ 3,991 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಪಿತೂರಿ, ಯೋಜನೆ, ಅಪಹರಣ, ಚಿತ್ರಹಿಂಸೆ, ಕೊಲೆ, ಸಾಕ್ಷ್ಯ ನಾಶದಲ್ಲಿ ದರ್ಶನ್, ಪವಿತ್ರ ಗೌಡರ ಪಾತ್ರ ಮತ್ತು ಅವರ ಅಭಿಮಾನಿ ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ಅವರ ನಾಲ್ವರು ಸಹಚರರನ್ನು ಪೊಲೀಸರಿಗೆ ಶರಣಾಗುವಂತೆ ಮಾಡುವ ಮೂಲಕ ಪೊಲೀಸರನ್ನು ದಾರಿ ತಪ್ಪಿಸುವ ಯೋಜನೆಯನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಪವಿತ್ರಾಗೆ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿದ್ದಕ್ಕಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಅಪ್ರೂವರ್ ಆಗಲು ಒಪ್ಪಿಕೊಂಡ ಆರೋಪಿಗಳಲ್ಲಿ ಒಬ್ಬ ನೀಡಿರುವ ಹೇಳಿಕೆಯನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.  ಅಲ್ಲದೇ ಪ್ರಕರಣದಲ್ಲಿ ದರ್ಶನ್ ಮತ್ತು ಇತರೆ ಆರೋಪಿಗಳ ಪಾತ್ರದ ಬಗ್ಗೆ  ಚಾರ್ಚ್ ಶೀಟ್ ನಲ್ಲಿ ವಿವರಿಸಲಾಗಿದೆ.