ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಬಳ್ಳಾರಿ ಜೈಲು ಸೇರಿದ್ದಾರೆ. ಇತ್ತ ಪೊಲೀಸರು ಪ್ರಕರಣಕ್ಕ ಸಂಬಂಧಪಟ್ಟಂತೆ ಎಲ್ಲಾ ರೀತಿಯ ತನಿಖೆ ಮುಕ್ತಾಯಗೊಳಿಸಿದ್ದು ಚಾರ್ಜ್ ಶೀಟ್ ಸಲ್ಲಿಕೆಗೆ ಮುಂದಾಗಿದ್ದಾರೆ.
ಎರಡು ದಿನಗಳ ಹಿಂದೆ ಪ್ರಕರಣ ತನಿಖಾಧಿಕಾರಿ ಎಸಿಪಿ ಚಂದನ್ ಅವರು ಗೃಹ ಸಚಿವ ಡಾ ಜಿ ಪರಮೇಶಅವರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ 17 ಆರೋಪಿಗಳ ವಿರುದ್ಧ ಪೊಲೀಸರು 4500 ಪುಟಗಳಷ್ಟು ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದು ಇಂದು ದೋಷಾರೋಪಣೆ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಪರಮೇಶ್ರ್ ಅವರು ಹೇಳಿದ್ದರು. ಆದರೆ ಇದುವರೆಗೂ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ.
ಅಂದ್ಹಾಗೆ ಯಾವುದೇ ಪ್ರಕರಣವಾಗಲಿ ಅದು ದಾಖಲಾದ 90 ದಿನಗಳ ಒಳಗಾಗಿ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಬೇಕು. ಇಂದು ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ದಾಖಲಾಗಿ ಸೆಪ್ಟಂಬ್ರ 9 ಕ್ಕೆ 90 ದಿನಗಳಾಗುತ್ತವೆ. ಅದರ ಮೊದಲು ಚಾರ್ಜ್ ಶೀಟ್ ಸಲ್ಲಿಸಬೇಕು. ಅಲ್ಲದೇ ಪ್ರಕರಣದಲ್ಲಿ ದರ್ಶನ್ ರನ್ನು ಎ 1 ಆರೋಪಿ ಮಾಡುವ ವಿಚಾರ ತನಿಖಾಧಿಕಾರಿಗಳಿಗೆ ಬಿಟ್ಟಿದ್ದು ಎಂದು ಪರಮೇಶ್ವರ್ ಹೇಳಿದ್ದಾರೆ. ,ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ನಂಬಿಕೆಯಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಲ್ಲ ಎಂದು ಅವರು ಹೇಳಿದ್ದಾರೆ.
ಅಂದ್ಹಾಗೆ ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ 200 ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದ್ದು ಅವುಗಳನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.ಇನ್ನು ಆರೋಪಿಗಳು ಕೂಡ ಪೊಲೀಸರು ಯಾವಾಗ ಚಾರ್ಜ್ ಶೀಟ್ ಸಲ್ಲಿಸ್ತಾರೆ ಅಂತಾ ಕಾಯುತ್ತಿದ್ದು ಆ ಬಳಿಕ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಲಿದ್ದಾರೆ. ಈಗಾಗಲೇ ಎ1 ಆರೋಪಿ ಪವಿತ್ರ ಗೌಡ ಹಾಗೂ ಎ7 ಅನುಕುಮಾರ್ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಅವರಿಬ್ಬರ ಅರ್ಜಿ ಕೂಡ ವಜಾಗೊಂಡಿದೆ. ಇದೀಗ ಆರೋಪ ಪಟ್ಟಿ ಸಲ್ಲಿಕೆಯಾಗುತ್ತಲೇ ಅದರಲ್ಲಿರುವ ವಿಚಾರಗಳ ಆಧಾರದಲ್ಲಿ ಆರೋಪಿಗಳ ಪರವಾದ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ.
ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ; ಬಳ್ಳಾರಿ ಸೆಂಟ್ರಲ್ ಜೈಲಿಗೆ ವಿಸಿಟ್ ಮಾಡಿದ ಬಳಿಕ ಡಿಐಜಿ ಶೇಷಾ ಹೇಳಿಕೆ
ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ ಎಂದು ಬಳ್ಳಾರಿ ಸೆಂಟ್ರಲ್ ಜೈಲಿಗೆ ವಿಸಿಟ್ ಮಾಡಿದ ಬಳಿಕ ಡಿಐಜಿ ಶೇಷಾ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ ಜೈಲಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ.ಜೈಲಿನ ನಿಯಮಗಳ ಪ್ರಕಾರ ಸೌಲಭ್ಯ ಕೊಡಲಾಗಿದೆ.ಹೈ ಸೆಕ್ಯೂರಿಟಿ ಸೆಲ್ ನಲ್ಲೇ ದರ್ಶನ್ ಇಡಲಾಗಿದೆ ಎಂದರು.
ಆ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ದರ್ಶನ್ ಅವರ ಜೊತೆಗೆ ಕೇವಲ ನಾಲ್ಕು ಕೈದಿಗಳು ಇದ್ದಾರೆ.ಒಂದೊಂದು ಸೆಲ್ ನಲ್ಲಿ ಒಬ್ಬೊಬ್ಬರೇ ಇರೋದು. ಭದ್ರತೆ ದೃಷ್ಟಿಯಿಂದ ಈ ಹೈ ಸೆಕ್ಯೂರಿಟಿ ಸೆಲ್ ಗಳನ್ನ ಬಳಕೆ ಮಾಡ್ತೇವೆ ಎಂದರು. ಹೈ ಸೆಕ್ಯೂರಿಟಿ ಸೆಲ್ ನ 15ನೇ ಅಂದ್ರೆ ಕೊನೆಯ ಕೋಣೆಯಲ್ಲಿ ಹಾಕಲಾಗಿದೆ. ಬ್ಯಾಕ್ ಪೈನ್ ಸಮಸ್ಯೆ ಇದೆ ಅಂತೆ, ಹೀಗಾಗಿ ಮೋಷನ್ ಹೋಗೋದು ಕಷ್ಟ ಆಗುತ್ತಿದೆ ಅಂತಾ ಹೇಳುತ್ತಿದ್ದಾರೆ. ಅವರಿಗೆ ಇಂಡಿಯನ್ ಟಾಯ್ಲೆಟ್ ವ್ಯವಸ್ಥೆ ಇದೆ.ಹಾಗಾಗಿ ವೆಸ್ಟರ್ನ್ ಟಾಯ್ಲೆಟ್ ಸೌಲಭ್ಯ ಕೇಳುತ್ತಿದ್ದಾರೆ. ಅದರ ಬಗ್ಗೆ ಮೆಡಿಕಲ್ ರಿಪೋರ್ಟ್ ನೋಡಿ ವ್ಯವಸ್ಥೆ ಮಾಡಲಾಗುವುದು ಎಂದರು. ಕೈ ನೋವಿನ ಬಗ್ಗೆ ಅವರು ಹೇಳಿದ್ದಾರೆ. ಟಿವಿ ಬೇಕು ಎಂದು ಕೇಳಿಲ್ಲ, ಕೇಳಿದ್ರೆ ನಮ್ಮ ಪರಮಾಧಿಕಾರ ಬಳಕೆ ಮಾಡಿಕೊಂಡು ಕೊಡ್ತೇವೆ ಎಂದ ಡಿಐಜಿ ಶೇಷಾ ಹೇಳಿಕೆ ನೀಡಿದ್ದಾರೆ.