ಬೆಂಗಳೂರು; ನಟ ಕಿಚ್ಚ ಸುದೀಪ್ ಇಂದು ತಮ್ಮ 51ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಂಡ್ರು.ಪ್ರತಿ ಬಾರಿ ಮನೆಯಲ್ಲಿ ಬರ್ತಡೇ ಆಚರಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಈ ಬಾರಿ ಬೆಂಗಳೂರಿನ ಜಯನಗರದ MES ಗ್ರೌಂಡ್ ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು.
ಬೆಳಗ್ಗೆ ಬೆ. 9 ರಿಂದ ಮಧ್ಯಾಹ್ನ 1 ರವರೆಗೂ ಸುದೀಪ್ ತಮ್ಮ ಅಭಿಮಾನಿಗಳನ್ನು ಭೇಟಿಯಾದ್ರು. ಇನ್ನು ಬರ್ತಡೇ ವೇಳೆ ಅಭಿಮಾನಿಗಳೊಂದಿಗೆ ಮಾತನಾಡಿದ ಕಿಚ್ಚ ಸುದೀಪ್ ಅಭಿಮಾನದ ಹೆಸರಿನಲ್ಲಿ ಪುಂಡಾಟ ಆಡೋರಿಗೆ ಎಚ್ಚರಿಕೆ ಕೊಟ್ಟರು.ಯಾರಿಗೂ ತೊಂದರೆ ಕೊಡದಂತೆ ಸುದೀಪ್ ಅಭಿಮಾನಿಗಳಿಗೆ ಬುದ್ಧಿಮಾತು ಹೇಳಿದ್ರು. ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡುವ ಬದಲಾಗಿ ಸಮಾಜಮುಖಿ ಕೆಲಸ ಮಾಡಲು ಅಭಿಮಾನಿಗಳಲ್ಲಿ ಮನವಿ ಮಾಡಿದ್ರು.
ಇನ್ನು ಕಿಚ್ಚನ ಬರ್ತಡೇ ಹಿನ್ನೆಲೆ ಮ್ಯಾಕ್ಸ್ ಚಿತ್ರದ ಹಾಡು ಬಿಡುಗಡೆಯಾಗಿದೆ. ಕಿಚ್ಚನ ಹುಟ್ಟುಹಬ್ಬಕ್ಕೆ ‘ಮ್ಯಾಕ್ಸ್ Maximum’ ಸಾಂಗ್ ರಿಲೀಸ್ ಆಗಿದೆ.’ಬಿಲ್ಲ ರಂಗ ಭಾಷ’ ಸಿನಿಮಾ ಬಗ್ಗೆಯೂ ಬರ್ತಡೇ ಸೆಲೆಬ್ರೇಷನ್ ವೇಳೆ ಕಿಚ್ಚ ಸುದೀಪ್ ಬಿಗ್ ಅಪ್ ಡೇಟ್ ಕೊಟ್ಟಿದ್ದಾರೆ.ವರ್ಷಕ್ಕೆ 2 ಸಿನಿಮಾ ಮಾಡೋ ಸೂಚನೆ ಸುದೀಪ್ ಕೊಟ್ಟಿದ್ದಾರೆ.
ಬರ್ತಡೇ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಕಿಚ್ಚ ಅಭಿಮಾನಿಗಳೇ ನನ್ ಪ್ರತಿಬಿಂಬ.ನನ್ನ ಯಶಸ್ಸು ಇಡೀ ಚಿತ್ರರಂಗಕ್ಕೆ ಸಲ್ಲುತ್ತೆ.ಅಕ್ಕಪಕ್ಕದ ಸ್ನೇಹಿತರು, ಮಾಧ್ಯಮ, ಅಭಿಮಾನಿಗಳು ನನ್ ಜೊತೆಗಿದ್ದಾರೆ.ಈ ಸಲ ಮನೆಯಲ್ಲಿ ಬರ್ತಡೇ ಆಚರಣೆ ಸಾಧ್ಯವಾಗಲಿಲ್ಲ. ನಾವು ಚಾಲ್ತಿಯಲ್ಲಿ ಇದೀವಿ ಅನಿಸುತ್ತೆ.28 ದಾಟಿ 29ಕ್ಕೆ ಕಾಲಿಟ್ಟೆ ಎಂದು ಹಾಸ್ಯ ಚಟಾಕಿ ಹಾರಿಸಿದ್ರು. MAX ತಡವಾಗಿದೆ ನಿಜ.ಆದರೆ ಇನ್ಮುಂದೆ ಸ್ವಲ್ಪ ವೇಗ ಇರುತ್ತೆ.ನಿಮ್ಮಷ್ಟೇ ನಾನು ನಿಮ್ಮೆಲ್ಲರನ್ನ ಪ್ರೀತಿಸ್ತೀವಿ.ನಾನು ಮೇಕಪ್ ಹಾಕೋದೇ ಫ್ಯಾನ್ಸ್ ಗಾಗಿ.ಈ ಬರ್ತಡೇ ಕೂಗು ಇಡೀ ವರ್ಷ ಕಾಪಾಡುತ್ತೆ.ಅಭಿಮಾನಿಗಳು ನಾನು ತಗ್ಗಿ ಬಗ್ಗಿ ನಡೆಯೋ ಹಾಗೇ ಮಾಡಿದ್ದಾರೆ ಅಂತಾ ಸುದೀಪ್ ಇದೇ ವೇಳೆ ಹೇಳಿದ್ದಾರೆ.
ದರ್ಶನ್ ತಪ್ಪು ಮಾಡಿದ್ದಾರೆ ಅಂತ ಹೆಂಗೆ ಹೇಳೋದು..? ಡಿ ಬಾಸ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಬೆಂಗಳೂರು; ಕಿಚ್ಚ ಸುದೀಪ್ ಅವರು ಇಂದು ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾಧ್ಯಮದವರು ಕಿಚ್ಚ ಸುದೀಪ್ ಅವರನ್ನು ದರ್ಶನ್ ವಿತಾರದ ಕುರಿತಾಗಿ ಪ್ರಶ್ನೆಗಳನ್ನು ಕೇಳಿದ್ರು. ಈ ವೇಳೆ ಕಿಚ್ಚ ಸುದೀಪ ಅವರು ದರ್ಶನ್ ಅವರನ್ನು ಹೊರಗಡೆ ಕರ್ಸಿ ಅಂತ ನಾ..? ನಾನು ಒಳಗಡೆ ಹೋಗ್ಲಿ ಅಂತ ನಾ..? ನೀವು ಕೇಳೋದಾ ಅಂತಾ ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ್ರು.
ದರ್ಶನ್ ಅವರಿಗೆ ಅಂತ ಫ್ಯಾನ್ಸ್ ಇದ್ದಾರೆ, ಕುಟುಂಬ ಇದೆ. ಯಾರಿಗೂ ನೋವು ಕೊಡೋದಕ್ಕೆ ನಾನು ಇಷ್ಟ ಪಡೋದಿಲ್ಲ.ರಾಜಕೀಯವಾಗಿ ಮಾತಾಡ್ತಿದಿನಿ ಅನ್ಕೋಬೇಡಿ. ಈ ದೇಶದಲ್ಲಿ ಇದೀವಿ ಅಂದ್ರೆ ಕಾನೂನಿನ ಮೇಲೆ ನಂಬಿಕೆ ಇರ್ಬೇಕು ಎಂದ್ರು. ಅಲ್ಲದೇ ದರ್ಶನ್ ತಪ್ಪು ಮಾಡಿದ್ದಾರೆ ಅಂತ ಹೆಂಗೆ ಹೇಳೋದು..? ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದ್ರು. ಕೋರ್ಟ್ ಇದೆ ನೋಡೋಣ ಎಂದು ಸುದೀಪ್ ಹೇಳಿದ್ರು.
ದರ್ಶನ್ ಫ್ಯಾನ್ಸ್ ಹಾಗೂ ಸ್ನೇಹದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರವರ ಫ್ಯಾನ್ಸ್ ಗೆ ಅವರದ್ದೇ ಆದ ನೋವು ಇರುತ್ತೆ. ನನ್ನ ಫ್ಯಾನ್ಸ್ ನಾ ಮೈನ್ಟೈನ್ ಮಾಡಬೋದು. ಆದರೆ ಬೇರೆ ಅವರ ಫ್ಯಾನ್ಸ್ ಕರೆಕ್ಷನ್ ಮಾಡೋಕೆ ನನಗಾಗಲ್ಲ.ನಾನು ದರ್ಶನ್ ಮಾತೇ ಆಡ್ತಿಲ್ಲ.ನಾವು ಒಳ್ಳೇದು ಬಯಸುತಿವಿ ಅನ್ನೋ ಕಾರಣಕ್ಕೆ ಒಳ್ಳೇದು ಆಗ್ಬೇಕು ಅಂತಿಲ್ಲ.ದರ್ಶನ್ ನಾನು ಸರಿ ಇಲ್ಲ ಅನ್ನೋ ಬದಲು ನಾವಿಬ್ರು ಒಟ್ಟಿಗೆ ಸರಿ ಇಲ್ಲ.ಇಬ್ಬರು ವಿಭಿನ್ನ ಟೇಸ್ಟ್ ಇರೋ ವ್ಯಕ್ತಿಗಳು.ಒಬ್ಬ ವ್ಯಕ್ತಿ ಸಮಾಜದಲ್ಲಿ ಅಷ್ಟು ದೊಡ್ದದಾಗಿ ಬೆಳೆದಿದ್ದಾನೆ ಅಂದ್ರೆ ಸ್ವತಃ ಬುದ್ದಿ ಇರುತ್ತೆ. ಇನ್ನೊಬರನ್ನ ತಿದ್ದೋ ಶಕ್ತಿ ನನಗಿಲ್ಲ.ನನ್ನ ಮಾತು ಕೇಳೋ ವ್ಯಕ್ತಿ ಆದ್ರೆ ಹೇಳ್ಬೋದು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇನ್ನು ದರ್ಶನ್ ಅವರನ್ನು ಭೇಟಿಯಾಗೋದಕ್ಕೆ ಬಳ್ಳಾರಿ ಜೈಲಿಗೆ ಹೋಗ್ತೀರಾ ಅಂತಾ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್ ನನ್ನ ಬರ್ತ್ಡೇಗೂ ಮುಂಚೆ ಮಾತಾಡಿಕೊಂಡಿದ್ರೆ,ದರ್ಶನ್ ಭೇಟಿಗೆ ನಾನ್ ಹೋಗ್ತಿದ್ದೆ ಅನ್ಸುತ್ತೆ.ದರ್ಶನ್ ಜೊತೆ ಸುದೀಪ್ ಇದ್ದಿದ್ರೆ ಈ ಸ್ಥಿತಿ ಬರ್ತಿಲ್ಲಿಲ್ವಾ ಅಂತಾ ಹೇಳೋದ್ ತಪ್ಪಾಗುತ್ತೆ.ದರ್ಶನ್ ಭೇಟಿಗೆ ಹೋಗಬೇಕು ಅಂತ ಅನಿಸಿದೆಯಾ ಅಂತಾ ಕೇಳಿದ್ದಕ್ಕೆ ಸುದೀಪ್ ಹಾಗೆಲ್ಲ ಅಂದ್ಕೊಳ್ಲೋಕ್ ಆಗಲ್ಲ ಈಗ ಎಂದು ಉತ್ತರಿಸಿದ್ದಾರೆ.