ಮನೆ Latest News ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ;ಕೋವಿಡ್ ಹಗರಣಗಳ ಸಂಬಂಧ ಮೈಕೆಲ್ ಡಿ‌ಕುನ್ಹಾ ನೇತೃತ್ವದ ಆಯೋಗದ...

ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ;ಕೋವಿಡ್ ಹಗರಣಗಳ ಸಂಬಂಧ ಮೈಕೆಲ್ ಡಿ‌ಕುನ್ಹಾ ನೇತೃತ್ವದ ಆಯೋಗದ ಮಧ್ಯಂತರ ವರದಿ ಬಗ್ಗೆ ಡಾ.ಕೆ.ಸುಧಾಕರ್ ಹೇಳಿಕೆ

0

ಬೆಂಗಳೂರು;;ಕೋವಿಡ್ ಹಗರಣಗಳ ಸಂಬಂಧ ಮೈಕೆಲ್ ಡಿ‌ಕುನ್ಹಾ ನೇತೃತ್ವದ ಆಯೋಗದ ಮಧ್ಯಂತರ ವರದಿ ನೀಡಿದೆ. ಈ ಬಗ್ಗೆ ಸಂಸದ, ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರ ನಿನ್ನೆ ರಾತ್ರಿ ವರದಿ ಪಡೆದಿದೆ.ಎಲ್ಲ ಸೇರಿ ಗುಣಾಕಾರ ಭಾಗಾಕಾರ ಎಲ್ಲ ಮಾಡಿದ್ದಾರೆ.ನಾನು ಕೋವಿಡ್ ಕಾಲದಲ್ಲಿ ವೈದ್ಯಕೀಯ ಸಚಿವ ಆಗಿದ್ದೆ.ನಾನು ಅಂತ:ಕರಣದಿಂದ ಕೆಲಸ ಮಾಡಿದ್ದೇನೆ.ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ.ಯಡಿಯೂರಪ್ಪ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿತ್ತು.ಯಾವುದೇ ತೀರ್ಮಾನ ಇದ್ದರೂ ಟಾಸ್ಕ್ ಮೂಲಕ ತಗೊಳ್ತಿದ್ವಿ.ಹಿರಿಯ ಅಧಿಕಾರಿಗಳು, ತಜ್ಞರು ಅದರಲ್ಲಿ ಇದ್ದರು.ಆಗ ವೈದ್ಯಕೀಯ ತುರ್ತು ಪರಿಸ್ಥಿತಿ ಇತ್ತು.ಈಗ ಇವರು ಇವತ್ತಿನ ದರ ಆಧರಿಸಿ ಲೆಕ್ಕ ಹಾಕಿದ್ದಾರಂತೆ.ವರದಿಯನ್ನು ನಿನ್ನೆ ಸ್ವೀಕಾರ ಮಾಡಿದ್ದಾರೆ.ವರದಿ ಬಗ್ಗೆ ಸರ್ಕಾರದ ಹೇಳಿಕೆ ಬರಲಿ.ಊಹಾಪೋಹಾಗಳಿಗೆ ನಾನು ಉತ್ತರ ಕೊಡಲ್ಲ.ಈಗ ವರದಿಯಲ್ಲಿ ಅಕ್ರಮ ಬಗ್ಗೆ ಇದೆ ಅಂತಿದ್ದಾರೆ.ವರದಿಯನ್ನು ಲೀಕ್ ಮಾಡಿದ್ದಾರಾ ಇವರು? ವರದಿ ಯಾರು ಓದಿದ್ದಾರೆ?ನಾನು ಅಧಿಕೃತ ವರದಿ ನೋಡುವವರೆಗೂ ಮಾತಾಡಲ್ಲ.ನಾನು ಇದನ್ನು ಎದುರಿಸ್ತೇನೆ ಎಂದಿದ್ದಾರೆ.

ನಾನು ಆತ್ಮವಂಚನೆ ಮಾಡಿಕೊಳ್ಳದೇ ನನ್ನ ಪ್ರಾಣ ಒತ್ತೆ ಇಟ್ಟು ಊಟ ತಿಂಡಿ ಮರೆತು ಹಗಲಿರುಳು ರೋಗಿಗಳ ಸೇವೆ ಮಾಡಿದ್ದೇನೆ. ಇವರೆಲ್ಲ ಸತ್ಯ ಹರಿಶ್ಚಂದ್ರರಾ? .ಇವರ ಸರ್ಕಾರ ದರೋಡೆಕೋರರ ಸರ್ಕಾರ.ಎಲ್ಲ ಇಲಾಖೆಗಳಲ್ಲೂ ಅಕ್ರಮ‌ ಮಾಡ್ತಿದ್ದಾರೆ. ಕೋವಿಡ್ ಕಾಲದಲ್ಲಿ ಖರೀದಿ ಆಗಿರೋದೇ 7 ಸಾವಿರ ಕೋಟಿ‌ ಮೌಲ್ಯದಷ್ಟು ಅಕ್ರಮವೂ ಅಷ್ಟೇ ಆಗಿದೆ ಅಂದ್ರೆ ನಂಬಲು ಸಾಧ್ಯನಾ?ಊಹಾಪೋಹಗಳಿಗೆ ಉತ್ತರ ಕೊಡೋದು ಬೇಡ.ಅವರು ಅವರ ರಾಜಕೀಯ ದಿವಾಳಿತನ ತೋರಿಸಿದ್ದಾರೆ.ಕ್ರಿಮಿನಲ್ ಮೊಕದ್ದಮೆ ದಾಖಲಿಬೇಕು ಅಂತ ಶಿಫಾರಸು ಮಾಡಿದ್ದಾರಂತೆ.ಮಾಡಲಿ, ಎದುಸ್ತೇನೆ, ರಾಜಕೀಯವಾಗಿ ಕಾನೂನಾತ್ಮಕವಾಗಿ ಎದುರಿಸ್ತೇನೆ.ಕೋವಿಡ್ ವಿಚಾರದಲ್ಲಿ ಸರ್ಕಾರದ ತನಿಖೆಯನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ನ್ಯಾ.ಕುನ್ಹಾ ಅವರು ಅಂತಿಮ‌ ವರದಿಯೂ ಕೊಡಲಿ.ಇನ್ನು ಆರು ತಿಂಗಳು ಕಾಲಾವಕಾಶ ತಗೊಂಡಿದ್ದಾರಂತೆ.ಈ ಸವಾಲನ್ನು ನಾನು ಸ್ವೀಕಾರ ಮಾಡ್ತೇನೆ, ಎದುರಿಸ್ತೇನೆ, ಸವಾಲನ್ನು ಎಂಜಾಯ್ ಮಾಡ್ತೇನೆ.ಹೊಸ ಪರಂಪರೆ ಶುರು ಮಾಡಿದ್ದಾರೆ ಅವರು‌ ಮಾಡಲಿ.ಒಂದು ಕಡೆ ಯಡಿಯೂರಪ್ಪ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್, ಇನ್ನೊಂದು ಕಡೆ ಸಿಎಸ್ ನೇತೃತ್ವದ ಅಧಿಕಾರಿಗಳ, ತಜ್ಞರ ಸಮಿತಿ ಇತ್ತು.ಟಾಸ್ಕ್ ಫೋರ್ಸ್‌ನಲ್ಲಿ ಐವರು ಸಚಿವರು ಇದ್ದರು.ಟಾಸ್ಕ್‌ಫೋರ್ಸ್ ಗೆ ಮೊದಲು ಶ್ರೀರಾಮುಲು ಅಧ್ಯಕ್ಷರಾಗಿದ್ರು, ನಂತರ ಡಾ.ಅಶ್ವಥ್‌ನಾರಾಯಣ ಅಧ್ಯಕ್ಷರಾಗಿದ್ರು.ಎಲ್ಲ ತೀರ್ಮಾನಗಳನ್ನೂ ಟಾಸ್ಕ್ ಫೋರ್ಸ್ ನಲ್ಲಿ ಚರ್ಚೆ ಮಾಡಿ ತೀರ್ಮಾನ ತಗೊಳ್ತಿದ್ವಿ.ನಾವು ಕ್ರಮಬದ್ಧವಾಗಿ, ನಿಯಮಬದ್ಧವಾಗಿ, ಸಮರೋಪಾದಿಯಲ್ಲಿ ರಾಜ್ಯದ ಜನರ ಪ್ರಾಣ ಉಳಿಸುವ ಕೆಲಸ ಮಾಡಿದ್ದೇವೆ.ನಾಳೆ ಏ‌ನಾಗುತ್ತೆ ಅಂತ ಗೊತ್ತಾಗದ ವೈದ್ಯಕೀಯ ಎಮರ್ಜೆನ್ಸಿ ಆವತ್ತು ಇತ್ತು.ಇವರು ಆವತ್ತಿನ‌ ಔಷಧಗಳಿಗೆ ಇವತ್ತಿನ ದರ ಹಾಕಿ ಲೆಕ್ಕ ಹಾಕಿದ್ದಾರಂತೆ.ಆರೋಗ್ಯ ವ್ಯವಸ್ಥೆಯನ್ನು ನಮ್ಮ ಸರ್ಕಾರ ಯಾವ ರೀತಿ ಉತ್ತಮ ಪಡಿಸಿತ್ತು ಅಂತ ರಾಜ್ಯದ ಜನರಿಗೆ ಗೊತ್ತಿದೆ.ಈಗ ಈ ಸರ್ಕಾರಕ್ಕೆ ನಾವು ಅರ್ಥ ಮಾಡಿಸುವ ಅಗತ್ಯ ಇಲ್ಲ.ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರೋರಂತೆ ಮಾತಾಡ್ತಾರೆ.ಈ ಸರ್ಕಾರ ಹೆಚ್ಚು ಅಂದ್ರೆ ಇನ್ನು ಮೂರು ವರ್ಷ ಅಷ್ಟೇ ಇರುತ್ತೆ.ಈ ಸರ್ಕಾರಕ್ಕೆ ದಿನಗಣನೆ ಶುರುವಾಗಿದೆ.ನಂತರ ನಾವು ಅಧಿಕಾರಕ್ಕೆ ಬರಲ್ವಾ? ಇವರು ದ್ವೇಷ ಸಾಧನೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಂಪಣ್ಣ ಆಯೋಗದ ವರದಿ ಎಷ್ಟು ವರ್ಷ ಆಯ್ತು ಬಂದು?ಸಂಪುಟ ಒಂದು, ಸಂಪುಟ ಎರಡು ಇದೆ.ಒಂದೇ ಸಂಪುಟ ಮುಂದೆ ಇಟ್ಟಿದ್ದಾರೆ ಇವರು.ನಾವು ಇವರ ವಿರುದ್ಧ ರಾಜಕೀಯ ದ್ವೇಷ ಮಾಡಿದ್ವಾ ಆಗ?ನಿವೃತ್ತ ನ್ಯಾಯಾಧೀಶರ ಮೇಲೆ ಒತ್ತಡ ಹಾಕಿದ್ದಾರೆ.ಒತ್ತಡ ಹಾಕಿ ಮಧ್ಯಂತರ ವರದಿ ಪಡೆದಿದ್ದಾರೆ.ವರದಿ ನೀಡೊಕೆ ಇನ್ನೂ  ಸಮಯ ಇತ್ತು.ಅವರು ಇನ್ನೂ ಆರು ತಿಂಗಳು ಸಮಯ ಕೇಳಿದ್ದಾರೆ.ಜಸ್ಟಿಸ್ ಕುನ್ಹಾ ಸರಿಯಾದ ವರದಿ ಕೊಡುತ್ತಾರೆ ಎಂದು ನಾನು ನಂಬಿದ್ದೇನೆ.ಯಡಿಯೂರಪ್ಪ ಬೊಮ್ಮಾಯಿ‌ ನಾವು ರಾಜಕೀಯ ದ್ವೇಷ ಮಾಡಿಲ್ಲ.ನಾವು ಹಾಗೆ ಮಾಡಿದ್ದರೆ, ಕಾಂಗ್ರೆಸ್ ನವರು ಅರ್ಧ ಜನ ಜೈಲಿಗೆ ಹೋಗ್ತಾ ಇದ್ರು.ಏನಾದರೂ ನಮಗೆ ಬಿಜೆಪಿಯ ಹಿಂದಿನ ಸರ್ಕಾರದ ವಿರುದ್ಧ ಅಸ್ತ್ರ ಕೊಡಿ.ಬಿಜೆಪಿಯವ್ರು ನಮ್ಮ ಕೈಕಟ್ಟಿಹಾಕಿದ್ದಾರೆ ಅಂತ ಒತ್ತಡದಿಂದ ವರದಿ ಪಡೆದಿದ್ದಾರೆ.ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ನಮ್ಮ ಉಗ್ರ ಹೋರಾಟ ಆರಂಭವಾದ ನಂತರ ಒತ್ತಡದಲ್ಲಿದ್ದಾರೆ..ನಿವೃತ್ತ ನ್ಯಾಯಮೂರ್ತಿಗಳ ಮೇಲೆ ಒತ್ತಡ ತಂದು ವರದಿ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.