ಮೈಸೂರು:ಸಿದ್ದರಾಮಯ್ಯ ಅನುಮತಿ ಕೊಟ್ರೆ ನಾನು ಸಿಎಂ ಆಗುತ್ತೇನೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ ದೇಶಪಾಂಡೆ ಸ್ಫೋಟಕ ಹೇಳಿಕೆ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ನನಗೂ ಕೂಡ ಸಿಎಂ ಆಗುವ ಆಸೆ ಇದೆ ಅನ್ನೋದನ್ನು ಪರೋಕ್ಷವಾಗಿ ಆರ್.ವಿ ದೇಶಪಾಂಡೆ ಹೇಳಿದ್ದಾರೆ.
ನಾನು ಈಗಾಗಲೇ ಸಚಿವ ಆಗಿ ಆಗಿ ದಣಿದಿದ್ದೇನೆ.ಇನ್ನೇನಿದ್ರು ಮುಖ್ಯಮಂತ್ರಿ ಆಗಬೇಕು ಅಷ್ಟೇ.ಆದ್ರೆ ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಆರ್ ವಿ ದೇಶಪಾಂಡೆ ಇದೇ ವೇಳೆ ಹೇಳಿದ್ದಾರೆ.ಹಾಗಾದ್ರೆ ಸಿಎಂ ಆಗುವ ಆಸೆ ಇದ್ಯಾ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಆರ್ ವಿ ದೇಶಪಾಂಡೆ, ನನಗೆ ಆಸೆ ಇದೆ, ನಿಮ್ಮಂತ ಜನರಿಗೂ ಆಸೆ ಇದೆ.ಲೈಫ್ ನಲ್ಲಿ ಆಂಭಿಷನ್ ಇರಬೇಕು.ನಾನು ಸಿದ್ದರಾಮಯ್ಯರಿಗಿಂತ ಎರಡು ವರ್ಷ ವಯಸ್ಸಿನಲ್ಲಿ ದೊಡ್ಡವನು.ಹೈಕಮಾಂಡ್ ಅವಕಾಶ ಕೊಟ್ರು ಸಿದ್ದರಾಮಯ್ಯ ಅವರು ಅನುಮತಿ ಕೊಡಬೇಕು.ನಾನು ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಸ್ನೇಹಿತ.5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಇರ್ತಾರೇ. ಸಿಎಂ ಬದಲಾವಣೆ ಚರ್ಚೆ ನಡೆದಿಲ್ಲ.ಸದ್ಯ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿಲ್ಲ.ನನಗೆ ಗೊತ್ತಿಲ್ಲದ ಯಾವ ಚರ್ಚೆ ನಡೆಯಲು ಸಾಧ್ಯ ಇಲ್ಲ.ಪರಮೇಶ್ವರ ಹಾಗೂ ಸತೀಶ್ ಜಾರಕಿಹೊಳಿ ಮನೆಯಲ್ಲಿ ನಡೆದಿರುವ ಇಲಾಖೆಗೆ ಸಂಬಂಧಪಟ್ಟ ಸಭೆ ಅಷ್ಟೇ ಎಂದು ಇದೇ ವೇಳೆ ಮೈಸೂರಿನಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ ದೇಶಪಾಂಡೆ ಹೇಳಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಮುಡಾ ವಿಚಾರವಾಗಿ ಮಾತನಾಡಿದ ಅವರು ಫೋನ್ ಟ್ಯಾಟಿಂಗ್ ಆರೋಪ ಬಂದ ತಕ್ಷಣ ರಾಮಕೃಷ್ಣ ಹೆಗೆಡೆ ರಾಜೀನಾಮೆ ನೀಡಿದ್ರು.ಈಗ ದಿನ ಫೋನ್ ಟ್ಯಾಪ್ ನಡೀತಾ ಇದೆ.ಈಗ ಮೌಲ್ಯಾದರಿತ ರಾಜಕಾರಣ ನಡೆಯುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ರು.
ಮೈಸೂರಿನಲ್ಲಿ ಪ್ರಸ್ತುತ ರಾಜಕಾರಣದ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಆರ್.ವಿ ದೇಶಪಾಂಡೆ ಹಿಂದೆ ಮೌಲ್ಯಾದರಿತ ರಾಜಕಾರಣ ಮಾಡುತ್ತಿದ್ರು, ಅದೇ ರೀತಿ ನಡೆದು ಕೊಳ್ಳುತ್ತಿದ್ದರು.ರಾಮಕೃಷ್ಣ ಆಶ್ರಮ ಬಗ್ಗೆ ಮತ್ತು ವಿವೇಕಾನಂದರ ಬಗ್ಗೆ ಹೊಗಳುತ್ತಾ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಆರ್.ವಿ ದೇಶಪಾಂಡೆ ಟಕ್ಕರ್ ಕೊಟ್ಟಿದ್ದಾರೆ.
ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ.ಸಾವಿರಾರು ಕೋಟಿ ಹಗರಣ ಅಂಥ ಹೇಳುತ್ತಿದ್ದಾರೆ.ಆರೋಪದ ಬಗ್ಗೆ ದಾಖಲೆ ಕೊಡಿ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಆರ್.ವಿ ದೇಶಪಾಂಡೆ ಹೇಳಿಕೆ ನೀಡಿದ್ದಾರೆ.











