ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯವಾಗಿದ್ದು, ತನಿಖಾ ತಂಡ ಆರೋಪ ಪಟ್ಟಿ ಸಲ್ಲಿಕೆ ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಒಂದೆರಡು ದಿನಗಳಲ್ಲಿ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನ ತನಿಖೆ ಫೈನಲ್ ಹಂತ ತಲುಪಿದ್ದು, ಬಹುತೇಕ ಎಲ್ಲಾ ಸಾಕ್ಷಿಗಳು ಲಭ್ಯವಾಗಿದ್ದು, ಎಫ್ ಎಸ್ ಎಲ್ ನಿಂದ ಶೇ.90 ರಷ್ಟು ವರದಿಗಳು ಪೊಲೀಸರ ಕೈ ಸೇರಿವೆ. ಸೆಪ್ಟೆಂಬರ್ 10 ರೊಳಗೆ 4,000 ಕ್ಕೂ ಹೆಚ್ಚು ಪುಟಗಳ ಆರೋಪ ಪಟ್ಟಿ ಸಲ್ಲಿಸಲು ತನಿಖಾ ತಂಡ ತಯಾರಿ ನಡೆಸಿದೆ ಎನ್ನಲಾಗಿದೆ.
ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದ ಆರ್ ಆರ್ ನಗರದ ಪಟ್ಟಣಗೆರೆ ಶೆಡ್ ಗೆ ಜೂನ್ 8 ರಂದು ನಟ ದರ್ಶನ್ ಹೋಗಿರೋದು ಎಫ್ ಎಸ್ ಎಲ್ ವರದಿಯಲ್ಲಿ ದೃಢಪಟ್ಟಿದೆ ಎನ್ನಲಾಗಿದೆ. ಜೊತೆಗೆ ಕಾರಿನಲ್ಲಿ ರೇಣುಕಾಸ್ವಾಮಿ ಮೃತದೇಹ ಸಾಗಿಸಿರೋದು ಕನ್ಫರ್ಮ್ ಆಗಿದೆ. ರೇಣುಕಾಸ್ವಾಮಿ ಕೊಲೆಗೆ ಮೂಲ ಕಾರಣ ಪವಿತ್ರಾಗೌಡ ಅನ್ನೋದು ಆರಂಭದಲ್ಲಿ ಗೊತ್ತಾಗಿದೆ. ರೇಣುಕಾಸ್ವಾಮಿಗೆ ಪವಿತ್ರಾಗೌಡ ಚಪ್ಪಲಿಯಲ್ಲಿ ಹೊಡೆದಿದ್ದಳು ಅನ್ನೋದನ್ನು ವಿಚಾರಣೆಯಲ್ಲಿ ಆಕೆಯ ಒಪ್ಪಿಕೊಂಡಿದ್ದಾಳೆ. ಕೃತ್ಯ ನಡೆದ ವೇಳೆ ಪವಿತ್ರಾಗೌಡ ಸ್ಥಳದಲ್ಲೇ ಇದ್ದರು ಎನ್ನುವ ಕುರಿತು ಸಾಕ್ಷಿ ಲಭ್ಯವಾಗಿದೆ ಅಲ್ಲದೇ ಘಟನೆ ವೇಳೆ ಸಿಸಿಟಿವಿಯಲ್ಲಿ ಪವಿತ್ರಾಗೌಡ ಇರುವ ದೃಶ್ಯ ಸೆರೆಯಾಗಿದೆ .
ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದ ಸಿಸಿಟಿವಿ, ಬ್ಲಡ್ ರಿಪೋರ್ಟ್ ಕುರಿತ ಎಫ್ ಎಸ್ ಎಲ್ ನ ಆರು ವರದಿಗಳು ಪೊಲೀಸರಿಗೆ ಇ-ಮೇಲ್ ಮೂಲಕ ತಲುಪಿದ್ದು, ಹತ್ಯೆ ಪ್ರಕರಣದಲ್ಲಿ ಮತ್ತಷ್ಟು ಸಾಕ್ಷಿಗಳು ಲಭ್ಯವಾಗಿವೆ ಎನ್ನಲಾಗಿದೆ. ರೇಣುಕಾಸ್ವಾಮಿಯ ಪೋಸ್ಟ್ ಮಾರ್ಟಂ ಪರೀಕ್ಷೆಯ ಸ್ಯಾಂಪಲ್ಸ್ ಎಫ್ಎಸ್ಎಲ್ ವರದಿಯಲ್ಲಿ ಎದೆಯ ಎಲುಬು ಮುರಿದು, ಶ್ವಾಸಕೋಶಕ್ಕೆ ಮೂಳೆ ಚುಚ್ಚಿದ್ದು ಇದೇ ಅವರ ಸಾವಿಗೆ ಕಾರಣ ಎನ್ನಲಾಗಿದೆ. ಆರಕ್ಕೂ ಹೆಚ್ಚು ಆರೋಪಿಗಳ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ಸ್ವಾಮಿ ರಕ್ತದ ಕಲೆಗಳು ಇರೋದು ಕೂಡ ಬಯಲಾಗಿದೆ.
ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ; ಬಳ್ಳಾರಿ ಸೆಂಟ್ರಲ್ ಜೈಲಿಗೆ ವಿಸಿಟ್ ಮಾಡಿದ ಬಳಿಕ ಡಿಐಜಿ ಶೇಷಾ ಹೇಳಿಕೆ
ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ ಎಂದು ಬಳ್ಳಾರಿ ಸೆಂಟ್ರಲ್ ಜೈಲಿಗೆ ವಿಸಿಟ್ ಮಾಡಿದ ಬಳಿಕ ಡಿಐಜಿ ಶೇಷಾ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ ಜೈಲಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು ದರ್ಶನ್ ಅವರಿಗೆ ಜೈಲಿನಲ್ಲಿ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿಲ್ಲ.ಜೈಲಿನ ನಿಯಮಗಳ ಪ್ರಕಾರ ಸೌಲಭ್ಯ ಕೊಡಲಾಗಿದೆ.ಹೈ ಸೆಕ್ಯೂರಿಟಿ ಸೆಲ್ ನಲ್ಲೇ ದರ್ಶನ್ ಇಡಲಾಗಿದೆ ಎಂದರು.
ಆ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ದರ್ಶನ್ ಅವರ ಜೊತೆಗೆ ಕೇವಲ ನಾಲ್ಕು ಕೈದಿಗಳು ಇದ್ದಾರೆ.ಒಂದೊಂದು ಸೆಲ್ ನಲ್ಲಿ ಒಬ್ಬೊಬ್ಬರೇ ಇರೋದು. ಭದ್ರತೆ ದೃಷ್ಟಿಯಿಂದ ಈ ಹೈ ಸೆಕ್ಯೂರಿಟಿ ಸೆಲ್ ಗಳನ್ನ ಬಳಕೆ ಮಾಡ್ತೇವೆ ಎಂದರು. ಹೈ ಸೆಕ್ಯೂರಿಟಿ ಸೆಲ್ ನ 15ನೇ ಅಂದ್ರೆ ಕೊನೆಯ ಕೋಣೆಯಲ್ಲಿ ಹಾಕಲಾಗಿದೆ. ಬ್ಯಾಕ್ ಪೈನ್ ಸಮಸ್ಯೆ ಇದೆ ಅಂತೆ, ಹೀಗಾಗಿ ಮೋಷನ್ ಹೋಗೋದು ಕಷ್ಟ ಆಗುತ್ತಿದೆ ಅಂತಾ ಹೇಳುತ್ತಿದ್ದಾರೆ. ಅವರಿಗೆ ಇಂಡಿಯನ್ ಟಾಯ್ಲೆಟ್ ವ್ಯವಸ್ಥೆ ಇದೆ.ಹಾಗಾಗಿ ವೆಸ್ಟರ್ನ್ ಟಾಯ್ಲೆಟ್ ಸೌಲಭ್ಯ ಕೇಳುತ್ತಿದ್ದಾರೆ. ಅದರ ಬಗ್ಗೆ ಮೆಡಿಕಲ್ ರಿಪೋರ್ಟ್ ನೋಡಿ ವ್ಯವಸ್ಥೆ ಮಾಡಲಾಗುವುದು ಎಂದರು. ಕೈ ನೋವಿನ ಬಗ್ಗೆ ಅವರು ಹೇಳಿದ್ದಾರೆ. ಟಿವಿ ಬೇಕು ಎಂದು ಕೇಳಿಲ್ಲ, ಕೇಳಿದ್ರೆ ನಮ್ಮ ಪರಮಾಧಿಕಾರ ಬಳಕೆ ಮಾಡಿಕೊಂಡು ಕೊಡ್ತೇವೆ ಎಂದ ಡಿಐಜಿ ಶೇಷಾ ಹೇಳಿಕೆ ನೀಡಿದ್ದಾರೆ.










