ಬಳ್ಳಾರಿ : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲು ಸೇರಿದರೂ ನಟ ದರ್ಶನ್ ಗೆ ಸಮಸ್ಯೆಗಳು ಮಾತ್ರ ಬೆನ್ನು ಬಿಡದೇ ಕಾಡುತ್ತಿದೆ.ಬಳ್ಳಾರಿ ಜೈಲಿನಲ್ಲಿ ಈಗಗಾಲೇ ಎರಡು ರಾತ್ರಿ ಕಳೆದಿರುವ ನಟ ದರ್ಶನ್ ರಾತ್ರಿ ಇಡೀ ನಿದ್ದೆಯಿಲ್ಲದೇ ಪರದಾಡಿದ್ದಾರೆ, ನಿರಂತರವಾಗಿ ಕಚ್ಚುತ್ತಿರುವ ಸೊಳ್ಳೆಯಿಂದಾಗಿ ಡಿ ಬಾಸ್ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ. ಇದರ ಮಧ್ಯೆ ದರ್ಶನ್ ಅವರಿಗೆ ಪದೇ ಪದೇ ಸಂಕಷ್ಟಗಳು ಎದುರಾಗುತ್ತಲೇ ಇದೆ.
ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರಿಗೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರುಎ ಎಫ್ ಐಆರ್ ಗಳು ದಾಖಲಾಗಿದ್ದು ಆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ನಟ ದರ್ಶನ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.ಅದಕ್ಕಾಗಿ ಬೆಂಗಳೂರಿನಿಂದ ಪೊಲೀಸರು ಬಳ್ಳಾರಿ ಜೈಲಿಗೆ ಆಗಮಿಸಲಿದ್ದಾರೆ. ದರ್ಶನ್ ಅವರ ವಿಚಾರಣೆಗಾಗಿ ಈಗಾಗಲೇ ಪೊಲೀಸರು 24 ಗಂಟೆಗಳ ಅನುಮತಿ ಕೇಳಿದ್ದಾರೆ ಎನ್ನಲಾಗಿದೆ. ನಾಳೆ ಬಳ್ಳಾರಿಗೆ ಬಂದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ನಟ ಡಿ ಬಾಸ್ ದರ್ಶನ್ ಅವರನ್ನು ವಿಚಾರಣೆ ನಡೆಸಿದ ಬಳಿಕ ರೌಡಿ ಶೀಟರ್ ನಾಗನನ್ನು ವಿಚಾರಣೆ ನಡೆಸಲು ಪೊಲೀಸರು ಪ್ಲ್ಯಾನ್ ಮಾಡ್ಕೊಂಡಿದ್ದಾರೆ ಎನ್ನಲಾಗಿದೆ.
ದರ್ಶನ್ ತಪ್ಪು ಮಾಡಿದ್ದಾರೆ ಅಂತ ಹೆಂಗೆ ಹೇಳೋದು..? ಡಿ ಬಾಸ್ ಬಗ್ಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಬೆಂಗಳೂರು; ಕಿಚ್ಚ ಸುದೀಪ್ ಅವರು ಇಂದು ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾಧ್ಯಮದವರು ಕಿಚ್ಚ ಸುದೀಪ್ ಅವರನ್ನು ದರ್ಶನ್ ವಿತಾರದ ಕುರಿತಾಗಿ ಪ್ರಶ್ನೆಗಳನ್ನು ಕೇಳಿದ್ರು. ಈ ವೇಳೆ ಕಿಚ್ಚ ಸುದೀಪ ಅವರು ದರ್ಶನ್ ಅವರನ್ನು ಹೊರಗಡೆ ಕರ್ಸಿ ಅಂತ ನಾ..? ನಾನು ಒಳಗಡೆ ಹೋಗ್ಲಿ ಅಂತ ನಾ..? ನೀವು ಕೇಳೋದಾ ಅಂತಾ ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ್ರು.
ದರ್ಶನ್ ಅವರಿಗೆ ಅಂತ ಫ್ಯಾನ್ಸ್ ಇದ್ದಾರೆ, ಕುಟುಂಬ ಇದೆ. ಯಾರಿಗೂ ನೋವು ಕೊಡೋದಕ್ಕೆ ನಾನು ಇಷ್ಟ ಪಡೋದಿಲ್ಲ.ರಾಜಕೀಯವಾಗಿ ಮಾತಾಡ್ತಿದಿನಿ ಅನ್ಕೋಬೇಡಿ. ಈ ದೇಶದಲ್ಲಿ ಇದೀವಿ ಅಂದ್ರೆ ಕಾನೂನಿನ ಮೇಲೆ ನಂಬಿಕೆ ಇರ್ಬೇಕು ಎಂದ್ರು. ಅಲ್ಲದೇ ದರ್ಶನ್ ತಪ್ಪು ಮಾಡಿದ್ದಾರೆ ಅಂತ ಹೆಂಗೆ ಹೇಳೋದು..? ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದ್ರು. ಕೋರ್ಟ್ ಇದೆ ನೋಡೋಣ ಎಂದು ಸುದೀಪ್ ಹೇಳಿದ್ರು.
ದರ್ಶನ್ ಫ್ಯಾನ್ಸ್ ಹಾಗೂ ಸ್ನೇಹದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರವರ ಫ್ಯಾನ್ಸ್ ಗೆ ಅವರದ್ದೇ ಆದ ನೋವು ಇರುತ್ತೆ. ನನ್ನ ಫ್ಯಾನ್ಸ್ ನಾ ಮೈನ್ಟೈನ್ ಮಾಡಬೋದು. ಆದರೆ ಬೇರೆ ಅವರ ಫ್ಯಾನ್ಸ್ ಕರೆಕ್ಷನ್ ಮಾಡೋಕೆ ನನಗಾಗಲ್ಲ.ನಾನು ದರ್ಶನ್ ಮಾತೇ ಆಡ್ತಿಲ್ಲ.ನಾವು ಒಳ್ಳೇದು ಬಯಸುತಿವಿ ಅನ್ನೋ ಕಾರಣಕ್ಕೆ ಒಳ್ಳೇದು ಆಗ್ಬೇಕು ಅಂತಿಲ್ಲ.ದರ್ಶನ್ ನಾನು ಸರಿ ಇಲ್ಲ ಅನ್ನೋ ಬದಲು ನಾವಿಬ್ರು ಒಟ್ಟಿಗೆ ಸರಿ ಇಲ್ಲ.ಇಬ್ಬರು ವಿಭಿನ್ನ ಟೇಸ್ಟ್ ಇರೋ ವ್ಯಕ್ತಿಗಳು.ಒಬ್ಬ ವ್ಯಕ್ತಿ ಸಮಾಜದಲ್ಲಿ ಅಷ್ಟು ದೊಡ್ದದಾಗಿ ಬೆಳೆದಿದ್ದಾನೆ ಅಂದ್ರೆ ಸ್ವತಃ ಬುದ್ದಿ ಇರುತ್ತೆ. ಇನ್ನೊಬರನ್ನ ತಿದ್ದೋ ಶಕ್ತಿ ನನಗಿಲ್ಲ.ನನ್ನ ಮಾತು ಕೇಳೋ ವ್ಯಕ್ತಿ ಆದ್ರೆ ಹೇಳ್ಬೋದು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇನ್ನು ದರ್ಶನ್ ಅವರನ್ನು ಭೇಟಿಯಾಗೋದಕ್ಕೆ ಬಳ್ಳಾರಿ ಜೈಲಿಗೆ ಹೋಗ್ತೀರಾ ಅಂತಾ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್ ನನ್ನ ಬರ್ತ್ಡೇಗೂ ಮುಂಚೆ ಮಾತಾಡಿಕೊಂಡಿದ್ರೆ,ದರ್ಶನ್ ಭೇಟಿಗೆ ನಾನ್ ಹೋಗ್ತಿದ್ದೆ ಅನ್ಸುತ್ತೆ.ದರ್ಶನ್ ಜೊತೆ ಸುದೀಪ್ ಇದ್ದಿದ್ರೆ ಈ ಸ್ಥಿತಿ ಬರ್ತಿಲ್ಲಿಲ್ವಾ ಅಂತಾ ಹೇಳೋದ್ ತಪ್ಪಾಗುತ್ತೆ.ದರ್ಶನ್ ಭೇಟಿಗೆ ಹೋಗಬೇಕು ಅಂತ ಅನಿಸಿದೆಯಾ ಅಂತಾ ಕೇಳಿದ್ದಕ್ಕೆ ಸುದೀಪ್ ಹಾಗೆಲ್ಲ ಅಂದ್ಕೊಳ್ಲೋಕ್ ಆಗಲ್ಲ ಈಗ ಎಂದು ಉತ್ತರಿಸಿದ್ದಾರೆ.