ಬೆಂಗಳೂರು; ಕಿಚ್ಚ ಸುದೀಪ್ ಅವರು ಇಂದು ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾಧ್ಯಮದವರು ಕಿಚ್ಚ ಸುದೀಪ್ ಅವರನ್ನು ದರ್ಶನ್ ವಿತಾರದ ಕುರಿತಾಗಿ ಪ್ರಶ್ನೆಗಳನ್ನು ಕೇಳಿದ್ರು. ಈ ವೇಳೆ ಕಿಚ್ಚ ಸುದೀಪ ಅವರು ದರ್ಶನ್ ಅವರನ್ನು ಹೊರಗಡೆ ಕರ್ಸಿ ಅಂತ ನಾ..? ನಾನು ಒಳಗಡೆ ಹೋಗ್ಲಿ ಅಂತ ನಾ..? ನೀವು ಕೇಳೋದಾ ಅಂತಾ ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ್ರು.
ದರ್ಶನ್ ಅವರಿಗೆ ಅಂತ ಫ್ಯಾನ್ಸ್ ಇದ್ದಾರೆ, ಕುಟುಂಬ ಇದೆ. ಯಾರಿಗೂ ನೋವು ಕೊಡೋದಕ್ಕೆ ನಾನು ಇಷ್ಟ ಪಡೋದಿಲ್ಲ.ರಾಜಕೀಯವಾಗಿ ಮಾತಾಡ್ತಿದಿನಿ ಅನ್ಕೋಬೇಡಿ. ಈ ದೇಶದಲ್ಲಿ ಇದೀವಿ ಅಂದ್ರೆ ಕಾನೂನಿನ ಮೇಲೆ ನಂಬಿಕೆ ಇರ್ಬೇಕು ಎಂದ್ರು. ಅಲ್ಲದೇ ದರ್ಶನ್ ತಪ್ಪು ಮಾಡಿದ್ದಾರೆ ಅಂತ ಹೆಂಗೆ ಹೇಳೋದು..? ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದ್ರು. ಕೋರ್ಟ್ ಇದೆ ನೋಡೋಣ ಎಂದು ಸುದೀಪ್ ಹೇಳಿದ್ರು.
ದರ್ಶನ್ ಫ್ಯಾನ್ಸ್ ಹಾಗೂ ಸ್ನೇಹದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್ ಅವರವರ ಫ್ಯಾನ್ಸ್ ಗೆ ಅವರದ್ದೇ ಆದ ನೋವು ಇರುತ್ತೆ. ನನ್ನ ಫ್ಯಾನ್ಸ್ ನಾ ಮೈನ್ಟೈನ್ ಮಾಡಬೋದು. ಆದರೆ ಬೇರೆ ಅವರ ಫ್ಯಾನ್ಸ್ ಕರೆಕ್ಷನ್ ಮಾಡೋಕೆ ನನಗಾಗಲ್ಲ.ನಾನು ದರ್ಶನ್ ಮಾತೇ ಆಡ್ತಿಲ್ಲ.ನಾವು ಒಳ್ಳೇದು ಬಯಸುತಿವಿ ಅನ್ನೋ ಕಾರಣಕ್ಕೆ ಒಳ್ಳೇದು ಆಗ್ಬೇಕು ಅಂತಿಲ್ಲ.ದರ್ಶನ್ ನಾನು ಸರಿ ಇಲ್ಲ ಅನ್ನೋ ಬದಲು ನಾವಿಬ್ರು ಒಟ್ಟಿಗೆ ಸರಿ ಇಲ್ಲ.ಇಬ್ಬರು ವಿಭಿನ್ನ ಟೇಸ್ಟ್ ಇರೋ ವ್ಯಕ್ತಿಗಳು.ಒಬ್ಬ ವ್ಯಕ್ತಿ ಸಮಾಜದಲ್ಲಿ ಅಷ್ಟು ದೊಡ್ದದಾಗಿ ಬೆಳೆದಿದ್ದಾನೆ ಅಂದ್ರೆ ಸ್ವತಃ ಬುದ್ದಿ ಇರುತ್ತೆ. ಇನ್ನೊಬರನ್ನ ತಿದ್ದೋ ಶಕ್ತಿ ನನಗಿಲ್ಲ.ನನ್ನ ಮಾತು ಕೇಳೋ ವ್ಯಕ್ತಿ ಆದ್ರೆ ಹೇಳ್ಬೋದು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಇನ್ನು ದರ್ಶನ್ ಅವರನ್ನು ಭೇಟಿಯಾಗೋದಕ್ಕೆ ಬಳ್ಳಾರಿ ಜೈಲಿಗೆ ಹೋಗ್ತೀರಾ ಅಂತಾ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್ ನನ್ನ ಬರ್ತ್ಡೇಗೂ ಮುಂಚೆ ಮಾತಾಡಿಕೊಂಡಿದ್ರೆ,ದರ್ಶನ್ ಭೇಟಿಗೆ ನಾನ್ ಹೋಗ್ತಿದ್ದೆ ಅನ್ಸುತ್ತೆ.ದರ್ಶನ್ ಜೊತೆ ಸುದೀಪ್ ಇದ್ದಿದ್ರೆ ಈ ಸ್ಥಿತಿ ಬರ್ತಿಲ್ಲಿಲ್ವಾ ಅಂತಾ ಹೇಳೋದ್ ತಪ್ಪಾಗುತ್ತೆ.ದರ್ಶನ್ ಭೇಟಿಗೆ ಹೋಗಬೇಕು ಅಂತ ಅನಿಸಿದೆಯಾ ಅಂತಾ ಕೇಳಿದ್ದಕ್ಕೆ ಸುದೀಪ್ ಹಾಗೆಲ್ಲ ಅಂದ್ಕೊಳ್ಲೋಕ್ ಆಗಲ್ಲ ಈಗ ಎಂದು ಉತ್ತರಿಸಿದ್ದಾರೆ.
ಈ ಬಾರಿ ಬಿಗ್ ಬಾಸ್ ಶೋನ ಕಿಚ್ಚ ಸುದೀಪ್ ಹೋಸ್ಟ್ ಮಾಡಲ್ವಾ? ಏನಂದ್ರು ಅಭಿನಯ ಚಕ್ರವರ್ತಿ?
ಬೆಂಗಳೂರು; ನಟ ಕಿಚ್ಚ ಸುದೀಪ್ ಇವತ್ತು ದಿಢೀರ್ ಅಂತಾ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಕಿಚ್ಚ ಸುದೀಪ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ರು.
ಮೊದಲಿಗೆ ತಮ್ಮ ಹುಟ್ಟುಹಬ್ಬದ ಬಗ್ಗೆ ಮಾತನಾಡಿದ ನಟ ಕಿಚ್ಚ ಸುದೀಪ್ ನಾರ್ಮಲ್ ಆಗಿ ಬರ್ತ್ಡೇ ಅಂದಾಗ ಮನೆ ಹತ್ರ ಫ್ಯಾನ್ಸ್ ಬರ್ತಾರೆ .ಆದ್ರೆ ಕಳೆದ ಬಾರಿ 25 ಸಾವಿರ ಜನ ಬಂದು ಗೊಂದಲ ಆಗಿತ್ತು. ಪ್ರತಿ ಬಾರಿ ಜೆಪಿ ನಗರದಲ್ಲಿರುವ ನನ್ನ ತಂದೆ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದೆ. ಆದರೆ ಈ ಬಾರಿ ನಾನುಹುಟ್ಟುಹಬ್ಬವನ್ನು ಬೇರೆ ಕಡೆ ಮಾಡೋಕೆ ನಿರ್ಧರಿಸಿದ್ದೇನೆ ಎಂದು ಸುದೀಪ್ ತಿಳಿಸಿದ್ರು. ಈ ಬಾರಿ ಯಾರಿಗೂ ತೊಂದರೆ ಆಗದಂತೆ ಜಯನಗರದ ಎಂಇಎಸ್ ಗ್ರೌಂಡ್ ನಲ್ಲಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಲಿದ್ದಾರೆ.ಬರ್ತಡೇ ದಿನ ಬೆಳಗ್ಗೆ 10 ಗಂಟೆಯಿಂದ 12ಗಂಟೆವರೆಗೂ ಫ್ಯಾನ್ಸ್ ಅನ್ನು ಅಲ್ಲೇ ಕಿಚ್ಚ ಭೇಟಿಯಾಗಲಿದ್ದಾರೆ,
ಇಜೇ ವೇಳೆ ಕಿಚ್ಚ ಕಳೆದ ವರ್ಷ ಬರ್ತ್ ಡೇ ದಿನ ಅನಾನುಕೂಲ ಆಯ್ತು.ಈ ಬಾರಿ ಅದು ಆಗೋದು ಬೇಡ ಎಂದ್ರು.ಬರ್ತ್ ಡೇ ದಿನ ಸಿನಿಮಾಗಳು ಅನೌನ್ಸ್ ಮಾಡ್ತೀವಿ.ವರ್ಷಕ್ಕೆ ಎರಡು ಸಿನಿಮಾ ಮಾಡ್ಬೇಕು ಅಂತಾ ಆಸೆ ನಮಗೂ ಇದೆ.ಕಾಲ ಕೂಡಿ ಬರ್ಬೇಕು ಅಂದ್ರು. ಈ ಬಾರಿ ಬಿಗ್ ಬಾಸ್ ಶೋನ ಹೋಸ್ಟ್ ಮಾಡ್ತೀರಾ ಅಂತಾ ಮೀಡಿಯಾದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 10 ವರ್ಷ ನಾನು ಬಿಗ್ ಬಾಸ್ ಗೋಸ್ಕರ ಡೆಡಿಕೇಟ್ ಮಾಡಿದ್ದೀನಿ.ಎಲ್ಲರಿಗೂ ಗೊತ್ತಿರೋದು ನಾನು ಬಿಗ್ ಬಾಸ್ ನಡೆಸಿಕೊಡ್ತೀನಿ ಅಂತಾ.ಹೇಗೆ ನಡೆಸಿಕೊಂಡ್ತೀನಿ ಎಷ್ಟೊತ್ತು ನಿಂತಿರ್ತೀನಿ ಗೊತ್ತಾ..?ಬೆಳಗ್ಗೆ 3:30 ಪ್ಯಾಕ್ ಅಪ್ ಆದ್ರೆ ಏರ್ಪೋರ್ಟ್ ನಲ್ಲಿ ಕಾದು ಜರ್ನಿ ಮಾಡಿ ಶೋ ನಡೆಸಿಕೊಡ್ತಿದ್ದೆ.ಇದೆಲ್ಲಾ ನನ್ನ ಸ್ವಂತ ಚಾರ್ಜಸ್. ಬಿಗ್ ಬಾಸ್ ಅವರು ಕೊಡಲ್ಲ.2 ರಿಂದ 3 ಗಂಟೆ ನಿಂತು ಶೋ ನಡೆಸಿಕೊಡ್ತಿದ್ದೆ. ಬಿಗ್ ಬಾಸ್ ಶೋ ಎಂಜಾಯ್ ಮಾಡಿದೀನಿ .ಆದ್ರೆ ಬಿಗ್ ಬಾಸ್ ಶೋ ನಡೆಸೋಕೆ ಇಂಟರೆಸ್ಟ್ ಇಲ್ಲ ಅನ್ನೋ ಸುದ್ದಿ ಹರಿದಾಡಿದೆ.ನಾನು ವಿಶ್ ಮಾಡ್ತಿದೀನಿ ಬೇರೆ ಅವರನ್ನ ಆಯ್ಕೆ ಮಾಡಿಕೊಳ್ಳಲಿ ಎಂದರು.
ಇನ್ನು ಗೌರವ ಡಾಕ್ಟರೇಟ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ನಾನು ಅಂತಾದ್ದೇನು ಮಾಡಿಲ್ಲ.ಹತ್ತಾರು ಸಿನಿಮಾ ಮಾಡಿದ್ದೀನಿ.ನನ್ನ ಪ್ರಕಾರ ನಾನು ಏನಾದ್ರೂ ಮಾಡಿದ್ದೀನಿ ಅಂತಾ ಅಂದಾಗ ಪತ್ರ ಬರೆದು ಕೊಡಿ ಅಂತೀನಿ.ಅವ್ರು ಕೊಟ್ಟಿರೋ ಡಾಕ್ಟರೇಟ್ ಮೇಲೆ ತುಂಬಾ ಗೌರವ ಇದೆ.ನಾನು ಇನ್ನು ಲೈಫ್ ನಲ್ಲಿ ಮಾಡೋದು ತುಂಬಾ ಇದೆ ಎಂದ್ರು. ಇನ್ನು ಸ್ಟಾರ್ ವಾರ್ ಬಗ್ಗೆ ಮಾತನಾಡಿದ ಸುದೀಪ್ ಸ್ಟಾರ್ ವಾರ್ ಆನ್ ಲೈನ್ ಫ್ರೆಂಡ್ಸ್ ಗಳು ಮಾಡ್ಕೊತಾರೆ.ಅದೆಲ್ಲ ಇರಲಿ ಬಿಡಿ ಇಲ್ಲಾಂದ್ರೆ ಮಜಾ ಇರೋಲ್ಲ ಎಂದು ಜೋಕ್ ಮಾಡಿದ್ರು.
ಓಟಿಟಿ ಬರಲೇಬೇಕು, ಆದ್ರೆ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆದ್ರೆ ಓಟಿಟಿ ನಲ್ಲಿ ತಗೋತಾರೆ.ಇನ್ನು ಬಿಲ್ಲಾ ರಂಗ ಬಾಷಾ ಬಗ್ಗೆಮಾತನಾಡಿದ ಅವ್ರು ಬಿಲ್ ರಂಗ ಬಾಷಾ ಬಿಗ್ ಸ್ಕೇಲ್ ಸಿನಿಮಾ. ಇದಕ್ಕೆ ತಯಾರಿ ಮಾಡ್ಕೋಬೇಕು.3-4 ಸಿನಿಮಾಗೆ ಡೇಟ್ಸ್ ಕೊಡ್ತಿದ್ದೀನಿ.ಬಿಲ್ಲಾ ರಂಗ 2025ಕ್ಕೆ ರಿಲೀಸ್ ಮಾಡೋಕೆ ಪ್ಲಾನ್ ಇದೆ.ಒಂದೇ ಟೈಂನಲ್ಲಿ ಒಂದು ಸಿನಿಮಾ ಮಾಡೋದು ಬಿಡ್ತೀನಿ.ಪ್ಯಾರಲಲ್ಲಾಗಿ ಸಿನಿಮಾಗಳಲ್ಲಿ ತೊಡಗಿಸಿಕೊಳ್ಬೇಕು ಎಂದ್ರು.










