ಮನೆ Latest News ಹೇಗಿದೆ ಗೊತ್ತಾ ದಸರಾ ಆನೆಗಳ ಫುಡ್ ಮೆನು; ದಿನಕ್ಕೆರಡು ಬಾರಿ ಸಿಗುತ್ತೆ ಪೌಷ್ಠಿಕ ಆಹಾರ

ಹೇಗಿದೆ ಗೊತ್ತಾ ದಸರಾ ಆನೆಗಳ ಫುಡ್ ಮೆನು; ದಿನಕ್ಕೆರಡು ಬಾರಿ ಸಿಗುತ್ತೆ ಪೌಷ್ಠಿಕ ಆಹಾರ

0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿಯಿದ್ದು ಈಗಾಗಲೇ ದಸರಾ ಆನೆಗಳು ಕಾಡಿನಿಂದ ಮೈಸೂರಿಗೆ ಆಗಮಿಸಿ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿವೆ. ದಸರಾಗಾಗಿ ಗಜಪಡೆ ಭರ್ಜರಿ ತಯಾರಿಯಲ್ಲಿ ತೊಡಗಿವೆ. ಇನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಪ್ರತಿನಿತ್ಯ ಎರಡು ಬಾರಿ ಪೌಷ್ಠಿಕ ಆಹಾರ ಪೂರೈಕೆ ಮಾಡಲಾಗುತ್ತಿದೆ.

ಹೌದು.. ಆನೆಗಳ ತೂಕ ಹೆಚ್ಚಿಸಲು ಮತ್ತು ಅವುಗಳ ಆರೋಗ್ಯದ ಹಿತದೃಷ್ಟಿಯಿಂದ ಆನೆಗಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತಿದೆ.ವಿವಿಧ ಬಗೆಯ ಧಾನ್ಯಗಳನ್ನು ಬೇಯಿಸಿ ಅದಕ್ಕೆ ತರಕಾರಿಗಳನ್ನು ಮಿಶ್ರಣ ಮಾಡಿ ಪ್ರತಿನಿತ್ಯ 2 ಬಾರಿ ವಿಶೇಷ ಆಹಾರವನ್ನು ದಸರಾ ಆನೆಗಳಿಗೆ ತಿನ್ನಿಸಲಾಗುತ್ತಿದೆ.

ಪ್ರತಿ ನಿತ್ಯ ಒಂದು ಗಂಡು ಆನೆಗೆ 650 ರಿಂದ 750 ಕೆಜಿ ಆಹಾರ ಕೊಡಲಾಗುತ್ತಿದೆ.. ಹೆಣ್ಣು ಆನೆಗೆ 450 ರಿಂದ 500 ಕೆಜಿ ಆಹಾರ ನೀಡಲಾಗುತ್ತಿದೆ.ಒಂದು ಆನೆಗೆ ಪ್ರತಿನಿತ್ಯ 6 ರಿಂದ 7 ಕೆಜಿ ಪ್ರೋಟಿನ್ ಯುಕ್ತ ಆಹಾರ ನೀಡಲಾಗುತ್ತಿದ್ದು,ಭತ್ತ, ಗೋಧಿ, ಬೇಳೆ, ಬೆಲ್ಲ,  ತರಕಾರಿ, ಬೆಣ್ಣೆ ಮಿಶ್ರಿತ ಆಹಾರವನ್ನು ಕೊಡಲಾಗುತ್ತಿದೆ. ಇನ್ನು ಆನೆಗಳಿಗೆ ಬೇಯಸಿದ ವಿಶೇಷ ಆಹಾರವನ್ನು ನೀಡಲಾಗುತ್ತಿದೆ.

ಮೈಸೂರಿಗೆ ಆಗಮಿಸಿದ ದಸರಾ ಗಜಪಡೆ: ಆನೆಗಳಿಗೆ ವಿಮೆ ಮಾಡಿಸಿದ ಅರಣ್ಯ ಇಲಾಖೆ‌

ಮೈಸೂರು; ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿದೆ. ಈಗಾಗಲೇ 14 ಆನೆಗಳು ನಾಡಹಬ್ಬದಲ್ಲಿ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲು ಮೈಸೂರಿಗೆ ಆಗಮಿಸಿವೆ. ಇನ್ನು ಮೈಸೂರಿಗೆ ಆಗಮಿಸಿದ ಆನೆಗಳ ಟೀಂಗೆ ಅರಣ್ಯ ಇಲಾಖೆ‌ ವಿಮೆ ಮಾಡಿಸಿವೆ.

ಇಂದು ಮೈಸೂರಿಗೆ ಆನೆಗಳ ಮೊದಲ ತಂಡ ಎಂಟ್ರಿಯಾಗಿದೆ. ಈ ಆನೆಗಳಿಗೆ ಅರಣ್ಯ ಇಲಾಖೆ ವಿಮೆ ಮಾಡಿದ್ದು, ಆನೆಗಳಿಗೆ 87 ಲಕ್ಷದ 50 ಸಾವಿರ ರೂಪಾಯಿ,  ಸಿಬ್ಬಂದಿಗೆ 1 ಕೋಟಿ, ಹಾಗೂ ಸಾರ್ವಜನಿಕರು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ 50 ಲಕ್ಷ ರೂಪಾಯಿಗಳನ್ನು ಅರಣ್ಯ ಇಲಾಖೆ ವಿಮೆ ಮಾಡಿಸಿದೆ.ಇದಕ್ಕಾಗಿ ವಿಮಾ ಕಂಪನಿಗೆ ಪ್ರೀಮಿಯಂ ಹಣ ಪಾವತಿ ಮಾಡಲಾಗಿದೆ.

ಇಂದಿನಿಂದ ಮತ್ತೆ ಗಜಪಡೆ ದಸರಾ ಮುಗಿಸಿ ಮತ್ತೆ ಕಾಡಿಗೆ ವಾಪಾಸ್ ತೆರಳುವವರೆಗೂ ಈ ವಿಮೆ ಚಾಲ್ತಿಯಲ್ಲಿರುತ್ತದೆ.ನಾಲ್ಕು ಮೀಸಲು ಆನೆಗಳನ್ನು ಸೇರಿ ಒಟ್ಟು 18 ಆನೆಗಳಿಗೆ 87 ಲಕ್ಷದ 50 ಸಾವಿರ ರೂಪಾಯಿ ವಿಮೆ ಮಾಡಲಾಗಿದೆ. ಇನ್ನು ಅರಣ್ಯಧಿಕಾರಿಗಳು, ಮಾವುತರು, ಕಾವಾಡಿಗಳಿಗೆ ತಲಾ 2 ಲಕ್ಷದಂತೆ 50 ಜನರಿಗೆ 1 ಕೋಟಿ ವಿಮೆ ಮಾಡಿಸಲಾಗಿದೆ.ಅದೇ ರೀತಿ ಸಾರ್ವಜನಿಕರು ಮತ್ತು ಆಸ್ತಿಪಾಸ್ತಿಗೆ 50 ಲಕ್ಷ ವಿಮೆ ಮಾಡಲಾಗಿದೆ. ಆನೆಗಳು ಮೈಸೂರು ದಸರಾದಲ್ಲಿ ಪಾಲ್ಗೊಳುವ ತನಕ  ತಾಲೀಮು ಅಥವ ಇನ್ನಿತರ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಥವ ಸಾರ್ವಜನಿಕ ಆಸ್ತಿಗೆ ತೊಂದರೆ ಮಾಡಿದರೆ ಎಂದು ಅದಕ್ಕಾಗಿ 50 ಲಕ್ಷದ ವರೆಗೆ ವಿಮೆ ಸೌಲಭ್ಯ ಮಾಡಲಾಗಿದೆ. ಅದರಂತೆ ಒಟ್ಟು ಒಟ್ಟು 2 ಕೋಟಿಯ 37 ಲಕ್ಷದಜ 50 ಸಾವಿರ ರೂಪಾಯಿ ವಿಮೆಯನ್ನು ಅರಣ್ಯ ಇಲಾಖೆ ಮಾಡಿದೆ.

ಮೊದಲ ಹಂತದಲ್ಲಿ ಮೈಸೂರಿಗೆ ಎಂಟ್ರಿಕೊಟ್ಟ ಆನೆಗಳು ಯಾವುವು?

ಅಭಿಮನ್ಯು – ಕ್ಯಾಪ್ಟನ್

ಧನಂಜಯ

ಗೋಪಿ

ಭೀಮ

ಕಂಜನ್

ರೋಹಿತ್

ಏಕಲವ್ಯ

ವರಲಕ್ಷ್ಮಿ

ಲಕ್ಷ್ಮಿ

ಎರಡನೇ ಹಂತದಲ್ಲಿ ನಾಡಿಗೆ ಬರುವ ಆನೆಗಳು

ಪ್ರಶಾಂತ

ಮಹೇಂದ್ರ

ಸುಗ್ರೀವ

ಲಕ್ಷ್ಮಿ

ಹಿರಣ್ಯ

ಮೀಸಲು ಆನೆಗಳು

ಹರ್ಷ

ಅಯ್ಯಪ್ಪ

ಪಾರ್ಥಸಾರಥಿ

ಮಾಲಾದೇವಿ

ಇಷ್ಟು ಆನೆಗಳು ಮೈಸೂರು ದಸರಾದಲ್ಲಿ ಭಾಗಿಯಾಗಲಿವೆ. ಈಗ 14 ಆನೆಗಳು ಮಾತ್ರ ಇಂದು ಮೈಸೂರಿಗೆ ಆಗಮಿಸಿವೆ. ಉಳಿದ ಆನೆಗಳು ಎರಡನೇ ಹಂತದಲ್ಲಿ ಬರಲಿವೆ.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಭರದ ಸಿದ್ಧತೆ; ಸಾಂಸ್ಕೃತಿಕ ನಗರಿಗೆ ಎಂಟ್ರಿ ಕೊಟ್ಟ ಗಜಪಡೆ

ಮೈಸೂರು; ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಸಾಂಸ್ಕೃತಿಕ ನಗರಿಗೆ ಗಜಪಡೆ ಆಗಮಿಸಿದೆ. ಕಾಡಿನಿಂದ ಇಂದು ಗಜಪಡೆ ಮೈಸೂರಿಗೆ ಆಗಮಿಸಿದೆ.

ಬೆಳಗ್ಗೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ‌ ನೀಡಿದರು. ನಾಗರಹೊಳೆ ಅಭಯಾರಣ್ಯದ ಅಂಚಿನಲ್ಲಿರುವ ವೀರನಹೊಸಹಳ್ಳಿಯಲ್ಲಿ ಬೆಳಿಗ್ಗೆ 10:20 ರಿಂದ 10:45ರೊಳಗಿನ ಶುಭ ಮುಹೂರ್ತದಲ್ಲಿ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ‌ ನೀಡಲಾಯಿತು.

ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಚಿವರಾದ ಕೆ ವೆಂಕಟೇಶ್, ಈಶ್ವರ ಖಂಡ್ರೆ, ಸಂಸದ ಸುನಿಲ್‌ ಬೋಸ್, ಶಾಸಕರಾದ ಜಿ ಡಿ ಹರೀಶ್ ಗೌಡ, ಡಿ ರವಿಶಂಕರ್, ಅನಿಲ್ ಚಿಕ್ಕಮಾದು, ಎಂಎಲ್ಸಿ ವಿವೇಕಾನಂದ, ಮುಡಾ ಅಧ್ಯಕ್ಷ ಕೆ ಮರೀಗೌಡ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯರಿಂದ ದಸರಾ ಗಜಪಡೆಗೆ ಪುಷ್ಪಾರ್ಚನೆ ಮಾಡಿದರು.

ಆರತಿ ಬೆಳಗಿ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿನತ್ತ ಪಯಣಿಸಿದವು.

ಮೈಸೂರಿಗೆ ಆಗಮಿಸಿದ ಆನೆಗಳ ವಯಸ್ಸು;

ಕ್ಯಾಪ್ಟನ್ ಅಭಿಮನ್ಯು (58)

ಭೀಮ (24)

ಗೋಪಿ (41)

ಧನಂಜಯ (43)

ಕಂಜನ್‌ (25)

ರೋಹಿತ್ (22)

ಲಕ್ಷ್ಮಿ (53)

ವರಲಕ್ಷ್ಮಿ (67)

ಏಕಲವ್ಯ (38)

ಆನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಿದ್ದು, ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸಿದ್ದು, ಹೆಚ್ಚುವರಿಯಾಗಿ 4 ಮೀಸಲು ಆನೆಗಳು ಗುರುತು ಮಾಡಲಾಗಿದೆ.ದಸರಾದಲ್ಲಿ ಪಾಲ್ಗೊಳ್ಳಲು ಒಟ್ಟು ಹದಿನಾಲ್ಕು ಆನೆಗಳು ಮಾತ್ರ ಮೈಸೂರಿಗೆ ಆಗಮಿಸಲಿವೆ.ಅಗತ್ಯ ಬಿದ್ದರೆ ಮಾತ್ರ ಮೀಸಲು ಆನೆಗಳನ್ನು ಕರೆತರಲು ತೀರ್ಮಾ‌ನವನ್ನು ಮಾಡಲಾಗಿದೆ.

ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದ ಆವರಣದಲ್ಲಿ ಇಂದು ಮತ್ತು ನಾಳೆ ಅಭಿಮನ್ಯು ಅಂಡ್ ಟೀಮ್ ವಾಸ್ತವ್ಯ ಹೂಡಲಿದೆ. ಶುಕ್ರವಾರ ಅರಮನೆ ಆವರಣ ಗಜಪಡೆ ಆಗಮಿಸಲಿವೆ.ಆನೆಗಳು, ಮಾವುತರು ಹಾಗು ಕಾವಾಡಿಗಳ ವಾಸ್ತವ್ಯಕ್ಕಾಗಿ ಮೈಸೂರು ಅರಮನೆ ಆವರಣದಲ್ಲಿ ಸಕಲ ವ್ಯವಸ್ಥೆಯನ್ನು ಈಗಗಾಲೇ ಮಾಡಲಾಗಿದೆ.