ಬೆಂಗಳೂರು; ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾಡಿರುವ ಆರೋಪಕ್ಕೆ ಸಚಿವ ಎಂ.ಬಿ.ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಛಲವಾದಿ ನಾರಾಯಣಸ್ವಾಮಿ ಅವರನ್ನ ಶೆಡ್ ಗಿರಾಕಿ ಎಂದಿದ್ದಾರೆ. ರಾಹುಲ್ ಖರ್ಗೆಯವರು ಜಮೀನು ತೆಗೆದುಕೊಂಡು ವರ್ಷಾನುಗಟ್ಟಲೆ ಸುಮ್ಮನೆ ಕೂರಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ.ಇವತ್ತು ನಾರಾಯಣಸ್ವಾಮಿ ಅವರು ರಾಜಕೀಯವಾಗಿ ಈ ಸ್ಥಾನಕ್ಕೆ ಬಂದಿದ್ದಾರೆ ಅಂದ್ರೆ ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಕಾರಣ. ಇದನ್ನ ನಾರಾಯಣಸ್ವಾಮಿ ಮರೆಯಬಾರದು ಎಂದಿದ್ದಾರೆ.
ಖರ್ಗೆ ಅವರು ರೈಲ್ವೆ ಸಚಿವರಿದ್ದಾಗ ಇದೇ ನಾರಾಯಣ ಸ್ವಾಮಿ ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕರನ್ನಾಗಿ ಮಾಡಲಾಯಿತು.ಇವರಿಗೆ ರೈಲ್ವೆ ಭವನದಲ್ಲಿ ಕಚೇರಿ ಕೂಡ ಕೊಟ್ಟಿದ್ದರು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಖರ್ಗೆ ಅವರ ಬಗ್ಗೆ ಮಾತಾಡ್ತಾರೆ.ಖರ್ಗೆ ಅವರೇನೂ ನಾರಾಯಣಸ್ವಾಮಿ ಥರಾ ಶೆಡ್ ಗಿರಾಕಿನಾ ಎಂದು ಪ್ರಶ್ನೆ ಮಾಡಿದ್ದಾರೆ. ನಾರಾಯಣಸ್ವಾಮಿ ಇನ್ನು ಅವರದ್ದು ಬಹಳ ಇದೆ ಎಂದು ಎಂ.ಬಿ.ಪಾಟೀಲ್ ಕಿಡಿ ಕಾರಿದ್ದಾರೆ.
ರಾಷ್ಟ್ರೋತ್ಥಾನ ಪರಿಷತ್ ಗೂ ಏರೋಸ್ಪೇಸ್ ಪಾರ್ಕ್ ನಲ್ಲಿ 5 ಎಕರೆ ಜಮೀನು ಕೊಡಲಾಗಿದೆ.ಮಲ್ಟಿ ಯುಟಿಲಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ಗೆ ಜಮೀನು ಕೊಡಲಾಗಿದೆ.ಆದರೆ ಅಲ್ಲಿ ಯಾವುದೇ ಚಟುವಟಿಕೆ ನಡೆಸಿಲ್ಲ.ಇದನ್ನು ವಾಪಸ್ ಪಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ.ಇದಕ್ಕೆ ಕೆಲವೊಂದು ಪ್ರಕ್ರಿಯೆ ಇವೆ.ಹಾಗಂತ ಭೂಮಿ ಪಡೆದುಕೊಳ್ಳಲು ಅವರಿಗೂ ಅವಕಾಶ ಇದೆನೊಟೀಸ್ ಕೊಟ್ಟು ಮುಂದಿನ ಕ್ರಮ ಕೈಗೊಳ್ಳಲು ನಾವು ಸಿದ್ಧ ಎಂದಿದ್ದಾರೆ.ಮುಂದೆ ಹೆಚ್ಚಿನ ಮಾಹಿತಿ ಕೊಡ್ತೇನೆ ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಮುರುಗೇಶ್ ನಿರಾಣಿ ಮೇಲೂ ಎಂ.ಬಿ ಪಾಟೀಲ್ ಆರೋಪ ಮಾಡಿದ್ದಾರೆ.2008ರಲ್ಲಿ ಕೈಗಾರಿಕೆ ಸಚಿವರು ಆಗಿದ್ದರು.12-03-2012ರಲ್ಲಿ ಬಾಗಲಕೋಟೆ ನವನಗರ ಎಗ್ರೋ ಟೆಕ್ ಪಾರ್ಕ್, ತಮ್ಮದೇ ಶಿಕ್ಷಣ ಸಂಸ್ಥೆ ತೇಜಸ್ ಇಂಟರ್ನ್ಯಾಷನಲ್ ಸ್ಕೂಲ್ ತಮ್ಮದೇ ಸಂಸ್ಥೆಗೆ 25 ಎಕರೆ ಭೂಮಿ ಪಡೆದಿದ್ದಾರೆ.ತಮ್ಮದೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಎಗ್ರೋ ಟೆಕ್ ಪಾರ್ಕ್ ನಲ್ಲಿ 25 ಎಕರೆ ಭೂಮಿ ಅಲರ್ಟ್ ಮಾಡ್ತಾರೆ.25 ಜೊತೆಗೆ ಮತ್ತೆ 6 ಎಕರೆ ಭೂಮಿಯನ್ನು ಪಡೆಯುತ್ತಾರೆ .2019 ಸಿ ಎ ಸೈಟ್ 6 ಎಕರೆ ಭೂಮಿಯನ್ನು ಪಡೆಯುತ್ತಾರೆ.ಒಟ್ಟು 31 ಎಕರೆ ಭೂಮಿಯನ್ನು ಮುರುಗೇಶ್ ನಿರಾಣಿ ಪಡೆದಿದ್ದಾರೆ ಎಂದಿದ್ದಾರೆ.
ಕೆಐಎಡಿಬಿಯಿಂದ ಜಮೀನು ಪಡೆದು ಅದನ್ನ ಸರಿಯಾಗಿ ಬಳಕೆ ಮಾಡಿಕೊಳ್ಳದಿದ್ದರೆ ಅಂತಹ ಜಮೀನುಗಳನ್ನು ವಾಪಸ್ ಪಡೆಯಲಾಗುವುದು. ಈಗಾಗಲೇ ಕೈಗಾರಿಕಾ ಉದ್ದೇಶಕ್ಕಾಗಿ ಪಡೆದ ಜಮೀನು, ಬಳಕೆಯಾಗದೆ ಹಾಗೆ ಉಳಿದಿದ್ದರೆ ವಾಪಸ್ ಕೈಗಾರಿಕಾ ಜಮೀನುಗಳನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಲು ಮುಂದಾಗಿದ್ದರೆ ಅಂತಹ ಜಮೀನು ವಾಪಸ್ ಪಡೆಯಲು ಆ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.ಸರ್ಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಮಾಡಲಿದೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.










