ಮನೆ Latest News ಕುಸ್ತಿಪಟು ವಿನೇಶ್ ಫೋಗಟ್ ಹರಿಯಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ; ಆಪ್ತ ಮೂಲಗಳಿಂದ ಮಾಹಿತಿ

ಕುಸ್ತಿಪಟು ವಿನೇಶ್ ಫೋಗಟ್ ಹರಿಯಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ; ಆಪ್ತ ಮೂಲಗಳಿಂದ ಮಾಹಿತಿ

0

ನವದೆಹಲಿ : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50 ಕೆಜಿ ಮಹಿಳೆಯರ ವಿಭಾಗದಲ್ಲಿ ಜಸ್ಟ್ 100 ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಫಿನಾಲೆಯಿಂದ ಅನರ್ಹಗೊಂಡ ವಿನೇಶ್ ಭಾರತಕ್ಕೆ ಬರುತ್ತಿದ್ದಂತೆ ಭವ್ಯ ಸ್ವಾಗತ ದೊರೆತಿದೆ.ಸ್ಪರ್ಧೆಯಿಂದ ವಿನೇಶ್ ಪೋಗಟ್ ಅನರ್ಹಗೊಳ್ಳುತ್ತಿದ್ದಂತೆ ಇಡೀ ದೇಸಕ್ಕೆ ದೇಶವೇ ಆಕೆಗಾಗಿ ಕಣ್ಣೀರು ಹಾಕಿತ್ತು. ಆಕೆಗಾದ ಅನ್ಯಾಯವನ್ನು ಪ್ರಶ್ನಿಸಿತ್ತು.

ಇದೀಗ ಆಕೆಯ ಆಪ್ತ ವಲಯದಿಂದ ಸುದ್ದಿಯೊಂದು ಹೊರ ಬಿದ್ದಿದೆ. ಕುಸ್ತಿಪಟು ವಿನೇಶ್ ಫೋಗಟ್ ಮುಂದಿನ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯುತ್ತಾರೆ ಅಂತಾ ಹೇಳಲಾಗುತ್ತಿದೆ. ವಿನೇಶ್ ಪೋಗಟ್ ಈ ಸುದ್ದಿಯನ್ನು ನಿರಾಕರಿಸಿದ್ರು ಆಪ್ತರು ಹೌದು ಎನ್ನುತ್ತಿದ್ದಾರೆ. ಅಲ್ಲದೇ ವಿನೇಶ್ ಪೋಗಟ್ ಅವರು ಆ ರೀತಿ ಸ್ಪರ್ಧೆ ಮಾಡಿದ್ರೆ ಏನಾಗುತ್ತೆ ಅಂತಾ ಹಲವರು ಪ್ರಶ್ನೆ ಮಾಡಿದ್ದಾರೆ. ಆಕೆ ಜನಪ್ರತಿನಿಧಿಯಾದರೆ ಈಗ ಆಕೆಗೆ ಆದಂತಹ ಅನ್ಯಾಯಗಳನ್ನು ಮುಂದೆ ಬೇರೆಯವರಿಗೆ ಆಗದಂತೆ ತಡೆಯಬಹುದು ಎಂದು ಅನೇಕರು ಹೇಳಿದ್ದಾರೆ. ಅಲ್ಲದೇ ಶುಭ ಹಾರೈಸಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್ ನಲ್ಲಿ ಪದಕ ಮಿಸ್ ಮಾಡಿಕೊಂಡ ವಿನೇಶ್ ಪೋಗಟ್ ಗೆ  ಭಾರತಕ್ಕೆ ಬರುತ್ತಿದ್ದಂತೆ ಸಿಗ್ತು ಚಿನ್ನದ ಪದಕ

ವದೆಹಲಿ : ಪ್ಯಾರಿಸ್‌ ಒಲಿಂಪಿಕ್ಸ್ ನಲ್ಲಿ ಪದಕ ಮಿಸ್ ಮಾಡಿಕೊಂಡ ವಿನೇಶ್ ಪೋಗಟ್  ಭಾರತಕ್ಕೆ ಬರುತ್ತಿದ್ದಂತೆ ಅವರಿಗೆ ಚಿನ್ನದ ಪದಕ ಸಿಕ್ಕಿದೆ.ಅಂದ್ಹೇಗೆ ಅಂತಾ ತಲೆ ಕೆರ್ಕೋಳ್ಳೋ ಮಂದಿಗೆ ಉತ್ತರ ಇಲ್ಲಿದೆ.

ಶನಿವಾರ ಭಾರತಕ್ಕೆ ಮರಳಿದ ಫೋಗಟ್‌ಗೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಅಭಿಮಾನಿಗಳನ್ನು ನೋಡಿ ಫೋಗಟ್ ಭಾವುಕರಾದರು. ಈ ವೇಳೆ ದೀಪಿಂದರ್ ಹೂಡಾ, ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸಂತೈಸುವ ಕೆಲಸ ಸ್ವಾಗತ ಸಿಕ್ಕಿದೆ. ಬಳಿಕ ತೆರೆದ ವಾಹನದಲ್ಲಿ ತಮ್ಮ ಗ್ರಾಮಕ್ಕೆ ತೆರಳಿದರು. ರೋಡ್‌ಶೋನಲ್ಲಿ ದೊಡ್ಡ ಗುಂಪು ಅವರಿಗೆ ಅದ್ಧೂರಿ ಸ್ವಾಗತ ಕೋರಿ ಅವರ ಜೊತೆ ಸಾಗಿತು.

ದೆಹಲಿಯಿಂದ ಬಾಳಲಿಗೆ ಹೋಗುವ ಮಾರ್ಗದಲ್ಲಿ, ಹಲವಾರು ಗ್ರಾಮಗಳಲ್ಲಿ ವಿನೇಶ್ ಬೆಂಬಲಿಗರು ಅವರನ್ನ ಸನ್ಮಾನಿಸಿದರು, 135 ಕಿಮೀ ದೂರದ ಪ್ರಯಾಣವು ಸುಮಾರು 13 ಗಂಟೆಗಳ ಕಾಲ ತೆಗೆದುಕೊಂಡಿತು. ಬಳಿಕ ಅವರ ಹುಟ್ಟೂರು ಬಾಳಲಿಯಲ್ಲಿ ಸಮುದಾಯದ ಹಿರಿಯರು ಚಿನ್ನದ ಪದಕ ನೀಡಿ ಗೌರವಿಸಿದರು. ಹೀಗಾಗಿ ವಿನೇಶ್ ಪೊಗಟ್ ಅವರು ಈ ರೀತಿಯಾಗಿ ಚಿನ್ನದ ಪದಕವನ್ನು ಪಡೆದಿದ್ದಾರೆ.

ಕುಸ್ತಿ ಪಂದ್ಯ ನನ್ನ ಎದುರು ಗೆದ್ದಿದೆ, ನಾನು ಸೋತಿದ್ದೇನೆ, ಕ್ಷಮಿಸಿ:  ಭಾವುಕ ಪೋಸ್ಟ್ ನೊಂದಿಗೆ ಕುಸ್ತಿಗೆ ವಿದಾಯ ಘೋಷಿಸಿದ ವಿನೇಶ್ ಪೋಗಟ್

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ  ವಿನೇಶ್ ಪೋಗಟ್ ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಂ ಜಾಸ್ತಿ ಇದ್ದಾರೆ ಅಂತಾ 50 ಕೆಜಿ ಮಹಿಳೆಯರ ಕುಸ್ತಿ ವಿಭಾಗದ ಫೈನಲ್ ಪಂದ್ಯದಿಂದ ಅವರನ್ನು ಒಲಿಂಪಿಕ್ಸ್ ಸಂಘಟಕರು ಅನರ್ಹಗೊಳಿಸಿದ್ರು. ಇದು ಕೋಟ್ಯಂತರ ಭಾರತೀಯರಿಗೆ ಬಹುದೊಡ್ಡ ಆಘಾತ. ಈ ಆಘಾತದಿಂದ ಹೊರ ಬರುವ ಮೊದಲೇ ಇದೀಗ ಮತ್ತೊಂದು ಎಲ್ಲದಕ್ಕಿಂತ ದೊಡ್ಡ ಆಘಾತ ಭಾರತೀಯರಿಗೆ ಎದುರಾಗಿದೆ.

ಹೌದು.. ಒಲಿಂಪಿಕ್ಸ್ ನಲ್ಲಿ ಕುಸ್ತಿ ಪಂದ್ಯದ ಫೈನಲ್ ನಿಂದ ಅನರ್ಹಗೊಂಡ ಬೆನ್ನಲ್ಲೇ ಬದುಕಿನ ಕಠಿಣ ನಿರ್ಧಾರವೊಂದನ್ನು ವಿನೇಶ್ ಪೋಗಟ್ ತೆಗೆದುಕೊಂಡಿದ್ದಾರೆ. ವಿನೇಶ್ ಪೋಗಟ್ ಕುಸ್ತಿ ಪಂದ್ಯಕ್ಕೆ ವಿದಾಯವನ್ನು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಒಂದು ಭಾವುಕರಾಗಿ ಹಾಕಿದ್ದಾರೆ. ಆ ಪೋಸ್ಟ್ ನ ಸಾಲುಗಳು ಇಂತಿವೆ. ಅಮ್ಮಾ..ನನ್ನ ವಿರುದ್ಧ ಕುಸ್ತಿ ಪಂದ್ಯ ಗೆದ್ದಿದೆ. ಆದರೆ ನಾನು ಸೋತಿದ್ದೇನೆ.ನನ್ನ ಕ್ಷಮಿಸು. ನನ್ನ ಕನಸು, ನನ್ನ ಧೈರ್ಯ ಎಲ್ಲವೂ ಕುಸಿದಿದೆ. ನನ್ನಲ್ಲಿ ಈಗ ಯಾವುದೇ ಶಕ್ತಿ ಇಲ್ಲ. ಗುಡೈ ಬೈ ಕುಸ್ತಿ 2001-2024 ಎಂದು ತೀರಾ ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ. ವಿನೇಶ್ ಪೋಸ್ಟ್ ನೋಡಿ ಕೋಟ್ಯಂತರ ಕ್ರೀಡಾಪ್ರೇಮಿಗಳು ಕಂಬನಿ ಮಿಡಿದಿದ್ದಾರೆ. ನಿರ್ಧಾರ ಬದಲಿಸಿ ಎಂದು ಆಗ್ರಹಿಸಿದ್ದಾರೆ. ಆಕೆಗೆ ಬೆಂಬಲವಾಗಿ ನಿಂತಿದ್ದಾರೆ.