ಮನೆ ಕ್ರೀಡೆ ಪ್ಯಾರಿಸ್‌ ಒಲಿಂಪಿಕ್ಸ್ ನಲ್ಲಿ ಪದಕ ಮಿಸ್ ಮಾಡಿಕೊಂಡ ವಿನೇಶ್ ಪೋಗಟ್ ಗೆ ಭಾರತಕ್ಕೆ ಬರುತ್ತಿದ್ದಂತೆ...

ಪ್ಯಾರಿಸ್‌ ಒಲಿಂಪಿಕ್ಸ್ ನಲ್ಲಿ ಪದಕ ಮಿಸ್ ಮಾಡಿಕೊಂಡ ವಿನೇಶ್ ಪೋಗಟ್ ಗೆ ಭಾರತಕ್ಕೆ ಬರುತ್ತಿದ್ದಂತೆ ಸಿಗ್ತು ಚಿನ್ನದ ಪದಕ

0

ವದೆಹಲಿ : ಪ್ಯಾರಿಸ್‌ ಒಲಿಂಪಿಕ್ಸ್ ನಲ್ಲಿ ಪದಕ ಮಿಸ್ ಮಾಡಿಕೊಂಡ ವಿನೇಶ್ ಪೋಗಟ್  ಭಾರತಕ್ಕೆ ಬರುತ್ತಿದ್ದಂತೆ ಅವರಿಗೆ ಚಿನ್ನದ ಪದಕ ಸಿಕ್ಕಿದೆ.ಅಂದ್ಹೇಗೆ ಅಂತಾ ತಲೆ ಕೆರ್ಕೋಳ್ಳೋ ಮಂದಿಗೆ ಉತ್ತರ ಇಲ್ಲಿದೆ.

ಶನಿವಾರ ಭಾರತಕ್ಕೆ ಮರಳಿದ ಫೋಗಟ್‌ಗೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಅಭಿಮಾನಿಗಳನ್ನು ನೋಡಿ ಫೋಗಟ್ ಭಾವುಕರಾದರು. ಈ ವೇಳೆ ದೀಪಿಂದರ್ ಹೂಡಾ, ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಸಂತೈಸುವ ಕೆಲಸ ಸ್ವಾಗತ ಸಿಕ್ಕಿದೆ. ಬಳಿಕ ತೆರೆದ ವಾಹನದಲ್ಲಿ ತಮ್ಮ ಗ್ರಾಮಕ್ಕೆ ತೆರಳಿದರು. ರೋಡ್‌ಶೋನಲ್ಲಿ ದೊಡ್ಡ ಗುಂಪು ಅವರಿಗೆ ಅದ್ಧೂರಿ ಸ್ವಾಗತ ಕೋರಿ ಅವರ ಜೊತೆ ಸಾಗಿತು.

ದೆಹಲಿಯಿಂದ ಬಾಳಲಿಗೆ ಹೋಗುವ ಮಾರ್ಗದಲ್ಲಿ, ಹಲವಾರು ಗ್ರಾಮಗಳಲ್ಲಿ ವಿನೇಶ್ ಬೆಂಬಲಿಗರು ಅವರನ್ನ ಸನ್ಮಾನಿಸಿದರು, 135 ಕಿಮೀ ದೂರದ ಪ್ರಯಾಣವು ಸುಮಾರು 13 ಗಂಟೆಗಳ ಕಾಲ ತೆಗೆದುಕೊಂಡಿತು. ಬಳಿಕ ಅವರ ಹುಟ್ಟೂರು ಬಾಳಲಿಯಲ್ಲಿ ಸಮುದಾಯದ ಹಿರಿಯರು ಚಿನ್ನದ ಪದಕ ನೀಡಿ ಗೌರವಿಸಿದರು. ಹೀಗಾಗಿ ವಿನೇಶ್ ಪೊಗಟ್ ಅವರು ಈ ರೀತಿಯಾಗಿ ಚಿನ್ನದ ಪದಕವನ್ನು ಪಡೆದಿದ್ದಾರೆ.

 

ಕುಸ್ತಿ ಪಂದ್ಯ ನನ್ನ ಎದುರು ಗೆದ್ದಿದೆ, ನಾನು ಸೋತಿದ್ದೇನೆ, ಕ್ಷಮಿಸಿ:  ಭಾವುಕ ಪೋಸ್ಟ್ ನೊಂದಿಗೆ ಕುಸ್ತಿಗೆ ವಿದಾಯ ಘೋಷಿಸಿದ ವಿನೇಶ್ ಪೋಗಟ್

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ  ವಿನೇಶ್ ಪೋಗಟ್ ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಂ ಜಾಸ್ತಿ ಇದ್ದಾರೆ ಅಂತಾ 50 ಕೆಜಿ ಮಹಿಳೆಯರ ಕುಸ್ತಿ ವಿಭಾಗದ ಫೈನಲ್ ಪಂದ್ಯದಿಂದ ಅವರನ್ನು ಒಲಿಂಪಿಕ್ಸ್ ಸಂಘಟಕರು ಅನರ್ಹಗೊಳಿಸಿದ್ರು. ಇದು ಕೋಟ್ಯಂತರ ಭಾರತೀಯರಿಗೆ ಬಹುದೊಡ್ಡ ಆಘಾತ. ಈ ಆಘಾತದಿಂದ ಹೊರ ಬರುವ ಮೊದಲೇ ಇದೀಗ ಮತ್ತೊಂದು ಎಲ್ಲದಕ್ಕಿಂತ ದೊಡ್ಡ ಆಘಾತ ಭಾರತೀಯರಿಗೆ ಎದುರಾಗಿದೆ.

ಹೌದು.. ಒಲಿಂಪಿಕ್ಸ್ ನಲ್ಲಿ ಕುಸ್ತಿ ಪಂದ್ಯದ ಫೈನಲ್ ನಿಂದ ಅನರ್ಹಗೊಂಡ ಬೆನ್ನಲ್ಲೇ ಬದುಕಿನ ಕಠಿಣ ನಿರ್ಧಾರವೊಂದನ್ನು ವಿನೇಶ್ ಪೋಗಟ್ ತೆಗೆದುಕೊಂಡಿದ್ದಾರೆ. ವಿನೇಶ್ ಪೋಗಟ್ ಕುಸ್ತಿ ಪಂದ್ಯಕ್ಕೆ ವಿದಾಯವನ್ನು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಒಂದು ಭಾವುಕರಾಗಿ ಹಾಕಿದ್ದಾರೆ. ಆ ಪೋಸ್ಟ್ ನ ಸಾಲುಗಳು ಇಂತಿವೆ. ಅಮ್ಮಾ..ನನ್ನ ವಿರುದ್ಧ ಕುಸ್ತಿ ಪಂದ್ಯ ಗೆದ್ದಿದೆ. ಆದರೆ ನಾನು ಸೋತಿದ್ದೇನೆ.ನನ್ನ ಕ್ಷಮಿಸು. ನನ್ನ ಕನಸು, ನನ್ನ ಧೈರ್ಯ ಎಲ್ಲವೂ ಕುಸಿದಿದೆ. ನನ್ನಲ್ಲಿ ಈಗ ಯಾವುದೇ ಶಕ್ತಿ ಇಲ್ಲ. ಗುಡೈ ಬೈ ಕುಸ್ತಿ 2001-2024 ಎಂದು ತೀರಾ ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ. ವಿನೇಶ್ ಪೋಸ್ಟ್ ನೋಡಿ ಕೋಟ್ಯಂತರ ಕ್ರೀಡಾಪ್ರೇಮಿಗಳು ಕಂಬನಿ ಮಿಡಿದಿದ್ದಾರೆ. ನಿರ್ಧಾರ ಬದಲಿಸಿ ಎಂದು ಆಗ್ರಹಿಸಿದ್ದಾರೆ. ಆಕೆಗೆ ಬೆಂಬಲವಾಗಿ ನಿಂತಿದ್ದಾರೆ.

ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಭಾರತೀಯರ ಕನಸು ಭಗ್ನ;ಪ್ಯಾರಿಸ್ ಒಲಿಂಪಿಕ್ಸ್ ಫಿನಾಲೆಯಿಂದ ವಿನೇಶ್ ಪೋಗಟ್ ಅನರ್ಹ

ಪ್ಯಾರೀಸ್; ಸಾಕಷ್ಟು ಅವಮಾನ, ಕಿರುಕುಳ ಎಲ್ಲವನ್ನು ಅನುಭವಿಸಿ ನೋವುಂಡ ಜೀವ ಕುಸ್ತಿಪಟು ವಿನೇಶ್ ಪೋಗಟ್.ವಿನೇಶ್ ಪೋಗಟ್ ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡುತ್ತಿದ್ದಂತೆ ಇಡೀ ಭಾರತೀಯರು ನಮ್ಮ ಮಗಳೇ ಫೈನಲ್  ಪ್ರವೇಶ ಮಾಡಿದ್ದಾಳೆ ಅನ್ನುವಷ್ಟರ ಮಟ್ಟಿಗೆ ಸಂಭ್ರಮಿಸಿದ್ರು. ಭಾರತಕ್ಕೆ ಬಂಗಾರದ ಪದಕ ಫಿಕ್ಸ್ ಅಂತಾ ಖುಷಿ ಪಟ್ರು. ಆದರೆ ಆ ಖುಷಿ ಸಂಭ್ರಮ ಕೆಲವೇ ಕೆಲವು ಗಂಟೆಗಳಲ್ಲಿ ಮಣ್ಣು ಪಾಲಾಯ್ತು.

ಹೌದು.. ವಿನೇಶ್ ಪೋಗಟ್ ಭಾರತಕ್ಕೆ ಬಂಗಾರದ ಪದಕ ತರ್ತಾರೆ ಅಂತಾ ಕಾಯುತ್ತಿದ್ದ ಮಂದಿಗೆ ಶಾಕ್ ಎದುರಾಗಿತ್ತು, ವಿನೇಶ್ ಪೋಗಟ್ ಕುಸ್ತಿ ಪಂದ್ಯದ ಫಿನಾಲೆಯಿಂದ ಹೊರ ಬಿದ್ದಿದ್ದಾರೆ ಅನ್ನೋ ಅಘಾತಕಾರಿ ಸುದ್ದಿ ಹೊರ ಬಿದ್ದಿತ್ತು. ನಿಗದಿತ ತೂಕಕ್ಕಿಂತ 100 ಗ್ರಾಂ ತೂಕ ಹೆಚ್ಚಾಗಿದ್ದರಿಂದ ವಿನೇಶ್ ಪೋಗಟ್ ಅವರು ಫೈನಲ್ ನಿಂದ ಹೊರ ಬಿದ್ದಿದ್ದಾರೆ. ಇನ್ನು ರಾತ್ರಿಯೇ ತೂಕ ಕೊಂಚ ಜಾಸ್ತಿ ಇದೆ ಎಂಬ ಬಗ್ಗೆ ಅರಿವಿದ್ದ ವಿನೇಶ್  ಆ ತೂಕವನ್ನು ಸರಿದೂಗಿಸಲು ರಾತ್ರಿಯಿಡಿ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ. ಸೈಕ್ಲಿಂಗ್,ಸ್ಕಿಪ್ಪಿಂಗ್ ಮಾಡಿದ್ದಾರೆ. ಏನೆಲ್ಲಾ ಮಾಡಬಹುದೋ ಅದೆಲ್ಲಾ ಪ್ರಯತ್ನವನ್ನು ಮಾಡಿದ್ದಾರೆ. ಆದರೂ ಯಾವ ಪ್ರಯೋಜನ ಆಗಿಲ್ಲ.ಹಾಗಾಗಿ ಫೈನಲ್‌ ಸುತ್ತು ಎಂಟ್ರಿಯಾಗುವ ಮುನ್ನವೇ ವಿನೇಶ್ ಪೋಗಟ್ ಅನರ್ಹರಾಗಿದ್ದಾರೆ,

ಇನ್ನು ಈ ಕಹಿ ಸುದ್ದಿ ಹೊರ ಬೀಳುತ್ತಿದ್ದಂತೆ ಭಾರತೀಯ ಒಲಿಂಪಿಕ್ಸ್ ಘಟನೆ ಬಗ್ಗೆ ಬೇಸರ ಹೊರ ಹಾಕಿದೆ. ಅಲ್ಲದೇ ಅವರ ಖಾಸಗೀತನವನ್ನು ಬೆಂಬಲಿಸುತ್ತೇವೆ ಎಂದಿದೆ. ಅಲ್ಲವೇ ಕೆಲವೇ ಕೆಲವು ಅಂತರದಲ್ಲಿ ಅವಕಾಶ ತಪ್ಪಿರುವ ಬಗ್ಗೆ ದೂರು ನೀಡೋದಾಗಿ ಹೇಳಿದೆ.ಇನ್ನು ಸಾಕಷ್ಟು ಜನ ಈ ಬಗ್ಗೆ ಬೇಸರ ಹಾಗೂ ಆಕ್ರೋಶ ಹೊರ ಹಾಕಿದ್ದಾರೆ. ವಿನೇಶ್ ಪೋಗಟ್ ಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿನೇಶ್ ಪೋಗಟ್ ಪರವಾಗಿ ಸಾಕಷ್ಟು ಪೋಸ್ಟ್ ಗಳು ವೈರಲ್ ಆಗುತ್ತಿವೆ. ಅಲ್ಲದೇ ಈ ರೀತಿ ಯಾವ ಕ್ರೀಡಾಪಟು ಕೂಡ ಆಗಬಾರದು ಅನ್ನೋ ಮಾತುಗಳು ಕೂಡ ಸದ್ಯ ಕೇಳಿ ಬರುತ್ತಿದೆ.

ವಿನೇಶ್ ಪೋಗಟ್ ಗೆ ಅವಕಾಶ ಕೈ ತಪ್ಪುತ್ತಿದ್ದಂತೆ ಅವರಿಗೆ ಬೆಂಬಲ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ವಿನೇಶ್ ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದ್ದೀರಿ. ನಿಮ್ಮ ಇಂದಿನ ಹಿನ್ನಡೆ ನೋವು ತಂದಿದೆ. ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು ಎಂದು ನಾನು ಬಯಸುತ್ತೇನೆ. ಅಲ್ಲದೇ ಇದೆಲ್ಲವನ್ನು ನೀವು ಗಟ್ಟಿಯಾಗಿ ಎದುರಿಸುತ್ತೀರಿ ಎಂದು ನಾನು ಭಾವಿಸುತತೇನೆ. ಯಾಕಂದ್ರೆ ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ.ಇನ್ನಷ್ಟು ಬಲಿಷ್ಠವಾಗಿ ನೀವು ಹಿಂತಿರುಗಿ. ನಾವೆಲ್ಲ ನಿಮಗೆ ಬಲವಾಗಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಅವರು ಕೂಡ ವಿನೇಶ್ ಪೋಗಟ್ ಪರವಾಗಿ ಟ್ವೀಟ್ ಮಾಡಿದ್ದಾರೆ. ಘಟನೆಯ ಬಳಿಕ ನನಗೆ ಬೇಸರವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ನ ಅಹಿತಕರ ಘಟನೆಯ ನಂತರ. ನಿಮ್ಮ ಶಕ್ತಿ, ದೃಢತೆ ಮತ್ತು ಸಮರ್ಪಣೆ ಮನೋಭಾವ ಇಡೀ ದೇಶಕ್ಕೆ ಸ್ಫೂರ್ತಿ. ನೆನಪಿಟ್ಟುಕೊಳ್ಳಿ, ಈ ಕ್ಷಣವು ಮುಂದೆ ನಿಮ್ಮ ಅಗಣಿತ ಸಾಧನೆಗಳನ್ನು ಮತ್ತು ನೀವು ಭಾರತಕ್ಕೆ ತಂದ ಹೆಮ್ಮೆಯನ್ನು ಯಾವತ್ತೂ ಕಡಿಮೆ ಮಾಡುವುದಿಲ್ಲ. ಬಿ ಸ್ಟ್ರಾಂಗ್ ವಿನೇಶ್ . ನಾವು ನಿಮ್ಮನ್ನು ಮತ್ತು ನಿಮ್ಮ ಮುಂದಿನ  ಅದ್ಭುತ ಪ್ರಯಾಣವನ್ನು ನಂಬುತ್ತೇವೆ. ನೀವು ಯಾವಾಗಲೂ ನಮ್ಮ ಚಾಂಪಿಯನ್ನೇ ಆಗಿರುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.