ಬೆಂಗಳೂರು; ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿನ ಖಾತೆಗಳನ್ನ ಮುಚ್ಚುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತಾನು ಕೈಗೊಂಡ ಕ್ರಮಗಳಿಗೆ ತಾತ್ಕಾಲಿಕ ತಡೆ ಒಡ್ಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ೧೫ ದಿನ ಸಮಯ ನೀಡುವಂತೆ ಬ್ಯಾಂಕ್ ಅಧಿಕಾರಿಗಳು ಮನವಿ ಮಾಡಿದ್ದರು. ಎಸ್.ಬಿ.ಐ ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕ ವಿನೋದ್ ಜೈಸ್ವಾಲ್ ನಿನ್ನೆ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಮಾಡಿದ್ದರು. ಎಸ್ ಬಿಐ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಅಧಿಕಾರಿಗಳೂ ಮನವಿ ಮಾಡಿದ್ದರು. ಕೆ.ಐ.ಎ.ಡಿ.ಬಿ. ಸಂಸ್ಥೆಯ ನಿಶ್ಚಿತ ಠೇವಣಿಯನ್ನು ಮರುಪಾವತಿಸುವ ಕುರಿತು ಸಮಯಾವಕಾಶವನ್ನು ಬ್ಯಾಂಕ್ ಅಧಿಕಾರಿಗಳು ಕೋರಿದ್ದಾರೆ. ಎಸ್.ಬಿ.ಐ ಮತ್ತು ಪಿ.ಎನ್.ಬಿ ಬ್ಯಾಂಕ್ ಗಳ ಮನವಿ ಹಿನ್ನೆಲೆ,ತನ್ನ ನಿರ್ಧಾರಕ್ಕೆ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ.

ಬ್ಯಾಂಕ್ ಗಳಲ್ಲಿ ಪದೇ ಪದೇ ಅಕ್ರಮವಿ ವರ್ಗಾವಣೆ ಆಗುತ್ತಿರುವ ಹಿನ್ನೆಲೆ,ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು.ಎರಡು ರಾಷ್ಟ್ರೀಕೃತ ಬ್ಯಾಂಕ್ ಗಳ ಎಲ್ಲ ಸರ್ಕಾರಿ ಅಕೌಂಟ್ ಕ್ಲೋಸ್ ಮಾಡುವಂತೆ ಸೂಚನೆ ನೀಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಎಲ್ಲ ಶಾಖೆಗಳಲ್ಲಿ ಅಕೌಂಟ್ ಕ್ಲೋಸ್ ಗೆ ಸೂಚನೆ ಕೊಟ್ಟಿತ್ತು.ಈ ಎರಡು ಬ್ಯಾಂಕ್ ಗಳ ಎಲ್ಲ ಬ್ರ್ಯಾಂಚ್ ಗಳಲ್ಲಿ ಠೇವಣಿ ಹಿಂಪಡೆಯಬೇಕು ಎಂದು ಸೂಚನೆ ನೀಡಲಾಗಿತ್ತು.ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ಯುನಿವರ್ಸಿಟಿ ಗಳು ಮತ್ತಿತರ ಸಂಸ್ಥೆಗಳು,ಎಲ್ಲ ರೀತಿಯ ಠೇವಣಿ, ಹೂಡಿಕೆಗಳನ್ನು ತಕ್ಷಣದಿಂದ ಹಿಂಪಡೆಯಲು ತಿಳಿಸಿತ್ತು.ಇನ್ನು ಮುಂದೆ ಈ ಎರಡು ಬ್ಯಾಂಕ್ ಗಳಲ್ಲಿ ಯಾವುದೇ ರೀತಿಯ ಠೇವಣಿ ಹೂಡಿಕೆ ಇಡದಂತೆ ಇಲಾಖೆಗಳಿಗೆ ಸೂಚನೆ ನೀಡಿತ್ತು.ಎಲ್ಲ ಇಲಾಖೆಗಳು ಅಕೌಂಟ್ ಕ್ಲೋಷರ್ ವರದಿಯನ್ನು ಸೆ.೨೦ ರ ಒಳಗೆ ಸರ್ಕಾರಕ್ಕೆ ಸಲ್ಲಿಸಲು ಆದೇಶ ನೀಡಿತ್ತು. ಆರ್ಥಿಕ ಇಲಾಖೆ ಕಾರ್ಯದರ್ಶಿ ಡಾ.ಪಿಸಿ ಜಾಫರ್ ರಿಂದಲೇ ಮಹತ್ವದ ಆದೇಶ ಹೊರ ಬಿದ್ದಿತ್ತು.
ವಾಲ್ಮೀಕಿ ನಿಗಮದ ಮಾದರಿಯಲ್ಲೇ ಹಲವಾರು ಅಕ್ರಮಗಳು ನಡೆದಿವೆ.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಅಕೌಂಟ್ ಕ್ಲೋಸ್ ಮಾಡಲು ಸೂಚನೆ ನೀಡಿದ್ದಾರೆ.ಸರ್ಕಾರದ ನಿರ್ಧಾರಕ್ಕೆ ಎರಡು ಘಟನೆಗಳು ಪ್ರಮುಖ ಕಾರಣವಾಗಿವೆ. ಕೆಐಎಡಿಬಿ 2011 ರಲ್ಲಿ ರಾಜಾಜಿನಗರದ ಒಂದು ವರ್ಷದ ನಿಶ್ಚಿತ ಠೇವಣಿ ಹೂಡಿಕೆ ಇಟ್ಟಿತ್ತು.ಒಟ್ಟೂ ೨೫ ಕೋಟಿ ನಿಶ್ಚಿತ ಠೇವಣಿ ಇಡಲಾಗಿತ್ತು.ಇದಕ್ಕೆ ಪ್ರತಿಯಾಗಿ ಇದೇ ಬ್ಯಾಂಕಿನ ಮತ್ತೊಂದು ಶಾಖೆಯಿಂದ ೧೨ ಕೋಟಿ ಗಳ ಒಂದು ರಸೀದಿ ಹಾಗೂ ೧೩ ಕೋಟಿಗಳ ಮತ್ತೊಂದು ರಶೀದಿ ನೀಡಲಾಗಿತ್ತು.ಅವಧಿ ಮುಕ್ತಾಯವಾದ ನಂತರ 13 ಕೋಟಿಗಳ ಠೇವಣಿ ನಗದೀಕರಿಸಲಾಗಿದೆ.ಆದರೆ ಎರಡನೇ ರಶೀದಿಗೆ 10 ವರ್ಷ ಕಳೆದರೂ ಹಷ ನಗದೀಕರಣವಾಗಿಲ್ಲ.ಅಕ್ರಮವಾಗಿ ಬ್ಯಾಂಕ್ ಅಧಿಕಾರಿಗಳು ೧೪ ಕೋಟಿ ವರ್ಗಾವಣೆ ಮಾಡಿ ವಂಚನೆ ಎಸಗಿರುವ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.ಇದುವರೆಗೂ ಅದೆಷ್ಟೇ ಮೀಟಿಂಗ್ ಪತ್ರ ವ್ಯವಹಾರ ನಡೆದರೂ ಹಣ ವಾಪಸ್ ಆಗಿಲ್ಲ.ಇನ್ನೊಂದು ಪ್ರಕರಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿದೆ ಎಂದು ವರದಿ ನೀಡಲಾಗಿದೆ. ೨೦೧೩ ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅವೆನ್ಯೂ ರೋಡ್ ಎಸ್ಬಿಐ ಬ್ರ್ಯಾಂಚ್ ನಲ್ಲಿ ಠೇವಣಿ ಇಟ್ಟಿತ್ತು.ಒಟ್ಟೂ ೧೦ ಕೋಟಿ ಗಳ ನಿಶ್ಚಿತ ಠೇವಣಿ ಇಡಲಾಗಿತ್ತು.ಅವಧಿ ಮುಕ್ತಾಯವಾಗುವ ಮೊದಲೇ ಬ್ಯಾಂಕ್ ಅಧಿಕಾರಿಗಳಿಂದ ಅಕ್ರಮ ಎಸಗಲಾಗಿದೆ.ಖಾಸಗಿ ಕಂಪನಿಯ ಸಾಲಕ್ಕೆ ಸರ್ಕಾರದ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ಹೊಂದಾಣಿಕೆ ಮಾಡಲಾಗಿದೆ.ಇದುವರೆಗೂ ೧೦ ಕೋಟಿ ಹಣ ಸರ್ಕಾರಕ್ಕೆ ವಾಪಸ್ ಆಗಿಲ್ಲ.ಈ ಎರಡು ಪ್ರಕರಣಗಳ ಬಗ್ಗೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯಲ್ಲಿ ಚರ್ಚೆಯಾಗಿ ನಡಾವಳಿ ಸಲ್ಲಿಕೆಯಾಗಿದೆ.ಇದೇ ಮಾದರಿಯಲ್ಲಿ ಹತ್ತಾರು ಬ್ಯಾಂಕ್ ಅಕೌಂಟ್ ಗಳಲ್ಲಿ ಅಕ್ರಮ ನಡೆದಿರುವ ಅನುಮಾನ ವ್ಯಕ್ತವಾಗಿದೆ.ಹೀಗಾಗಿ ಸ್ಟೇಟ್ ಬ್ಯಾಂಕ್ ಇಂಡಿಯಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕೌಂಟ್ ಗಳ ಕ್ಲೋಸ್ ಮಾಡಲು ಸರ್ಕಾರದ ನಿರ್ಧರಿಸಿದೆ.











