ಬೆಂಗಳೂರು; ಗ್ಯಾರಂಟಿ ಯೋಜನೆಗಳ ಪರಾಮರ್ಶೆಗೆ ಸಚಿವರು ಒತ್ತಾಯಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಿಖಿಲ್ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು,ಸಿಎಂ,ಡಿಸಿಎಂ ರಾಜ್ಯದ ಜನತೆಗ ಒಂದು ಮಾತು ಕೊಟ್ಟಿದ್ದರು.ಕಾಕಾ ಪಾಟೀಲ್ ನಿನಗೂ ಫ್ರೀ, ಮಹದೇವಪ್ಪ ನಿನಗೂ ಫ್ರೀ ಅಂದಿದ್ರು.ಅಲ್ಲಿ ಕಾಕಾಪಾಟೀಲ್ ಕೇಳಿಲ್ಲ,ಮಹದೇವಪ್ಪ ಕೇಳಿಲ್ಲ ರಾಜ್ಯದ ಜನರು ಕೇಳಿರಲಿಲ್ಲ. ಐದು ಗ್ಯಾರಂಟಿ ಕೇಳಿಲ್ಲ. ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿ ಭರವಸೆ ಕೊಟ್ಟಿದ್ದರು.
ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ಮಾಡಿದ್ರು.ಗೈಡೆನ್ಸ್ ವ್ಯಾಲೂ 30% ಏರಿಕೆ ಮಾಡಿದ್ದಾರೆ. ಇವೆಲ್ಲವೂ ಬೆಲೆ ಏರಿಕೆ ಮಾಡಿದ್ದಾರೆ.ಹಾಲಿನ ಪ್ರೋತ್ಸಾಹ ಧನ ಸಿಕ್ಕಿಲ್ಲ.೩.೫೦ ಲಕ್ಷ ಕೋಟಿ ಬಜೆಟ್ ಇದೆ.ರಾಜ್ಯದ ಹಣ ಲೂಟಿಯಾಗ್ತಾ ಇದೆ ಎಂದು ಆರೋಪಿಸಿದ್ರು. ಇನ್ನು ವಾಲ್ಮೀಕಿ, ಮುಡಾ ಹಗರಣಕ್ಕೆ ನಾವು ಹಾಗೂ ಬಿಜೆಪಿಯವರು ಪಾದಯಾತ್ರೆ ಮಾಡಿದ್ವಿ.ಚುನಾವಣೆ ಸಂದರ್ಭದಲ್ಲಿ ಜನರಿಗೆ ಧಮ್ಮಿ ಹಾಕಿದ್ರು.ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬರದೆ ಇದ್ದರೆ ಗ್ಯಾರಂಟಿ ನಿಲ್ಲಿಸ್ತೀವಿ ಎಂದು ಧಮ್ಕಿ ಹಾಕಿದ್ರು.ಗ್ಯಾರಂಟಿಗಳು ಯಾರಿಗೂ ತಲುಪುತ್ತಿಲ್ಲ.ಗ್ಯಾರಂಟಿ ನಿಲ್ಲಿಸುವ ಮೂಲಕ ಬ್ಲಾಕ್ ಮೇಲ್ ಮಾಡ್ತಾ ಇದ್ದಾರೆ.ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ .ಆದರೆ ರಾಜ್ಯ ಸರ್ಕಾರ ಇದನ್ನು ಮರೆತಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನು ತುಂಗ ಭದ್ರಾ ಡ್ಯಾಂನ ಗೇಟ್ ಮುರಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ನಮ್ಮ ರಾಜ್ಯಕ್ಕೆ ಅಲ್ಲ, ಆಂಧ್ರಪ್ರದೇಶ, ತೆಲಂಗಾಣಕ್ಕೂ ಕುಡಿಯಲು ನೀರು, ಕೈಗಾರಿಕೆಗಳಿಗೆ ನೀರು ಬೇಕು.ಅಲ್ಲದೆ ರೈತರಿಗೆ ನೀರು ಬೇಕಾಗುತ್ತದೆ.೨೭ ಟಿಎಂಸಿ ನೀರು ಹರಿದುಹೋಗಿದೆ. ಹಾಗಾದ್ರೆ ಎಷ್ಟು ಹಾನಿ ಆಗಿದೆ ನೀವೇ ಅಂತಾ ನೀವೇ ಊಹಿಸಿಕೊಳ್ಳಿ. ೬೩ ಟಿಎಂಸಿ ನೀರು ಖಾಲಿ ಮಾಡಿ ಗೇಟ್ ನಿರ್ಮಾಣ ಮಾಡಬೇಕು ಅಂತ ತಜ್ಞರು ಹೇಳಿದ್ದಾರೆ.ರಾಜ್ಯ ಸರ್ಕಾರ ರೈತರಿಗೆ ನಷ್ಟ ಆಗದಂತೆ ಕ್ರಮ ತೆಗೆದುಕೊಳ್ಳಬೇಕು.ನಾನು ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಒತ್ತಾಯ ಮಾಡ್ತೀನಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ; ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ
ಬೆಂಗಳೂರು; ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಮಾತ್ರ ನಿಲ್ಲಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಕಾಂಗ್ರೆಸ್ ಜನಸಂಪರ್ಕ ಕೇಂದ್ರ ಉದ್ಘಾಟನೆ ಮಾಡಿದ ಅವರು ಗ್ಯಾರಂಟಿ ಯೋಜನೆಗಳಲ್ಲಿ ಫೀಲ್ಟರ್ ಮಾಡುವಂತೆ ಸಚಿವರಿಂದ ಸಲಹೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ್ರು.ನಿನ್ನೆ ಅದನ್ನ ಪೇಪರ್ ನಲ್ಲಿ ನೋಡಿದ್ದೆ ಅದೆಲ್ಲಾ ಸುಳ್ಳು.ಪಕ್ಷದ ಅಧ್ಯಕ್ಷನಾಗಿ ನಾನು ಹೇಳ್ತಿದ್ದಿನಿ , ಸಿದ್ದರಾಮಯ್ಯ ಅವರು ಹೇಳಿದ್ದಾರೆ.ಯಾವುದೇ ಕಾರಣಕ್ಕೂ ಗ್ಯಾರಂಟಿಯನ್ನ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಕೆಲವು ಕಡೆ ಆದಾಯ ಹೆಚ್ಚಿಗೆ ಇರುವವರು ತೆಗೆದುಕೊಳ್ತಿದ್ದಾರೆ.ಇದರ ಬಗ್ಗೆ ದೂರಿವೆ ಅಂತವುಗಳನ್ನ ಪರಿಶೀಲನೆ ಮಾಡುತ್ತೇವೆ. ಆದಾಯ ತೆರಿಗೆ , ಜಿಎಸ್ ಟಿ ಅಂತವರದ್ದು ಇದೆ ಅಂತಾ ದೂರು ಬಂದಿದೆ.ಪ್ರತಿಯೊಂದು ಯೋಜನೆಗೆ ಐಡೆಂಟಿಫಿಕೇಷನ್ ಕಾರ್ಡ್ ಮಾಡಬೇಕೆಂಬ ಪ್ರಸ್ತಾಪ ಇದೆ.೫೬ ಸಾವಿರ ಕೋಟಿ ಬಜೆಟ್ ನ ಗ್ಯಾರಂಟಿಗೆ ಮೀಸಲಿಡಲಾಗಿದೆ.ಫ್ರೀ ಬಸ್ ನಿಂದ ಪ್ರವಾಸೋದ್ಯಮ ವಹಿವಾಟು ಹೆಚ್ಚಾಗಿದೆ ಎಂದರು.
ಇನ್ನು ಇದೇ ವೇಳೆ ಗ್ಯಾರಂಟಿಗೆ ಶಾಸಕರ ಅಸಮಾಧಾನ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅವೆಲ್ಲವೂ ಸುಳ್ಳು, ಗ್ಯಾರಂಟಿ ತಂದುಬಿಟ್ರಲ್ಲಾ ಅಂತಾ ವಿರೋಧ ಪಕ್ಷಗಳು ಕೈ ಹಿಸುಕಿಕೊಳ್ತಿವೆ ಎಂದರು.ಇನ್ನು ಗ್ಯಾರಂಟಿಯಿಂದ ಅಭಿವೃದ್ಧಿಗೆ ಹಣ ಸಿಗ್ತಿಲ್ಲ ಎಂಬ ಸಚಿವ ಮುನಿಯಪ್ಪ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಯಾವ ಸಚಿವರು ಹೇಳೋದಕ್ಕೆ ಆಗಲ್ಲ.ಯಾವ ಮುನಿಯಪ್ಪನು ಹೇಳಿಲ್ಲಾ ಅವೆಲ್ಲವು ಸುಳ್ಳು.ಏನ್ ಕೊಡಬೇಕೋ ಕೊಟ್ಟಿದೆ.ಎಂ ಎಮ್ ಕೃಷ್ಣ ಅವರು ಇದ್ದಾಗ ಬಜೆಟ್ ೨೬ ಸಾವಿರ ಕೋಟಿ , ಈ ಮೂರು ಲಕ್ಷ ಕೋಟಿಯಾಗಿದೆ ಎಂದರು.ಇದೇ ವೇಳೆ ಗ್ಯಾರಂಟಿ ಯೋಜನೆಗಳು ಎಂಪಿ ಎಲೆಕ್ಷನ್ ಉಪಯೋಗಕ್ಕೆ ಬಂದಿಲ್ಲಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನಮಗೆ ಎಲೆಕ್ಷನ್ ಮುಖ್ಯ ಅಲ್ಲ.ಜನ ಯಾವಾಗ ಓಟು ಹಾಕಬೇಕು ಹಾಕ್ತಾರೆ ಎಂದ್ರು.ಗ್ಯಾರಂಟಿ ಪರಿಷ್ಕರಣೆ ಬಗ್ಗೆ ಮಾತನಾಡಿದ ಅವರು ಎಲ್ಲೆಲ್ಲಿ ದೂರು ಇದ್ಯೋ ಅಲ್ಲಲ್ಲಿ ಮಾತ್ರ ನೋಡ್ತಿವಿ ಎಲ್ಲಾ ಕಡೆ ಯಾಕೆ ನೋಡೋಣಾ? ಕಮಿಟಿ ಫಾರ್ ಮಾಡಿದ್ದೇವೆ, ಆನ್ ಲೈನ್ ರಿಜಿಸ್ಟ್ರೇಷನ್ , ಡಿಬಿಟಿ ಇದನ್ನ ಸಮಿತಿ ಪರಿಶೀಲನೆ ಮಾಡುತ್ತೆ ಎಂದರು.
ಇನ್ನು ಸತೀಶ್ ಜಾರಕಿಹೊಳಿ ಮಾತನಾಡಿ ನಾನು ಗ್ಯಾರಂಟಿ ಕಟ್ ಮಾಡುವುದಕ್ಕೆ ಹೇಳಿಲ್ಲ.ಫಿಲ್ಟರ್ ಮಾಡುವುದಕ್ಕೆ ಸಲಹೆ ನೀಡಿದ್ದೇನೆ.ನಂದು ಕ್ಲಿಯರ್ ಕಟ್: ಜನ ಏನು ಮಾತನಾಡ್ತಾರೆ ಅದನ್ನು ಹೇಳಿದ್ದೇನೆ ಅಷ್ಟೇ.ಪರಿಷ್ಕರಣೆ ಮಾಡಿ ಅಂತ ಮಾತ್ರ ಹೇಳಿದ್ದೇನೆ.ನಾನು ಜನರ ಅಭಿಪ್ರಾಯ ಹೈಕಮಾಂಡ್ ಗೆ ತಿಳಿಸಿದ್ದೇನೆ.ವಿರೋಧ ಪಕ್ಷದವರ ತರಹ ನಾನು ಕಟ್ ಮಾಡಿ ಅಂತ ಹೇಳಿಲ್ಲ.ವಿರೋಧ ಪಕ್ಷದವರು ನಾಳೆಯಿಂದ ಸತೀಶ್ ಜಾರಕಿಹೊಳಿ ಕಟ್ ಮಾಡೋಕೆ ಹೇಳಿದರು ಅನ್ನೋದು ಬೇಡ.ಪರಿಷ್ಕರಣೆ ಮಾಡುವುದರಿಂದ ೧೦ ಸಾವಿರ ಕೋಟಿ ಉಳಿಯಬಹುದು.ನಾನು ಗ್ಯಾರಂಟಿ ಕಟ್ ಮಾಡಿ ಅಂತ ಹೇಳಿಲ್ಲ ಎಂದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ.ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಐದೂ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ.ಇದರ ಪರಿಣಾಮವಾಗಿ 1 ಕೋಟಿಗೂ ಹೆಚ್ಚು ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ.ಗ್ಯಾರಂಟಿ ಯೋಜನೆಗಳಿಂದಾಗಿ ಹಣದ ಹರಿವು ನಿರಂತರವಾಗಿದ್ದು.ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ.ಇದು ರಾಜ್ಯದ ಪ್ರಗತಿಗೂ ಪರೋಕ್ಷವಾಗಿ ಪ್ರಯೋಜನವಾಗುತ್ತಿದೆ.ಹೀಗಾಗಿ ಗ್ಯಾರಂಟಿ ಯೋಜನೆ ಯಾವುದೇ ಬದಲಾವಣೆ ಇಲ್ಲದೆ,ಪ್ರಸಕ್ತ ಸ್ವರೂಪದಲ್ಲಿ ಮುಂದುವರಿಯುತ್ತದೆ.ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಬಡವರು, ದುರ್ಬಲರು, ವಂಚಿತರು,ಶೋಷಿತರ ಪರವಾಗಿ ನಿಂತಿದೆ.ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ, ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ನಾವು ಎಲ್ಲ ಸಮಾಜಮುಖಿ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಆರ್ಥಿಕ ಲಾಭ ನಷ್ಟದಿಂದ ನೋಡಬಾರದು.ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆ ಮುಂದುವರಿಯುತ್ತದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅದು ಮುಂದುವರಿಯುತ್ತದೆ ಎಂದರು,
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಮತ್ತು ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ ಎಂ ರೇವಣ್ಣ ಭಾಗಿಯಾಗಿದ್ದರು.