ಮನೆ Latest News ವಯನಾಡಿನ ದುರಂತ ನೆಲದಲ್ಲಿ ಮತ್ತೆ ರಕ್ಷಣಾ ಕಾರ್ಯಾಚರಣೆ ಆರಂಭ

ವಯನಾಡಿನ ದುರಂತ ನೆಲದಲ್ಲಿ ಮತ್ತೆ ರಕ್ಷಣಾ ಕಾರ್ಯಾಚರಣೆ ಆರಂಭ

0

ಕೇರಳ; ಭೂಕುಸಿತದಿಂದಾಗಿ ಸ್ವರ್ಗದಂತಿದ್ದ ವಯನಾಡು ಇದೀಗ ಸ್ಮಶಾನವಾಗಿ ಬದಲಾಗಿದೆ. ಹಚ್ಚ ಹಸಿರಿನ ಸಸ್ಯ ರಾಶಿಯಿಂದ ಕಂಗೊಳಿಸುತ್ತಿದ್ದ ವಯನಾಡಿನಲ್ಲೀಗ ಬರೀ ಬಂಡೆಗಳದ್ದೇ ಕಾರುಬಾರು ಎಂಬಂತಾಗಿದೆ.

ಇನ್ನು ಈ ದುರಂತದಲ್ಲಿ ಈಗಾಗಲೇ 400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಇನ್ನೂ 130ಕ್ಕೂ ಅಧಿಕ ಮಂದಿಯ ಸುಳಿವು ಲಭ್ಯವಾಗಿಲ್ಲ. ಇದೀಗ ಭಾನುವಾರದಿಂದ ಮತ್ತೆ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮತ್ತೆ ಪ್ರಾರಂಭವಾಗಿದೆ.ನಾಪತ್ತೆಯಾಗಿರುವ 130 ಜನರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಿನ್ನೆಯಿಂದ ರಕ್ಷಣಾ ಕಾರ್ಯಾಚರಣೆ ಆರಂಭವಾದ ಬಳಿಕ ರಕ್ಷಣಾ ಸಿಬ್ಬಂದಿ ಎರಡು ದೇಹದ ಭಾಗಗಳು ಪತ್ತೆಯಾಗಿವೆ ಎನ್ನಲಾಗಿದೆ.

10 ದಿನಗಳ ಕಾಲ ಭಾರತೀಯ ಸೇನೆಯ ಯೋಧರು ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅವರು ತೆರಳಿದ ಬಳಿಕ ಇದೀಗ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ, ಬೇರೆ ಬೇರೆ ಸಂಘಟನೆಯ ಸದಸ್ಯರು, ಸ್ವಯಂ ಸೇವಕರು, ಸ್ಥಳೀಯರು ರಕ್ಷಣಾ ಕಾರ್ಯಾಚರಮೆಯಲ್ಲಿ ನಿರತರಾಗಿದ್ದಾರೆ.

ಭಾನುವಾರ ರಕ್ಷಣಾ ಸಿಬ್ಬಂದಿ ಕಾಂತನ್‌ ಪಾರಾದ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಇಬ್ಬರ ದೇಹದ ಭಾಗಗಳು ಪತ್ತೆಯಾಗಿವೆ ಎನ್ನಲಾಗಿದೆ.  ಚೂರಲ್ಮಾಲ, ಮುಂಡಕ್ಕೈ,  ಪುಂಚಿರಿಮಟ್ಟಂ ಹಾಗೂ ಚೆಲಿಯಾರ್ ನದಿ ದಂಡೆ ಸೇರಿದಂತೆ ಒಟ್ಟು ಭೂಕುಸಿತಕ್ಕೆ ಒಳಗಾದ  6 ವಲಯಗಳಲ್ಲಿ ಸದ್ಯ ಶೋಧ ಕಾರ್ಯಾಚರಣೆ ನಡೆಯುತ್ತಿದೆ.ಇನ್ನು  ಕಾಂತನ್‌ಪಾರಾದಲ್ಲಿ ಮತ್ತು ಸೂಚಿಪಾರಾದಲ್ಲಿ ಶೋಧ ಕಾರ್ಯಾಚರಣೆಗಾಗಿ  ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಅಲ್ಲದೇ ಇನ್ನೂ ಕೂಡ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶವವಗಳನ್ನು ಪತ್ತೆ ಮಾಡಲು ಕಾಡವರ್ ಶ್ವಾನಗಳನ್ನು ಬಳಕ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಶೋಧ ಕಾರ್ಯಾಚರಣೆ ವೇಳೆ ಇನ್ನೂ ಕೂಡ ಒಂದಷ್ಟು ಮೃತದೇಹಗಳು ಪತ್ತೆಯಾಗುವ ಸಾಧ್ಯತೆಯಿದೆ.

ಭೂಕುಸಿತ ಪೀಡಿತ ವಯನಾಡಿಗೆ  ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ವಯನಾಡು: ಭೂಕುಸಿತ ಪೀಡಿತ ದೇವರ ನಾಡು ಕೇರಳದ ವಯನಾಡು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿದರು. ವಿಶೇಷ ವಿಮಾನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೇರಳದ ಕಣ್ಣೂರು ಏರ್ಪೋಟ್ ಗೆ ಆಗಮಿಸಿದರು. ಮೋದಿ ಆಗಮಿಸುತ್ತಿದ್ದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಗತಿಸಿದರು.ಇದೇ ಸಂದರ್ಭ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಥ್ ನೀಡಿದ್ರು.

ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೂಕುಸಿತ ಪೀಡಿತ ವಯನಾಡಿನ ಮುಂಡಕೈ-ಚುರಲ್ಮಲಾ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಇದೇ ವೇಳೆ  ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಸಚಿವ ಸುರೇಶ್ ಗೋಪಿ  ಮತ್ತಿತರರು ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಯಲ್ಲಿದ್ದರು.

ವೈಮಾನಿಕ ಸಮೀಕ್ಷೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಚೂರಲ್‌ಮಾಲ ಪ್ರದೇಶದಲ್ಲಿ ಸ್ವತಃ ತಾವೇ  ಸುತ್ತಾಡಿ ಅಧಿಕಾರಿಗಳಿಂದ ಅನಾಹುತಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆದರು. ಅಲ್ಲಗೇ ನಿರಾಶ್ರಿತರ ಕೇಂದ್ರಕ್ಕೂ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭೂಕುಸಿತ ಸಂತ್ರಸ್ತರ ಜತೆ ಸಂವಾದ ನಡೆಸಿದರು. ಇದೇ ವೇಳೆ ಭೀಕರ ದುರಂತದಲ್ಲಿ ತಮ್ಮ ಹೆತ್ತವರನ್ನು ಕಳೆದುಕೊಂಡ ಮಕ್ಕಳನ್ನು ಎತ್ತಿಕೊಂಡು ಪ್ರೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿಸಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ ಈ ದುರಂತ ಸಹಜವಾಗಿಲ್ಲ. ಕೇಂದ್ರ ಸರ್ಕಾರದಿಂದ ಅಗತ್ಯವಾಗುವ ಎಲ್ಲಾ ಸಹಕಾರ ಕೇರಳಕ್ಕೆ ನೀಡೋದಾಗಿ ತಿಳಿಸಿದರು. ನಾನು ಭೂಕುಸಿತ ದುರಂತ ನಡೆದ ದಿನದಿಂದಲೂ ಈ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಘಟನೆ ನಡೆದ ಸ್ಥಳ ಖುದ್ದು ನೋಡಿದ್ದೇನೆ. ದುರಂತದಿಂದಾಗಿ ಸಾವಿರಾರು ಕುಟುಂಬಗಳ ಕಸನು ಛಿದ್ರವಾಗಿದೆ. ನಾನು ಆಸ್ಪತ್ರೆಯಲ್ಲಿರುವ ದುರಂತದಲ್ಲಿ ಗಾಯಗೊಂಡಿರುವವರನ್ನು ಹಾಗೂ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿಸಿದ್ದೇನೆ ಎಂದರು.