ಮನೆ ಪ್ರಸ್ತುತ ವಿದ್ಯಮಾನ ಟಾಕ್ಸಿಕ್‌ ಸಿನಿಮಾದ ಶೂಟಿಂಗ್ ಆರಂಭಕ್ಕೂ ಮುನ್ನ ರಾಕಿಂಗ್ ಸ್ಟಾರ್ ಟೆಂಪಲ್ ರನ್ : ಬೆಳ್ತಂಗಡಿ ಸುರ್ಯ...

ಟಾಕ್ಸಿಕ್‌ ಸಿನಿಮಾದ ಶೂಟಿಂಗ್ ಆರಂಭಕ್ಕೂ ಮುನ್ನ ರಾಕಿಂಗ್ ಸ್ಟಾರ್ ಟೆಂಪಲ್ ರನ್ : ಬೆಳ್ತಂಗಡಿ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ

0

ಬೆಳ್ತಂಗಡಿ; ರಾಕಿಂಗ್ ಸ್ಟಾರ್ ಯ್ ಅಭಿನಯ  ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ನ ಶೂಟಿಂಗ್ ಇದೇ ತಿಂಗಳ 8 ರಂದು ಆರಂಭಗೊಳ್ಳಲಿದೆ. ಈ ಹಿನ್ನೆಲೆ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಸಮೇತ ಟೆಂಪಲ್ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ವಿಭಿನ್ನ ಗೆಟಪ್ ನಲ್ಲಿ ಯಶ್ ಕಾಣಿಸಿಕೊಳ್ಳಳಿದ್ದಾರೆ. ಈಗಾಗಲೇ ಅವರ ಹೆರ್ ಸ್ಟೈಲ್ ರಿವೀಲ್ ಆಗಿದೆ. ಇದರ ಮಧ್ಯೆ ಸಿನಿಮಾ ಯಶಸ್ಸಿಗಾಗಿ ದೇವರ ಮೊರೆ ಹೋಗಿದ್ದಾರೆ.

ಹೌದು.. ಇವತ್ತು ನಟ ಯಶ್ ಪತ್ನಿ ರಾಧಿಕಾ, ಮಗಳು ಐರಾ ಯಶ್ , ಪುತ್ರ ಯಥರ್ವ್ ಯಶ್ ಜೊತೆಗೂಡಿ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಇನ್ನು ಇದೇ ವೇಳೆ ಯಶ್ ಹಾಗೂ ರಾಧಿಕಾ ಮಣ್ಣಿನ ಹರಕೆ ತೀರಿಸಿದ್ದಾರೆ. ಸುರ್ಯ ದೇವಸ್ಥಾನ ಮಣ್ಣಿನ ಹರಕೆಗೆ ಹೆಸರುವಾಸಿಯಾಗಿದೆ.ಅತ್ಯಂತ ಕಾರ್ಣಿಕದ ದೇವಸ್ಥಾನಗಳಲ್ಲಿ ಒಂದಾಗಿದೆ. ಯಶ್ ದಂಪತಿ ಕೂಡ ಮಣ್ಣಿನ ರೀಲ್ಸ್ ಹಾಗೂ ಕುಟುಂಬದ ಆರೋಗ್ಯಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಣ್ಣಿನ ಹರಕೆ ಮಂಡೆ ಬಳಿ ತೆರಳಿ ಹರಕೆ ತೀರಿಸಿದ್ದಾರೆ.

ಇನ್ನು ಇದೇ ವೇಳೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ನಟ ಯಶ್ ದಂಪತಿಯನ್ನು ಸನ್ಮಾನಿಸಲಾಯಿತು. ದೇವಸ್ಥಾನ ಭೇಟಿ ವೇಳೆ ಯಶ್ ಅವರಿಗೆ ಟಾಕ್ಸಿಕ್‌ ಸಿನಿಮಾದ ನಿರ್ದೇಶಕ ವೆಂಕಟ್ ಜೊತೆಯಾಗಿದ್ರು.

ಕೆಜಿಎಫ್ ಬಳಿಕ ಯಶ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಆಗಿದ್ದು, ಸಿನಿಮಾದ ಬಗ್ಗೆ ಸಿನಿ ರಸಿಕರಲ್ಲಿ ಬೆಟ್ಟದಷ್ಟು ನಿರೀಕ್ಷೆಗಳಿವೆ. ಇದೇ ತಿಂಗಳ 8 (ಆಗಸ್ಟ್ 8) ರಂದು ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದೆ.  ಬೆಂಗಳೂರಿನ HMT ಫ್ಯಾಕ್ಟರಿಯಲ್ಲಿ ಮೊದಲ ಹಂತದ ಶೂಟಿಂಗ್ ಗೆ ಚಾಲನೆ ಸಿಗಲಿದೆ.ಅದಕ್ಕಾಗಿ ಅಲ್ಲಿ ಈಗಾಗಲೇ  ಅದ್ದೂರಿ  ಸೆಟ್ ಹಾಕಲಾಗಿದೆ. ಈಗಾಗಲೇ ಯಶ್ ಅವರ ನ್ಯೂ ಲುಕ್ ಗೆ ಯಶ್ ಅಭಿಮಾನಿಗಳು ಫಿದಾ ಆಗಿದ್ದು ಸಿನಿಮಾದ ಬಗ್ಗೆ ಕೂಡ ಅಷ್ಟೇ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ.

ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯ ದೇಗುಲಕ್ಕೂ ಯಶ್ ಹಾಗೂ ರಾಧಿಕಾ ಭೇಟಿ

ಇನ್ನು ಸುರ್ಯ ದೇವಸ್ಥಾನದಿಂದ ನೇರವಾಗಿ ಯಶ್ ಅವರು ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳಿದರು. ಅಲ್ಲಿ ಮಂಜುನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿ ಊಟ ಮಾಡಿ ಕುಕ್ಕೆ ಸುಬ್ರಮಣ್ಯ ದೇಗುಲಕ್ಕೆ ಭೇಟಿ ನೀಡಿ ಅಲ್ಲಿ ವಿಶೇಷ ಪೂಜೆ ನೆರವೇರಿಸಿದರು.