ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಹತ್ತಿರ ಹತ್ತಿರ 2 ತಿಂಗಳಾಗುತ್ತಾ ಬಂತು.ದರ್ಶನ್ ಅವರು ಅರೆಸ್ಟ್ ಆದಾಗಿನಿಂದ ಅವರನ್ನು ಹೊರಗಡೆ ತರಲು ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್, ಸಹೋದರ ದಿನಕರ್ ತೂಗುದೀಪ ಅವರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆಗಾಗ್ಗೆ ಜೈಲಿಗೆ ಭೇಟಿ ನೀಡುತ್ತಲೇ ಇದ್ದಾರೆ. ಇನ್ನು ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆದಾಗಿನಿಂದ ವಿಜಯಲಕ್ಷ್ಮೀ ದರ್ಶನ್ ಆಗಾಗ್ಗೆ ಬಂದು ಭೇಟಿ ಮಾಡುತ್ತಲೇ ಇದ್ದಾರೆ. ವಿಜಯಲಕ್ಷ್ಮೀ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಬಂದಾಗೆಲ್ಲಾ ಬಹುತೇಕ ಸಂದರ್ಭದಲ್ಲಿ ದರ್ಶನ್ ಅವರ ಸಹೋದರಿ ದಿವ್ಯ ಅವರ ಪುತ್ರ ಚಂದನ್ ವಿಜಯಲಕ್ಷ್ಮೀ ದರ್ಶನ್ ಅವರ ಜೊತೆ ಜೈಲಿಗೆ ಬಂದು ಮಾವನನ್ನು ಭೇಟಿ ಮಾಡಿ ಧೈರ್ಯ ತುಂಬುತ್ತಲೇ ಇದ್ದಾರೆ. ದರ್ಶನ್ ಅವರು ಜೈಲಿಗೆ ಶಿಫ್ಟ್ ಆಗುವ ದಿನ ಕೂಡ ಚಂದನ್ ದರ್ಶನ್ ಅವರನ್ನು ಪೊಲೀಸ್ ವಾಹನದ ಹೊರಗಿನಿಂದ ನೋಡುತ್ತಾ ಭಾವುಕರಾಗಿ ನಿಂತಿದ್ದರು. ಮಾವನಿಗೆ ಚಂದನ್ ಆಗಾಗ್ಗೆ ದೇವಸ್ಥಾನಕ್ಕೂ ಭೇಟಿ ನೀಡುತ್ತಲೇ ಇದ್ದಾರೆ. ಮೊನ್ನೆ ಮಾವ ದಿನಕರ್ ಅವರ ಜೊತೆ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು.
ಇದೀಗ ಮಾವ ದರ್ಶನ್ ಗಾಗಿ ಚಂದನ್ ಮತ್ತೆ ಟೆಂಪಲ್ ರನ್ ನಡೆಸುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ ಆರತಿ ಉಕ್ಕಡ ದೇಗುಲಕ್ಕೆ ಚಂದನ್ ಭೇಟಿ ಕೊಟ್ಟಿದ್ದಾರೆ. ಆರತಿ ಉಕ್ಕಡದಲ್ಲಿ ದರ್ಶನ್ ಅಳಿಯ ಚಂದನ್ ಮಾವನಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆದಷ್ಟು ಬೇಗ ಮಾವ ಸಂಕಷ್ಟದಿಂದ ಪಾರಾಗಲಿ ಎಂದು ಬೇಡಿಕೊಂಡಿದ್ದಾರೆ.
ಅತ್ತ ಪತಿಗಾಗಿ ಮೂಕಾಂಬಿಕೆಯ ಮೊರೆ ಹೋದ ವಿಜಯಲಕ್ಷ್ಮೀ ದರ್ಶನ್ ; ಇತ್ತ ಚಾಮುಂಡೇಶ್ವರಿಯ ದರ್ಶನ ಪಡೆದ ದಿನಕರ್ ತೂಗುದೀಪ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಆದಷ್ಟು ಬೇಗ ರಿಲೀಸ್ ಮಾಡಿಸಬೇಕು ಎಂಬ ನಿಟ್ಟಿನಲ್ಲಿ ಅವರ ಪತಿ ವಿಜಯಲಕ್ಷ್ಮೀ ದರ್ಶನ್ ಹಾಗೂ ಸಹೋದರ ದಿನಕರ್ ತೂಗುದೀಪ ಎಷ್ಟೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಅನ್ನೋದನ್ನು ನಾವು ನೋಡುತ್ತಲೇ ಇದ್ದೇವೆ.
ಇಂದು ದರ್ಶನ್ ಗಾಗಿ ಪತಿ ವಿಜಯಲಕ್ಷ್ಮೀ ದರ್ಶನ್ ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇಗುಲದಲ್ಲಿ ನವ ಚಂಡಿಕಾಯಾಗ ನೆರವೇರಿಸಿದ್ರು. ಅತ್ತ ಅತ್ತಿಗೆ ಅಣ್ಣನಿಗಾಗಿ ಯಾಗ ಮಾಡಿಸಿದ್ರೆ ಇತ್ತ ತಮ್ಮ ದಿನಕರ್ ತೂಗುದೀಪ ಅಣ್ಣನಿಗಾಗಿ ಪತ್ನಿಯೊಂದಿಗೆ ನಾಡ ಅದಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.
ಆಷಾಡ ಮಾಸದ ಮೂರನೇ ಶುಕ್ರವಾರವಾದ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ದಿನಕರ್ ತೂಗುದೀಪ್ ಪತ್ನಿಯೊಂದಿಗೆ ಭೇಟಿ ನೀಡಿದ್ದಾರೆ. ಪ್ರತಿ ವರ್ಷ ಆಷಾಡ ಶುಕ್ರವಾರದಂದು ನಟ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದರು. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದೀಗ ಅವರ ಸಹೋದರ ದಿನಕರ್ ತೂಗುದೀಪ್ ಚಾಮುಂಡೇಶ್ವರಿಯ ದರ್ಶನ ಪಡೆದು ಅಣ್ಣನಿಗಾಗಿ ಪ್ರಾರ್ಥಿಸಿದ್ದಾರೆ.
ಇನ್ನು ಇಂದುಮೂರನೇ ಆಷಾಢ ಶುಕ್ರವಾರವಾದ ಹಿನ್ನೆಲೆ ದರ್ಶನ್ ಭಾವಚಿತ್ರ ಹಿಡಿದು ಮೆಟ್ಟಿಲು ಹತ್ತಿದ್ದಾರೆ ಅವರ ಅಭಿಮಾನಿಗಳು.ಸಾವಿರ ಮೆಟ್ಟಿಲು ಹತ್ತಿ ದರ್ಶನ್‌ಗೆ ಒಳಿತು ಮಾಡುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೇ ಚಾಮುಂಡಿ ಬೆಟ್ಟದಲ್ಲಿ ದರ್ಶನ್ ಪರ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.
ದರ್ಶನ್ ಗಾಗಿ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ವಿಜಯಲಕ್ಷ್ಮೀ ನವಚಂಡಿಕಾ ಯಾಗ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಒಂದು ತಿಂಗಳಾಯ್ತು. ದರ್ಶನ್ ಅವರು ಅರೆಸ್ಟ್ ಆದಾಗಿನಿಂದ ಅವರನ್ನು ಹೊರಗೆ ತರಲು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.
ಒಂದು ಕಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರಂತರವಾಗಿ ವಕೀಲರ ಜೊತೆ ಚರ್ಚೆಯನ್ನು ನಡೆಸುತ್ತಿದ್ದರೆ ಮತ್ತೊಂದು ಕಡೆ ಆಗಾಗ್ಗೆ ಜೈಲಿಗೆ ಭೇಟಿ ನೀಡಿ ದರ್ಶನ್ ಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದಾರೆ. ಅಲ್ಲದೇ ನಿರಂತರವಾಗಿ ದೇವರ ಮೊರೆ ಹೋಗ್ತಿದ್ದಾರೆ. ಮೊನ್ನೆ ಬಂಡಿ ಮಾಕಾಳಮ್ಮ ದೇಗುಲಕ್ಕೆ ವಿಜಯಲಕ್ಷ್ಮೀ ಭೇಟಿ ನೀಡಿ ದರ್ಶನ್ ಗಾಗಿ ಪೂಜೆ ಸಲ್ಲಿಸಿದ್ದರು. ಇಂದು ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಭೇಟಿ ನೀಡಿ ದರ್ಶನ್ ಗಾಗಿ ನವ ಚಂಡಿಕಾಯಾಗ ನೆರವೇರಿಸಿದ್ದಾರೆ ವಿಜಯಲಕ್ಷ್ಮಿ ದರ್ಶನ್.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರು ಕೊಲ್ಲೂರು ಮೂಕಾಂಬಿಕಾ ದೇವಸ್ಧಾನಕ್ಕೆ ತಮ್ಮ ಆಪ್ತರೊಂದಿಗೆ ಆಗಮಿಸಿ ವಿಜಯಲಕ್ಷ್ಮಿ ದರ್ಶನ್ ತಾಯಿಯ ದರ್ಶನವನ್ನ ಪಡೆದಿದ್ದಾರೆ.ಅಲ್ಲದೇ ಇಂದು ಬೆಳಗ್ಗೆ ಅವರು ನವ ಚಂಡಿಕಾ ಹೋಮ ನೆರವೇರಿಸಿದ್ದಾರೆ.