ಮನೆ Latest News ದರ್ಶನ್ ಅವರನ್ನ ಜೈಲಿನಲ್ಲಿ ನೋಡೋಕೆ ನನಗೆ ಮನಸ್ಸಿಲ್ಲ, ಹಾಗಾಗಿ ಅವರನ್ನು ನೋಡೋಕೆ ಹೋಗಿಲ್ಲ; ನಟಿ ಸೋನಲ್...

ದರ್ಶನ್ ಅವರನ್ನ ಜೈಲಿನಲ್ಲಿ ನೋಡೋಕೆ ನನಗೆ ಮನಸ್ಸಿಲ್ಲ, ಹಾಗಾಗಿ ಅವರನ್ನು ನೋಡೋಕೆ ಹೋಗಿಲ್ಲ; ನಟಿ ಸೋನಲ್ ಮಂಥೆರೋ ಹೇಳಿಕೆ

0

ಬೆಂಗಳೂರು ; ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಮದುವೆ ಸಂಭ್ರಮವೊಂದು ಮನೆ ಮಾಡಿದೆ. ಇದೇ ತಿಂಗಳ 10 ಹಾಗೂ 11 ರಂದು ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.ಈ ಹಿನ್ನೆಲೆ ಇಂದು ತರುಣ್ ಸುಧೀರ್ ಹಾಗೂ ಸೋನಲ್ ಮಂಥೆರೋ ಪ್ರೆಸ್ ಮೀಟ್ ನಡೆಸಿದ್ರು.

ಮೊದಲು ಮಾತು ಆರಂಭಿಸಿದ ನಿರ್ದೇಶಕ ತರುಣ್ ಸುಧೀರ್ ನನ್ನ ಸೋನಲ್ ಪರಿಚಯ ಆಗಿದ್ದು ರಾಬರ್ಟ್ ಸಿನಿಮಾ ಮೂಲಕ ಆಯ್ತು ಅಂತಾ ತಿಳಿಸಿದ್ರು. ಸೋನಲ್ ಆಡಿಷನ್ ನಲ್ಲಿ ಪರಿಚಯವಾಗಿದ್ರು. ಆದರೆ ರಾಬರ್ಟ್ ಸೆಟ್ ಅಲ್ಲಿ ಲವ್ ಆಗಿಲ್ಲ.ಪ್ರೊಫೆಷನಲ್ ರಿಲೇಶನ್ ಶಿಪ್ ಅಲ್ಲಿ ಇದ್ವಿ ಆದ್ರೆ ಲವ್ ಆಗಿರ್ಲಿಲ್ಲ. ಪರಸ್ಪರ ಬರ್ತ್ಡೆಗೆ ವಿಶ್  ಮಾಡೋಕೆ ಮಾತ್ರ ಮೆಸೇಜ್ ಮಾಡ್ತಿದ್ವಿ.2023 ಯಿಂದ ಇಬ್ಬರ ನಡುವೆ ಬಾಂಡಿಂಗ್ ಬೆಳೆದಿದ್ದು ಎಂದ್ರು.

 

ಇನ್ನು ದರ್ಶನ್ ಅವರು ನಮ್ಮ  ಕಾಲೆಳೆಯುತ್ತಿದ್ರು .ಸೋನಲ್ ಗೆ ಮಾತ್ರ ಯಾಕೆ ಚೆನ್ನಾಗ್ ಫ್ರೇಮ್ ಇಡ್ತೀಯಾ ಅಂತಾ ತಮಾಷೆ ಮಾಡೋಕೆ ಶುರು ಮಾಡಿದ್ರು.ಏನು ಸೋನಲ್ ನ ಲವ್ ಮಾಡ್ತಿದೀಯ ಅಂತ ರೇಗಿಸುತ್ತಿದ್ರು.ನಂತರ ಮದುವೆ ಆಗ್ತೀಯಾ ಅಂದ್ರೂ ಅದ್ಕೆ ನಾನು ನೀವು ಯಾರನ್ನ ತೋರಿಸ್ತಿರೋ ಆಗ್ತೀನಿ ಅಂದೆ. ಕಾಟೇರ ಸೆಟ್ ನಲ್ಲೂ ದರ್ಶನ್ ಹಾಗೂ ಕೆಲವರು ಸೋನಲ್ ಹೆಸರಲ್ಲಿ ರೇಗಿಸುತ್ತಿದ್ರು.ಕೊನೆಗೂ ಸೋನಲ್ ಕಾಲ್ ಮಾಡಿ ಇಬ್ಬರು ಡೇಟ್ ಮಾಡ್ತಿದೀವಿ ಅನ್ನೋ ಸುದ್ದಿ ಹಬ್ಬುತಿದೆ ತಪ್ಪು ತಿಳ್ಕೊಬೇಡಿ ಅಂದ್ರು.ನನಗೂ ಯಾಕೋ ಯೂನಿವರ್ಸ ನಮ್ಮಿಬ್ಬರನ್ನು ಕನೆಕ್ಟ್ ಮಾಡ್ತಿದೆ ಅನ್ಸಿತ್ತು.ನಾನು ಕಾಂಪ್ಲಿಕೇಟ್ ಇದೀನಿ ನೀವು ಸಿಂಪಲ್, ವರ್ಕ್ ಆಗುತ್ತಾ ಅಂದೆ ಯೋಚಿಸಿದೆ ಎಂದು ತರುಣ್ ಸುಧೀರ್ ಹೇಳಿದ್ರು.

ಈ ನಡುವೆ ಮಾತು ಆರಂಭಿಸಿದ ಸೋನಲ್ ಎಲ್ಲರೂ ಇಬ್ಬರ ಪೇರ್ ಚೆನ್ನಾಗಿದೆ ಅಂತ ಹೇಳಿದ್ದಕ್ಕೆ ಮದುವೆಗೆ ಒಪ್ಪಿಕೊಂಡ್ವಿ.ಮದುವೆ ನಂತರ ಚಿಕ್ಕ ಬ್ರೇಕ್ ತಗೋತೀನಿ.ಈಗ ಸೈನ್ ಮಾಡಿರೋ ಸಿನಿಮಾಗಳನ್ನ ಮುಗಿಸುತಿದ್ದೀನಿ ಎಂದರು. ಅಷ್ಟರಲ್ಲಿ ತರುಣ್ ಸುಧೀರ್ ಸೋನಲ್ ನ ಇಮಿಟೇಟ್ ಮಾಡಿ ತೋರಿಸಿದ್ರು. ಇನ್ನು ದರ್ಶನ್ ಅವರನ್ನು ನೋಡೋಕೆ ಯಾಕೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸೋನಲ್ , ದರ್ಶನ್ ಅವರನ್ನ ಜೈಲಿನಲ್ಲಿ ನೋಡೋಕೆ ನನಗೆ ಮನಸಿಲ್ಲ.ದರ್ಶನ್ ನ ಬೇರೆ ರೀತಿ ನಾನು ನೋಡಿದ್ದೀನಿ.ಜೈಲಿಗೆ ಹೋಗಿ ಮದುವೆ ಆಹ್ವಾನ ಕೊಡೋದು ನನಗೆ ಸರಿ ಅನ್ನಿಸಿಲ್ಲ.ಹಾಗಾಗಿ ದರ್ಶನ್ ಅವರನ್ನ ನಾನಿನ್ನು ಭೇಟಿ ಮಾಡಿಲ್ಲ ಎಂದಿದ್ದಾರೆ.

 

ಈ ವೇಳೆ ತರುಣ್ ಮಾತನನಾಡಿ ಮದುವೆ ಡೇಟ್ ಮುಂದಕ್ಕೆ ಹಾಕ್ಬೇಡ ಅಂತ ದರ್ಶನ್ ಅವರೇ ಹೇಳಿದ್ದು.ಇದೆ ಡೇಟ್ ಅಲ್ಲಿ ಮದುವೆ ಆಗಿ ಅಂತ ದರ್ಶನ್ ಸಲಹೆ ನೀಡಿದ್ರು.ಅವರ ಒಪ್ಪಿಗೆಯಿಂದ ಮದುವೆ ಡೇಟ್ ಅನೌನ್ಸ್ ಮಾಡಿದ್ದು ಎಂದಿದ್ದಾರೆ.ಇದೇ ವೇಳೆತರುಣ್ ಸುಧೀರ್ ಅವರ ತಾಯಿ ಮಾಲತಿ ಸುಧೀರ್ ಅವರನ್ನು ಸೋನಲ್ ಹೊಗಳಿದ್ರು.ತರುಣ್ ಜೆಂಟಲ್ ಮ್ಯಾನ್, ಅಹಂಕಾರ ಇಲ್ಲ.ನಾನು ಯೋಚಿಸೋದು ಕಡಿಮೆ  ಗೈಡ್ ಮಾಡೋರು ಬೇಕಿತ್ತು ತರುಣ್ ಸಿಕ್ಕಿದ್ದಾರೆ.ಹೀಗೆ ಮದುವೆ ಆಗ್ಬೇಕು ಅಂತ ಯಾವತ್ತೂ ಡ್ರೀಮ್ ಮಾಡಿಲ್ಲ. ಮಂಗಳೂರಿನಲ್ಲೂ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳೋ ಪ್ಲಾನ್ ಇದೆ ಎಂದಿದ್ದಾರೆ

ಸೋನಲ್ ಯಾಕೆ ಇಷ್ಟ ಆದ್ರು ಅನ್ನೋ ಪ್ರಶ್ನೆಗೆ ಉತ್ತರಿಸಿದ ತರುಣ್ ಸೋನಲ್ ಮೈಂಡ್ ಸೆಟ್ ನನಗಿಷ್ಟ .ಕಲ್ಮಶ ಇಲ್ಲದೆ ಇರೋ ಹುಡುಗಿ.ತುಂಬಾ ಚೆನ್ನಾಗಿ ಅಡುಗೆ ಮಾಡ್ತಾರೆ.ಫೋನ್ ಮಾಡಿದಾಗೆಲ್ಲಾ ಅಡುಗೆ ಮನೇಲಿ ಇದೀನಿ ಅಂತಿರ್ತಾರೆ.ಈ ಸಮಯದಲ್ಲಿ ದರ್ಶನ್ ಅವರನ್ನ ತುಂಬಾ ಮಿಸ್ ಮಾಡ್ಕೋತೀವಿ.ಅವರ ಮೇಲೆ ಗೌರವ, ಪ್ರೀತಿ ಹಾಗೆ ಇದೆ. ಇನ್ನು ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರಿಗೂ ಆಹ್ವಾನ ಕೊಟ್ಟಿದೀವಿ.ಬೇರೆ ಇಂಡಸ್ಟ್ರಿಯಲ್ಲಿ ಜಗಪತಿ ಬಾಬು, ಸೇರಿದಂತೆ ಹಲವು ಕಲಾವಿದರಿಗೆ ಆಹ್ವಾನ ಕೊಟ್ಟಿದ್ದೇವೆ ಎಂದಿದ್ದಾರೆ.