ಮನೆ Latest News ಇದು ನನ್ನ ಪ್ರಕಾರ ಕಾಪಿ ರೈಟ್ ಉಲ್ಲಂಘನೆ ಅಲ್ಲ:ಕಾಪಿರೈಟ್ ಬಗ್ಗೆ ಇಂಡಸ್ಟ್ರಿಯಲ್ಲಿ ನಾಲೆಡ್ಜೇ ಇಲ್ಲ: ನಟ...

ಇದು ನನ್ನ ಪ್ರಕಾರ ಕಾಪಿ ರೈಟ್ ಉಲ್ಲಂಘನೆ ಅಲ್ಲ:ಕಾಪಿರೈಟ್ ಬಗ್ಗೆ ಇಂಡಸ್ಟ್ರಿಯಲ್ಲಿ ನಾಲೆಡ್ಜೇ ಇಲ್ಲ: ನಟ ರಕ್ಷಿತ್ ಶೆಟ್ಟಿ ಹೇಳಿಕೆ

0

ಬೆಂಗಳೂರು; ನಟ ರಕ್ಷಿತ್ ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಜುಲೈ 15ರಂದು ಎಂಆರ್‌ಟಿ ಮ್ಯೂಸಿಕ್ ಪಾಲುದಾರ ನವೀನ್ ಕುಮಾರ್ ಎಂಬವರು  ನ್ಯಾಯ ಎಲ್ಲಿದೆ ಚಿತ್ರದ `ನ್ಯಾಯ ಎಲ್ಲಿದೆ’ ಹಾಡು ಮತ್ತು ಗಾಳಿ ಮಾತು ಚಿತ್ರದ ‘ಒಮ್ಮೆ ನಿನ್ನನ್ನು’  ಹಾಡನ್ನು ಪರಮ್ವಾ ಸ್ಟುಡಿಯೋಸ್ ಮತ್ತು ರಕ್ಷಿತ್ ಶೆಟ್ಟಿ ಅನಧಿಕೃತವಾಗಿ ಬಳಸಿಕೊಂಡಿದ್ದಾರೆ ಅಂತಾ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ರಕ್ಷಿತ್ ಶೆಟ್ಟಿ ಅವರಿಗೆ ನೋಟಿಸ್ ನ್ನು ಯಶವಂತಪುರ ಪೊಲೀಸರು ಜಾರಿ ಮಾಡಿದ್ದರು. ಅದರಂತೆ ರಕ್ಷಿತ್ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.  ನನಗೂ ಫೋಟೋ ನೋಡಿದಾಗಿನಿಂದ ಅದ್ರ ಅಮ್ಮ ಎಲ್ಲಿದ್ದಾರೆ ಅನ್ನೋ ಯೋಚನೆ. ನನ್ನ ಮಗಳಿಗೂ ಇದೇ ವಯಸ್ಸು. ಪಾಪ ಆ ಕಂದ ಅಮ್ಮನ ಮಡಿಲು ಸೇರಲಿ..

ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಕ್ಷಿತ್ ಶೆಟ್ಟಿ ಮೂರ್ನಾಲ್ಕು ಹಳೆ ಹಾಡುಗಳನ್ನ ಬ್ಯಾಕ್ ಗ್ರೌಂಡ್ ನಲ್ಲಿ ಬಳಸುವ ಸನ್ನಿವೇಶವಿತ್ತು.ಹಾಡುಗಳ ಬಳಕೆಗೆ ಪರ್ಮೀಷನ್ ತೆಗದುಕೊಳ್ಳೋದಕ್ಕೆ ರಾಜೇಶ್ ಅವರಿಗೆ ಹೇಳಿದ್ದೆ.ರಾಜೇಶ್ ಅವರು ಫೋನ್ ಮಾಡಿದಾಗ ದೊಡ್ಡ ಮೊತ್ತಕ್ಕೆ ಡಿಮ್ಯಾಂಡ್ ಮಾಡಿದ್ರು.ಅಷ್ಟು ಹಣ ಕೊಡುವ ಅವಶ್ಯಕತೆಯಿರಲಿಲ್ಲ . ಈ ಬಗ್ಗೆ ಮೂರ್ನಾಲ್ಕು ಬಾರಿ ಮಾತುಕತೆಯಾಗಿತ್ತು. ಒಂದು ಹಾಡು ಬ್ಯಾಂಕ್ ಗ್ರೌಂಡ್ ನಲ್ಲಿ ಬಂದಿದೆ.ಕಾಪಿ ರೈಟ್ ವಾಯ್ಲೇಷನ್ ಅಲ್ಲ ಇದು ಎಂದಿದ್ದಾರೆ.

ಇನ್ನು  ಕಾಪಿರೈಟ್ ಬಗ್ಗೆ ಏನು ಅನ್ನೋದು ಕೋರ್ಟ್ ನಲ್ಲಿ ನಾನು ತಿಳಿದುಕೊಳ್ಳಬೇಕು.ಈ ಹಿಂದೆ ಕೂಡ ಕಾಪಿ ರೈಟ್ ಆಕ್ಟ್ ಪ್ರಕರಣ ಬಂದಾಗ ನಾನು ಅದನ್ನ ಫೈಟ್ ಮಾಡಿದ್ದೆ.ನಮ್ಮ ಮ್ಯಾನೇಜರ್ ರಾಜೇಶ್ ಅವರಿಂದ ಕರೆ ಹೋಗಿತ್ತು .ಆದರೆ ಅಲ್ಲಿ ಸರಿಯಾದ ರೆಸ್ಪಾನ್ಸ್ ಬಂದಿರಲಿಲ್ಲ .ಹಾಗಾಗಿ ಸಾಂಧರ್ಬಿಕವಾಗಿ ಹಾಡು ಬಳಕೆಯಾಗಿದೆ ಅಷ್ಟೆ.ಇಂದು ವಿಚಾರಣೆಗೆ ಕರೆದಿದ್ರು. ಹಾಗಾಗಿ ವಿಚಾರಣೆಗೆ ಬಂದಿದ್ದೇನೆ.

ಕಾಪಿರೈಟ್ ಬಗ್ಗೆ ಇಂಡಸ್ಟ್ರಿಯಲ್ಲಿ ನಾಲೆಡ್ಜೇ ಇಲ್ಲ.ಇದು ನನ್ನ ಪ್ರಕಾರ ಕಾಪಿ ರೈಟ್ ಉಲ್ಲಂಘನೆ ಅಲ್ಲ.ಸಂದರ್ಭಕ್ಕೆ ಬೇಕಾದಂತಹ ಹಿನ್ನಲೆ 6 ಸೆಕೆಂಡ್ ಹಾಡು ಬಳಕೆಯಾಗಿದೆ.ಹಾಗಾದರೆ ಕನ್ನಡದ ಹಾಡನ್ನ ಕನ್ನಡ ಚಿತ್ರದಲ್ಲಿ ಬಳಕೆ ಮಾಡುವಂತೆಯೇ ಇಲ್ವಾ…?ಇದನ್ನ ನಾನು ಕೂಡ ಕೋರ್ಟ್ ನಲ್ಲಿ ಫೈಟ್ ಮಾಡ್ತಿನಿ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.