ಮನೆ Latest News ರೇಣುಕಾಸ್ವಾಮಿ ಕೊಲೆ ಪ್ರಕರಣ; ಆಗಸ್ಟ್ 14ರವರೆಗೆ ಡಿ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣ; ಆಗಸ್ಟ್ 14ರವರೆಗೆ ಡಿ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 13 ಆರೋಪಿಗಳು ಹಾಗೂ ತುಮಕೂರಿನ ಕೇಂದ್ರ ಕಾರಾಗೃಹದಲ್ಲಿರುವ 4 ಆರೋಪಿಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ  ಜೈಲಾಧಿಕಾರಿಗಳು 24ನೇ ಎಸಿಎಂಎಂ ಕೋರ್ಟ್‌ಗೆ  ಹಾಜರುಪಡಿಸಿದರು.

ಈ ವೇಳೆ ಪೊಲೀಸರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯ ವಿಸ್ತರಣೆ ಕೋರಿ ನ್ಯಾಯಾಧೀಶರ ಮುಂದೆ ರಿಮ್ಯಾಂಡ್‌ ಕಾಪಿಯನ್ನು ಸಲ್ಲಿಸಿ ಮನವಿ ಮಾಡಿದರು. ಈ ವೇಳೆ ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್‌ ಆಗಸ್ಟ್‌ 14 ರವರೆಗೆ ವಿಸ್ತರಣೆ ಮಾಡಿ ಆದೇಶ ನೀಡಿದೆ.

ಸದ್ಯಕ್ಕಂತೂ ನಟ ದರ್ಶನ್ ಗಿಲ್ಲ ಮನೆಯೂಟ; ದರ್ಶನ್ ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿ ವಿಚಾರಣೆ ಮುಂದೂಡಿಕೆ

ಯಾಕೋ ನಟ ದರ್ಶನ್ ಅವರ ಟೈಮೇ ಸರಿಯಿಲ್ಲ ಅನ್ಸುತ್ತೆ. ಪರಪ್ಪನ ಅಗ್ರಹಾರ ಜೈಲು ಸೇರಿದಾಗಿನಿಂದ ನಟ ದರ್ಶನ್ ಮನೆಯೂಟ ಬೇಕು ಜೈಲೂಟ ಸೆಟ್ ಆಗ್ತಿಲ್ಲ, ಆರೋಗ್ಯ ಕೈ ಕೊಡುತ್ತಿದೆ ಅಂತಾ ಕೋರ್ಟ್ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಮೊದಲಿಗೆ ಹೈಕೋರ್ಟ್ ಗೆ ಅರ್ಜಿ ಹಾಕಿದ್ರು. ಅಲ್ಲಿಂದ ಮತ್ತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಜುಲೈ 25 ರಂದು ದರ್ಶನ್ ಅರ್ಜಿ ವಜಾಗೊಂಡಿತ್ತು. ಹಾಗಾಗಿ ಮತ್ತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ತಾಂತ್ರಿಕ ಕಾರಣಗಳಿಂದ ವಾಪಾಸ್ ಪಡೆದಿದ್ದರು. ಮತ್ತೆ ನಿನ್ನೆ ಹೈಕೋರ್ಟ್ ಗೆ ಮನೆಯೂಟ, ಮಲಗಲು ಹಾಸಿಗೆ, ಓದಲು ಪುಸ್ತಕ ಪಡೆಯಲು ಅನುಮತಿ ನೀಡುವಂತೆ ಜೈಲಿನ ಅಧೀಕ್ಷಕರಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು.

ಇನ್ನು ಈ ಅರ್ಜಿಯಲ್ಲಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರು ಮತ್ತು ಕಾಮಾಕ್ಷಿಪಾಳ್ಯದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ , ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು. ಇಂದು ಆ ಅರ್ಜಿಯ ವಿಚಾರಣೆ ನಡೆಯಿತು. ಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕ ಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು.

ಎರಡೂ ಕಡೆಯ ವಾದ ವಿವಾದವನ್ನು ಆಲಿಸಿದ ಹೈಕೋರ್ಟ್ ವಿಚಾರಣೆಯನ್ನು ವಿಚಾರಣೆಯನ್ನು ಆಗಸ್ಟ್ 20 ಕ್ಕೆ ಮುಂದೂಡಿದೆ.ಹಾಗಾಗಿ ಸದ್ಯಕ್ಕಂತೂ ಡಿ ಬಾಸ್ ಗೆ ಜೈಲೂಟವೇ ಫಿಕ್ಸ್ ಎಂಬಂತಾಗಿದೆ.