ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ನೀ ದರ್ಶನ್ ಈಗಾಗಲೇ 5 ಬಾರಿ ಭೇಟಿ ಮಾಡಿದ್ದಾರೆ. ಇನ್ನು ಇದು ಆರನೇ ಬಾರಿಗೆ ಮತ್ತೆ ಡಿ ಬಾಸ್ ಅವರನ್ನು ಪತ್ನಿ, ಮಗ ಹಾಗೂ ಸಹೋದರ ಭೇಟಿಯಾಗಿದ್ದಾರೆ.
ಶನಿವಾರ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಭೇಟಿ ಕೊಟ್ಟು ಡಿ ಬಾಸ್ ಗಾಗಿ ನವ ಚಂಡಿಕಾಯಗ ನೆರವೇರಿಸಿದ್ದರು.ಇಂದು ಆ ಪೂಜಾ ಕೈಂಕರ್ಯದ ಪ್ರಸಾದವನ್ನು ನೀಡಲು ರಪರ್ರನ ಅಗ್ರಹಾರ ಜೈಲಿಗೆ ಪುತ್ರ ಹಾಗೂ ಮಗವನೊಂದಿಗೆ ಆಗಮಿಸಿದ್ದರು, ಕೆಲ ಹೊತ್ತು ದರ್ಶನ್ ಜೊತೆ ಮಾತುಕತೆ ನಡೆಸಿ ತೆರಳಿದ್ದಾರೆ ಎನ್ನಲಾಗಿದೆ.
ದರ್ಶನ್ ಗಾಗಿ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ವಿಜಯಲಕ್ಷ್ಮೀ ನವಚಂಡಿಕಾ ಯಾಗ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಒಂದು ತಿಂಗಳಾಯ್ತು. ದರ್ಶನ್ ಅವರು ಅರೆಸ್ಟ್ ಆದಾಗಿನಿಂದ ಅವರನ್ನು ಹೊರಗೆ ತರಲು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.
ಒಂದು ಕಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರಂತರವಾಗಿ ವಕೀಲರ ಜೊತೆ ಚರ್ಚೆಯನ್ನು ನಡೆಸುತ್ತಿದ್ದರೆ ಮತ್ತೊಂದು ಕಡೆ ಆಗಾಗ್ಗೆ ಜೈಲಿಗೆ ಭೇಟಿ ನೀಡಿ ದರ್ಶನ್ ಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದಾರೆ. ಅಲ್ಲದೇ ನಿರಂತರವಾಗಿ ದೇವರ ಮೊರೆ ಹೋಗ್ತಿದ್ದಾರೆ. ಮೊನ್ನೆ ಬಂಡಿ ಮಾಕಾಳಮ್ಮ ದೇಗುಲಕ್ಕೆ ವಿಜಯಲಕ್ಷ್ಮೀ ಭೇಟಿ ನೀಡಿ ದರ್ಶನ್ ಗಾಗಿ ಪೂಜೆ ಸಲ್ಲಿಸಿದ್ದರು. ಇಂದು ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಭೇಟಿ ನೀಡಿ ದರ್ಶನ್ ಗಾಗಿ ನವ ಚಂಡಿಕಾಯಾಗ ನೆರವೇರಿಸಿದ್ದಾರೆ ವಿಜಯಲಕ್ಷ್ಮಿ ದರ್ಶನ್.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರು ಕೊಲ್ಲೂರು ಮೂಕಾಂಬಿಕಾ ದೇವಸ್ಧಾನಕ್ಕೆ ತಮ್ಮ ಆಪ್ತರೊಂದಿಗೆ ಆಗಮಿಸಿ ವಿಜಯಲಕ್ಷ್ಮಿ ದರ್ಶನ್ ತಾಯಿಯ ದರ್ಶನವನ್ನ ಪಡೆದಿದ್ದಾರೆ.ಅಲ್ಲದೇ ಇಂದು ಬೆಳಗ್ಗೆ ಅವರು ನವ ಚಂಡಿಕಾ ಹೋಮ ನೆರವೇರಿಸಿದ್ದಾರೆ.