ಮನೆ Blog ರೇಣುಕಾಸ್ವಾಮಿ ಮನೆಗೆ ನಾನು ರಾಜಿ ಸಂಧಾನಕ್ಕಾಗಿ ಹೋಗಿಲ್ಲ; ಮಾಧ್ಯಮದಲ್ಲಿ ಪ್ರಸಾರವಾಗಿರುವ ಸುದ್ದಿ ಬಗ್ಗೆ ವಿನೋದ್ ರಾಜ್...

ರೇಣುಕಾಸ್ವಾಮಿ ಮನೆಗೆ ನಾನು ರಾಜಿ ಸಂಧಾನಕ್ಕಾಗಿ ಹೋಗಿಲ್ಲ; ಮಾಧ್ಯಮದಲ್ಲಿ ಪ್ರಸಾರವಾಗಿರುವ ಸುದ್ದಿ ಬಗ್ಗೆ ವಿನೋದ್ ರಾಜ್ ಬೇಸರ

0

ಬೆಂಗಳೂರು; ದರ್ಶನ್ ಆಂಡ್ ಗ್ಯಾಂಗ್ ನಿಂದ ಕೊಲೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮನೆಗೆ ಕಳೆದ ಶುಕ್ರವಾರ ಹಿರಿಯ ನಟ ವಿನೋದ್ ರಾಜ್ ಭೇಟಿ ನೀಡಿದ್ದರು. ಅದಕ್ಕೂ ಎರಡು ದಿನ ಮೊದಲು ಅವರು ದರ್ಶನ್ ಅವರನ್ನು ಭೇಟಿಯಾಗಿದ್ದರು. ಹೀಗಾಗಿ ವಿನೋದ್ ರಾಜ್ ದರ್ಶನ್ ಅವರ ಮಾತಿನಂತೆ ರೇಣುಕಾಸ್ವಾಮಿ ಕುಟುಂಬದ ಭೇಟಿಗೆ ತೆರಳಿದ್ದರು ಎನ್ನಲಾಗಿತ್ತು.ಅಲ್ಲದೇ ಸಂಧಾನ ಮಾಡೋದಕ್ಕಾಗಿ ಹೋಗಿದ್ರು ಎಂದು ಸುದ್ದಿ ಹರಿದಾಡಿತ್ತು. ಇದೀಗ ಈ ಬಗ್ಗೆ ಅವರೇ ಕ್ಲ್ಯಾರಿಫಿಕೇಷನ್ ಕೊಟ್ಟಿದ್ದಾರೆ.

ನಾನು ರಾಜಿ ಸಂಧಾನ ಮಾಡುವಂತಹ ಕೆಲಸ ಮಾಡಲ್ಲ. ದರ್ಶನ್ ಅವರನ್ನ ಒಬ್ಬ ಕಲಾವಿದ ಕಾರಣಕ್ಕೆ ಭೇಟಿ ಮಾಡಿ ಬಂದೆ .ರೇಣುಕಾಸ್ವಾಮಿ ಪತ್ನಿ ಗರ್ಭಿಣಿ, ಹುಟ್ಟೋ ಮಗುಗೆ ಏನಾದ್ರೂ ಒಳ್ಳೇದು ಮಾಡೋಣಾಂತ ಹೋಗಿದ್ದೆ.ನನ್ನ ಕೈಲಾದ ಕಾಣಿಕೆ ಕೊಟ್ಟು ಬಂದೆ .ನಾನು ರಾಜಿ ಸಂಧಾನ ಮಾಡಿಲ್ಲ, ಮಾಡೋಕು ಆಗಲ್ಲ.ಅಂತಹ ಕೆಲ್ಸ ನಾನ್ ಮಾಡಲ್ಲ ಎಂದು ವಿನೋದ್ ರಾಜ್ ಬೇಸರ ಹೊರ ಹಾಕಿದ್ದಾರೆ.

ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡಿದ ವಿನೋದ್ ರಾಜ್;  ಒಂದು ಲಕ್ಷ ರೂಪಾಯಿ ಸಹಾಯಧನ ನೀಡಿದ ನಟ

; ದರ್ಶನ್ ಆಂಡ್ ಗ್ಯಾಂಗ್ ನಿಂದ ಕೊಲೆಯಾದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ನಿವಾಸಕ್ಕೆ ಇಂದು ಹಿರಿಯ ನಟ ವಿನೋದ್ ರಾಜ್ ಭೇಟಿ ನೀಡಿದರು. ಮೊನ್ನೆ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದ ಬೆನ್ನಲ್ಲೇ ಇಂದು ರೇಣುಕಾಸ್ವಾಮಿ ನಿವಾಸಕ್ಕೆ ಅವರು ಭೇಟಿ ನೀಡಿದ್ದಾರೆ. ಅಲ್ಲದೇ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ 1 ಲಕ್ಷ ರೂಪಾಯಿ ಸಹಾಯಧನ ನೀಡಿದ್ರು.

ಬಳಿಕ ಮಾತನಾಡಿದ ಅವರು ರೇಣುಕಾಸ್ವಾಮಿ ಕುಟುಂಬ ಮನೆಗೆ‌ ಆಧಾರ ಸ್ತಂಭವಾಗಿದ್ದ ಮಗನ ಕಳೆದುಕೊಂಡಿದೆ . ಅವರ ಪರಿಸ್ಥಿತಿ ನೋಡಿದ್ರೆ ಎಂಥವರಿಗಾದ್ರು ಕರುಳು ಕಿತ್ತು ಬರುತ್ತೆ. ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡ್ತಾರೆ.ಇದು ಆಘಾತಕಾರಿ ಘಟನೆ. ಹೆಸರು, ಕೀರ್ತಿಯಲ್ಲಿರುವ ನಾವು ತುಂಬಾ ಎಚ್ಚರವಾಗಿರಬೇಕು.ನಮ್ಮದು ಉನ್ನತವಾದ ಸ್ಥಾನ. ಎತ್ತರದ ಮಟ್ಟದಲ್ಲಿರುವವರು ನಾವು ವಿವೇಕ ಮರೆಯಬಾರದು.ಅಚಾತುರ್ಯ‌ ನಡೆಯುತ್ತವೆ. ಮುಂದಿನ ತಲೆಮಾರುಗಳು ಹೀಗೆ ಆಗದಂತೆ ಎಚ್ಚರವಹಿಸಬೇಕು.ಮಾಧ್ಯಮ ತಿದ್ದಿಬುದ್ದಿ ಹೇಳಿದಂತೆ ಅನುಸರಿಸಿಕೊಂಡು ಸಾಗಬೇಕು ಎಂದರು.

ಇನ್ನು ದರ್ಶನ್ ಭೇಟಿ ವೇಳೆ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಯಾವುದೇ ಮಾತನಾಡಿಲ್ಲ ಎಂದು ಅವರು ದರ್ಶನ್ ಪರವಾಗಿ ಮಾತುಕತೆಗೆ ಬಂದಿದ್ದೀರಾ ಎಂಬ ಪ್ರಶ್ನೆಗೆ ನಿರಾಕರಿಸಿದ ಅವರು ಛೇ ಛೇ ಹಾಗೆಲ್ಲ ಇಲ್ಲ, ದರ್ಶನ್ ಭೇಟಿ ವೇಳೆ ಮಾತಾಡಲೇ ಅಗಿಲ್ಲ.ದರ್ಶನ್ ನೋಡಿದರೆ ಅಲ್ಲೂ ಅದೇ ಪರಿಸ್ಥಿತಿ.ಇಲ್ಲಿ ನೋಡಿದರೆ ಅದಕ್ಕಿಂತ ಭಯಾನಕ ಸ್ಥಿತಿ ಇದೆ ಎಂದರು.

ಇನ್ನು ಇದೇ ವೇಳೆ ಮಾತನಾಡಿದ ಕೊಲೆಯಾದ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವನಗೌಡ  ಪ್ರಕರಣದ ಬಗ್ಗೆ ನಾವು ಸಂಧಾನ ಮಾಡೋದಕ್ಕೆ ಹೊರಟಿದ್ದೇವೆ ಅಂತ ಪ್ರಚಾರ ಮಾಡಲಾಗುತ್ತಿದೆ. ಆದರೆ ಅದು ಸರಿಯಲ್ಲ.ಮಗನ ಕಳೆದುಕೊಂಡು ನಮ್ಮ ಕರಳು ಕಿತ್ತು ಬಂದ ಹಾಗಾಗಿದೆ.ಪ್ರಕರಣದಿಂದ ನಾವು ತುಂಬಾ ನೊಂದಿದ್ದೇವೆ.ನನ್ನ ತಾಯಿಗೆ 98 ವರ್ಷವಾಗಿದೆ. ನಮ್ಮ ಮಗ ರೇಣುಕಾಸ್ವಾಮಿ ಪ್ರತಿ ನಿತ್ಯ ಅಜ್ಜಿಗೆ ಆರೈಕೆ ಮಾಡ್ತಿದ್ದನು.ನಮ್ಮ ಇಡೀ ಕುಟುಂಬವೇ ಸಂಕಷ್ಟದಲ್ಲಿದೆ. ಮಗನ ಕೊಂದ ಆರೋಪಿಗಳು ಯಾರು ಅಂತ ನಮಗೆ ಗೊತ್ತಿಲ್ಲ.ಪ್ರಕರಣದ ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು.ವಿನೋದ್ ರಾಜ್ ತಾಯಿ ಬಗ್ಗೆ ಅಪಾರ ಗೌರವವಿದೆ.ಅವರ ದೈವಭಕ್ತಿ ಬಗ್ಗೆ ಕೇಳಿದ್ದೇವೆ. ವಿನೋದ ರಾಜ್‍ಕುಮಾರ್ ಬಂದಿದ್ದು ಸಮಾಧಾನ ತಂದಿದೆ ಎಂದು ಅವರು ಹೇಳಿದ್ರು.