ಬೆಂಗಳೂರು; ಮುಖ್ಯಮಂತ್ರಿಗಳ ಆಪಾತ್ಕಾಲಯಾನ ಸೇವೆ ಅಡಿಯಲ್ಲಿ ನೂತನ 65 ಆಂಬ್ಯುಲೆನ್ಸ್ ಗಳನ್ನು ವಿಧಾನಸೌಧದ ಗ್ರ್ಯಾಂಡ್ ಸ್ಪೆಟ್ಸ್ ಮುಂಭಾಗದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಸಿಎಂ ಸಿದ್ದರಾಮಯ್ಯ ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆಗೊಳಿಸಿದ್ರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ , ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇಲಾಖೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ ಹಾಗೂ ರಸ್ತೆ ಸುರಕ್ಷತಾ ಪ್ರಾಧಿಕಾರದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು
ಇನ್ನು ಲೋಕಾರ್ಪಣೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹಿಂದೆ ಚಿಕಿತ್ಸೆಗೆ ಒಳಗಾಗಬೇಕಾದ ಜನರೇ ಸಾವನ್ನಪ್ಪುವ ಕೆಲಸ ಆಗುತ್ತಿತ್ತು.ಅಪಘಾತ ಆದಾಗ ಕಡಿಮೆ ಸಮಯದಲ್ಲಿ ಚಿಕಿತ್ಸೆ ಸಿಗಬೇಕು.ಹೀಗಾಗಿ ಅಪಘಾತ ವಲಯಗಳಲ್ಲೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು.ದೂರದ ಊರುಗಳಿಂದ ಆಸ್ಪತ್ರೆಗೆ ಕರೆದುಕೊಂಡು ಬರ್ತಾರೆ.ಸಮೀಪ ಆಸ್ಪತ್ರೆಗೆ ಗಾಯಾಳುವನ್ನ ಸೇರಿಸಲು ಈ ಆಂಬ್ಯುಲೆನ್ಸ್ ವ್ಯವಸ್ಥೆ ಕೇಳುತ್ತಾರೆ.ಅಪಘಾತ ಪ್ರಕರಣಗಳಿಗಾಗಿಯೇ ಈ ವಿಶೇಷ ಆಂಬ್ಯುಲೆನ್ಸ್ ಕೆಲಸ ಮಾಡಲಿದೆ.ಸಿಎಂ ಹೆಸರಿನಲ್ಲಿ ಈ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿದ್ದೇವೆ.ಅಪಘಾತ ಆಗಬೇಕಾದರೆ ಹಲವು ಸಮಸ್ಯೆಗಳಿಂದ ಸಂಭವಿಸುತ್ತೆ.65 ಆಂಬ್ಯುಂಲೆನ್ಸ್ ಗಳಿಗೆ ಚಾಲನೆ ನೀಡುತ್ತಿದ್ದೇವೆ ಎಂದರು.
65ರ ಪೈಕಿ 26 ಅಡ್ವಾನ್ಸ್ ಲೈಫ್ ಸಪೋರ್ಟ್, 36 ಬೇಸಿಕ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ ಗಳಾಗಿ ವಿಂಗಡಣೆ ಮಾಡಿದ್ದೀವಿ.ಬ್ಲಾಕ್ ಸ್ಪಾಟ್ ಗಳನ್ನ ಗುರುತು ಮಾಡಿದ್ದೇವೆ.ಆ ಬ್ಲಾಕ್ ಸ್ಪಾಟ್ ನಲ್ಲಿ ಈ ಆಂಬ್ಯುಲೆನ್ಸ್ ಕೆಲಸ ಮಾಡುತ್ತೆ.ಸಮೀಪತ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಿಗೆ ಗಾಯಾಳುಗಳನ್ನ ಕೊಂಡೊಯ್ಯಲಾಗುತ್ತದೆ.ಇದರಿಂದ ಅಪಘಾತದ ಮರಣ ತಡೆಗಟ್ಟಬಹುದು ಎಂದರು.
ಇನ್ನು ಕಾರ್ಯಕ್ರಮ ಉದ್ಘಾಟನೆ ವೇಳೆ ದೀಪ ಬೆಳಗಲು ಸಿಎಂ ಸಿದ್ದರಾಮಯ್ಯ ಹರಸಾಹಸ ಪಟ್ರು.ಗಾಳಿ ಇದ್ದ ಕಾರಣ ಕ್ಯಾಂಡಲ್ ಹಚ್ಚಲು ಕೊಂಚ ಗಲಿಬಿಲಿಯಾಯಿತು.ಗಾಳಿ ಇದ್ದ ಹಿನ್ನೆಲೆ ಬೆಂಕಿ ಪೊಟ್ಟಣದ ಮುಖಾಂತರ ಕ್ಯಾಂಡಲ್ ಹಚ್ಚಿ ಕೊಡಲು ಒದ್ದಾಡಿದ್ದಾರೆ. ಕೊನೆಗೆ ನೇರವಾಗಿ ತಾವೇ ಬೆಂಕಿ ಪೊಟ್ಟಣದ ಮೂಲಕ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ. ಇದೇ ವೇಳೆ ಮಾತನಾಡಿದ ಸಿಎಂ ಶರೀರದ ಭಾಗಗಳೇ ಒಮ್ಮೊಮ್ಮೆ ಅಪಘಾತದಿಂದ ಬೇರ್ಪಡುತ್ತೆ.ಹೀಗಾಗಿಯೇ ಮುಖ್ಯಮಂತ್ರಿಗಳ ಆಪಾತ್ಕಾಲಯಾನ ಪ್ರಾರಂಭ .ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಿಗೂ ಆಂಬ್ಯುಲೆನ್ಸ್ ಸೇವೆ ವಿಸ್ತರಣೆ ಮಾಡುತ್ತೇವೆ.ಸರ್ಕಾರಿ ನಿಯಮಪಾಲನೆ ಮಾಡಿ ವಾಹನ ಚಲಾಯಿಸಬೇಕು.ಬಹಳ ಜನ ಕುಡಿದು ವಾಹನ ಚಾಲನೆ ಮಾಡುತ್ತಾರೆ.ಕುಡಿದು ವಾಹನ ಚಲಾವಣೆ ಮಾಡಬಾರದು ಅಂತಾ ಹೇಳಿದ್ಪರು ಮಾಡ್ತಾರೆ.
ಇದನ್ನೇ ನೋಡಿಕೊಂಡು ಹೋಗ್ತಾನೆ ಕುಡಿತಾ ವಾಹನ ಚಲಾವಣೆ ಮಾಡ್ತಾರೆ.ಚಾಪೆ ಕೆಳಗೆ ನುಗ್ಗು ಅಂದರೆ ರಂಗೋಲಿ ಕೆಳಗೆ ನುಗ್ಗಲು ನಮ್ಮ ಜನ ಹೋಗ್ತಾರೆ.ರಸ್ತೆಯೇ ಇವರದ್ದು ಅಂತ ಕುಡಿತು ತೂರಾಡುತ್ತಾ ಹೇಗ್ತಿರುತ್ತಾರೆ.ಜಾಗೃತಿ ಮೂಡಿಸಲೆಂದೇ ಈ ರಸ್ತೆ ಪ್ರಾಧಿಕಾರ ರಚನೆ ಮಾಡಿದ್ದೇವೆ.ಸಂಚಾರಿ ನಿಯಮ ಪಾಲಿಸೋದು ರಸ್ತೆಯಲ್ಲಿ ತಿರುಗಾಡುವವನ ಜವಾಬ್ದಾರಿ.ವಾಹನವನ್ನ ಸುರಕ್ಷಿತವಾಗಿ ಇಟ್ಟಿಕೊಳ್ಳೋದು ಪ್ರತಿಯೊಬ್ಬರ ಕರ್ತವ್ಯ.ನನಗೆ ಕಾರು ಓಡಿಸೋಕೆ ಬರೊಲ್ಲ.ಕೆಲವರು ಕಾರು ಓಡಿಸುತ್ತಲೇ ಫೋನಿನಲ್ಲಿ ಮಾತಾಡ್ತಾ ಹೋಗ್ತಾರೆ.ಇದನ್ನೆಲ್ಲ ನಿಲ್ಲಿಸಬೇಕು, ನಿಯಮವನ್ನ ಎಲ್ಲರೂ ಪಾಲನೆ ಮಾಡಬೇಕು.80ರಲ್ಲಿ ಓಡಿಸು ಅಂದ್ರೆ 100 ಸ್ಪೀಡ್ ನಲ್ಲಿ ಓಡಿಸುತ್ತಾರೆ.ವಿದೇಶಗಳಲ್ಲಿ ವೇಗವಾಗಿ ಓಡಿಸಿದ್ರೆ ಲೈಸೆನ್ಸ್ ಕ್ಯಾನ್ಸಲ್ ಮಾಡ್ತಾರೆ.ನಮ್ಮಲ್ಲೂ ಹಾಗೆ ಆಗ್ಬೇಕು. ಎಂದಿದ್ದಾರೆ. ಇದೇ ವೇಳೆ ಏನ್ರಿ ಸಾರಿಗೆ ಸಚಿವರೇ ಎಂದು ರಾಮಲಿಂಗ ರೆಡ್ಡಿ ಕಾಲೆಳೆದಿದ್ದಾರೆ ಸಿಎಂ.











