ಬೆಂಗಳೂರು; ರಾಜ್ಯ ಸೇರಿದಂತೆ ಹೊರ ರಾಜ್ಯದ 6 ಜನ ನಕ್ಸಲರು ಇಂದು ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಶಸ್ತಾಸ್ತ್ರ ತೊರೆದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಆ ಮೂಲಕ ರಾಜ್ಯ ನಕ್ಸಲ್ ಮುಕ್ತವಾಗಿದೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಘೋಷಿಸಿದ್ದಾರೆ.ಇನ್ನು ಶರಣಾದ ನಕ್ಸಲರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಇದೇ ವೇಳೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಮುಂದೆ ಮಾತನಾಡಿದ ನಕ್ಸಲ್ ನಾಯಕಿ ಮುಂಡಗಾರು ಲತಾ ಸರ್ಕಾರ ನಮಗೆ ಷರತ್ತುಗಳನ್ನು ಒಪ್ಪಿ ಮುಖ್ಯವಾಹಿನಿಗೆ ಬರಲು ನಮ್ಮ ಒಪ್ಪಿಗೆ ಇದೆ. ಸಂವಿಧಾನಿಕವಾಗಿ ಜನಪರವಾಗಿ ನಡೆಸಿಕೊಂಡು ಬಂದಿದ್ದಾ ಎಲ್ಲಾ ಹೋರಾಟಗಳನ್ನು ಇನ್ಮು ಮುಂದೆ ಕೈಬಿಟ್ಟು ಶರಣಾಗಿದ್ದೇವೆ..ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲಿ ಎಂದರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಪ್ರಯತ್ನದಿಂದ 6 ಜನರು ಹೋರಾಟದ ಹಾದಿಯನ್ನು ಬಿಟ್ಟು ಪರಿವರ್ತನೆಯಾಗಿ ಮುಖ್ಯ ವಾಹಿನಿಗೆ ಬಂದಿದ್ದಾರೆ. ಚಿಕ್ಕಮಗಳೂರಿನ ಲತಾ ಮುಂಡಗಾರು ವನಜಾಕ್ಷಿ, ದಕ್ಷಿಣಕನ್ನಡ ಜಿಲ್ಲೆಯ ಸುಂದರಿ ಕುತ್ಲೂರು, ಮಾರಪ್ಪ ಆರೋಲಿ ರಾಯಚೂರು ,ಜೀಶ ವೈನಾಡು, ಕೇರಳ, ಕೆ ವಸಂತ್ ವೆಲ್ಲೂರು ತಮಿಳುನಾಡು ಈ ಆರು ಜನ ಶರಣಾಗಿದ್ದಾರೆ. ಕೆಲ ದಿನಗಳ ಹಿಂದೆ ಭೇಟಿಯಾಗಿ ಮಾತುಕತೆ ನಡೆಸಿದ್ರು..ಶರಣಾಗುವ ಬಗ್ಗೆ ತಿಳಿಸಿದ್ರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಶರಣಾದ ಈ ಆರು ಮಂದಿಗೆ ಸರ್ಕಾರ ಎಲ್ಲಾ ರೀತಿಯ ಬೆಂಬಲ ಕೊಡಲು ಸಮ್ಮತಿ ನೀಡುತ್ತದೆ. ಶಸ್ತ್ರಾಸ್ತ್ರ ಹೋರಾಟದಿಂದ ವ್ಯವಸ್ಥೆ ಬದಲಿಸಲು ಸಾಧ್ಯವಿಲ್ಲ. ಅನ್ಯಾಯದ ವಿರುದ್ಧ ಪ್ರತಿಭಟಿಸಲು ಅವಕಾಶ ಇದೆ. ಮುಖ್ಯವಾಹಿನಿಗೆ ಬರಲ ಒಪ್ಪಿದ್ದಾರೆ.ನಕ್ಸಲ್ ಮುಕ್ತ ರಾಜ್ಯ ಮಾಡುವುದು ನಮ್ಮ ಗುರಿಯಾಗಿದೆ. ಎಂದರು. ಇಷ್ಟು ದಿನ ಅವರ ಹೋರಾಟದ ದಾರಿ ಸರಿಯಿರಲಿಲ್ಲ. ಈಗ ಸಂವಿಧಾನ ಬದ್ಧವಾಗಿ ಸರಿದಾರಿಗೆ ಬಂದಿದ್ದಾರೆ. ಡಿಸಿ ಅವರು ಮುಂದೆ ಭೇಟಿಯಾಗಿ ಚರ್ಚಿಸಿದ್ದಾರೆ. ತ್ವರಿತ ನ್ಯಾಯಾಲಯ ಮಾಡುವ ಮೂಲಕ ಆದಷ್ಡು ಶೀಘ್ರ ಪ್ರಕರಣ ಇತ್ಯರ್ಥ ಮಾಡಲಾಗುವುದು. ತಮಿಳುನಾಡು ಮತ್ತು ಕೇರಳ ಸಿಎಂ ಜತೆ ಚರ್ಚಿಸಿ ಇಬ್ಬರು ನಕ್ಸಲ್ ಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಿಎಂ ಹೇಳಿದ್ರು.
ಇನ್ನು ಶರಣಾದ ಆರು ಜನ ನಕ್ಸಲರಿಗೆ ಮೊದಲಿಗೆ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಮಾತನಾಡಲು ಅವಕಾಶ ಕಲ್ಪಿಸಲಾಯಿತು. ಬಳಿಕ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಬೆಂಗಳೂರಿನ ರಹಸ್ಯ ಸ್ಥಳಕ್ಕೆ ಪೊಲೀಸರು ಅವರನ್ನು ಕರೆದುಕೊಂಡು ಹೋದರು. ಇನ್ನು ನಾಳೆ ಚಿಕ್ಕಮಗಳೂರು ಎಸ್ಪಿ ಮತ್ತು ಡಿಸಿ ಅವರನ್ನು ಮಾತಾನಾಡಿಸಿದ್ದಾರೆ. ಶರಣಾಗತಿ ಬಗ್ಗೆ ಕೆಲ ದಾಖಲೆಗಳಿಗೆ ಮಾಹಿತಿ ನೀಡಿ ಆರು ಜನ ನಕ್ಸಲ್ ಸದಸ್ಯರು ಸಹಿ ಮಾಡಲಿದ್ದಾರೆ. ರಾತ್ರಿಯೇ ಬೆಂಗಳೂರು ಕೋರ್ಟ್ ಗೆ ಹಾಜರುಪಡಿಸಿ ಚಿಕ್ಕಮಗಳೂರು ಪೊಲೀಸರು ಕಸ್ಟಡಿಗೆ ಪಡೆಯಲಿದ್ದಾರೆ. ಕೋರ್ಟ್ ಗೆ ಕರೆದುಕೊಂಡು ಹೋಗುವವರೆಗೆ ಇವರ ಜೊತೆ ಶರಣಾಗತಿ ಸಮಿತಿ ಸದಸ್ಯರು ಉಪಸ್ಥಿತಿ ಇರಲಿದ್ದಾರೆ.