ಮನೆ Latest News ತಿರುಪತಿಯಲ್ಲಿ ಭೀಕರ ದುರಂತ: ತಿಮ್ಮಪ್ಪನನ್ನು ನೋಡೋ ಕಾತುರದಲ್ಲಿದ್ದ 6 ಮಂದಿ ಭಕ್ತರ ಕಾಲ್ತುಳಿತಕ್ಕೆ ಬಲಿ

ತಿರುಪತಿಯಲ್ಲಿ ಭೀಕರ ದುರಂತ: ತಿಮ್ಮಪ್ಪನನ್ನು ನೋಡೋ ಕಾತುರದಲ್ಲಿದ್ದ 6 ಮಂದಿ ಭಕ್ತರ ಕಾಲ್ತುಳಿತಕ್ಕೆ ಬಲಿ

0

ತಿರುಪತಿಯಲ್ಲಿ ಭೀಕರ ದುರಂತ ಸಂಭವಿಸಿದೆ. ತಿಮ್ಮಪ್ಪನನ್ನು ನೋಡೋ ಕಾತುರದಲ್ಲಿದ್ದ 6 ಮಂದಿ ಭಕ್ತರ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ.  ವೈಕುಂಠ ದ್ವಾರ ದರ್ಶನ ಟಿಕೆಟ್ ಖರೀದಿಸುವ ಕೇಂದ್ರಗಳ ಬಳಿ ಕಾಲ್ತುಳಿತ ಉಂಟಾಗಿ  6 ಜನ ಸಾವನ್ನ್ಪಪಿದ್ದಾರೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಉಸಿರು ನಿಲ್ಲಿಸಿದ್ದಾರೆ. ದುರಂತಲ್ಲಿ 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಈ ಘಟನೆಯಲ್ಲಿ ಕರ್ನಾಟಕದ ಬಳ್ಳಾರಿಯ ಮಹಿಳೆಯೊಬ್ಬರು ಕೂಡ ಸಾವನ್ನಪ್ಪಿದ್ದಾರೆ. ಬಳ್ಳಾರಿಯ ನಿರ್ಮಲಾ (50) ಸಾವನ್ನಪ್ಪಿದ ಮಹಿಳೆ. ಬಾಕಿ ಉಳಿದಂತೆ ಉಳಿದಂತೆ ಆಂಧ್ರಪ್ರದೇಶದ ನರಸೀಪಟ್ಟಣದ ಬಿ.ನಾಯ್ಡು ಬಾಬು (51), ರಜಿನಿ (47), ಲಾವಣ್ಯ (40), ವಿಶಾಖಪಟ್ಟಣದ ಶಾಂತಿ (34) ಮತ್ತು ತಮಿಳುನಾಡಿನ ಸೇಲಂ ಪ್ರದೇಶದ ಮಲ್ಲಿಕಾ (49) ಮೃತಪಟ್ಟಿದ್ದಾರೆ. ಘಟನೆಯಲ್ಲಿ 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿನ್ನೆ ವೈಕುಂಠ ದರ್ಶನಕ್ಕೆ ಅಂತಾ ಬಂದಿದ್ದ ಭಕ್ತರನ್ನು ಇಲ್ಲಿನ ಪದ್ಮಾವತಿ ಉದ್ಯಾನವನದಲ್ಲಿ ಇರಿಸಲಾಗಿತ್ತು. ಇದೇ ವೇಳೆ  ಅಲ್ಲಿದ್ದ ಮಹಿಳೆಯೊಬ್ಬರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂತಾ  ಸಿಬ್ಬಂದಿ ಗೇಟ್ ಓಪನ್ ಮಾಡಿದ್ದಾರೆ.ಅಷ್ಟರಲ್ಲಿ ಸಿಬ್ಬಂದಿ ಟೋಕನ್ ನೀಡಲು ಗೇಟ್ ತೆರೆದಿದ್ದಾರೆ ಎಂದು  ಭಾವಿಸಿದ ಭಕ್ತರು ಏಕಾಏಕಿ ಮುನ್ನುಗ್ಗಿದರು. ಪರಿಣಾಮ ಕಾಲ್ತುಳಿತ ಉಂಟಾಗಿದೆ. ಇನ್ನು ಈ ಘಟನೆಗೆ ತಿರುಪತಿಯ ಸಿಬ್ಬಂದಿಯೇ ಕಾರಣ ಎಂದು ಅಲ್ಲಿದ್ದ ಭಕ್ತರು ಆರೋಪಿಸಿದ್ದಾರೆ.

ಇನ್ನು ಬುಧವಾರ  ಸಂಜೆಯಿಂದಲೇ ಟಿಕೆಟ್ ಗಾಗಿ 9 ಕ್ಷೇತ್ರಗಳ 95 ಕೇಂದ್ರಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ಇನ್ನು ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡವರ ವಿವರ ಹಾಗೂ ಅವರ ಬಗ್ಗೆ ಮಾಹಿತಿ ಬೇಕಾದರೆ 0877 – 2236007 ಸಂಖ್ಯೆಗೆ ಸಂಪರ್ಕಿಸಲು ಜಿಲ್ಲಾಧಿಕಾರಿ ವೆಂಕಟೇಶ್ವ‌ರ್ ತಿಳಿಸಿದ್ದಾರೆ.

ತಿರುಪತಿ ಕಾಲ್ತುಳಿತ ಪ್ರಕರಣ: ಕರ್ನಾಟಕದ ಭಕ್ತರಿಗೆ ಅಗತ್ಯ ನೆರವು ನೀಡಲು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಸೂಚನೆ

ತಿರುಪತಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲಿರುವ ಕರ್ನಾಟಕದ ಭಕ್ತರಿಗೆ ಅಗತ್ಯ ನೆರವು ನೀಡಲು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಸೂಚನೆ ನೀಡಿದ್ದಾರೆ.

ಕಾಲ್ತುಳಿತದ ಬಗ್ಗೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅಲ್ಲಿನ ಅಧಿಕಾರಿಗಳಿಂದ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ.ಅಲ್ಲಿನ  ಕರ್ನಾಟಕ ರಾಜ್ಯದ ಎಂಡೋಮೆಂಟ್ ಆಫೀಸರ್  ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಕರ್ನಾಟಕ ಭವನದ ಛತ್ರದಲ್ಲಿ ಭಕ್ತಾದಿಗಳಿಗೆ ಸ್ನಾನ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲು ಸಚಿವ ರಾಮಲಿಂಗಾ ರೆಡ್ಡಿ  ಸೂಚನೆ ನೀಡಿದ್ದಾರೆ.ಅಲ್ಲಿ ತಕ್ಷಣಕ್ಕೆ  ಬೇಕಾಗುವ ಅಗತ್ಯ ಕ್ರಮಕ್ಕೆ ಸ್ಪಂದಿಸುವಂತೆ ಸ್ಥಳೀಯ ಆಫೀಸರ್ ಗೆ ರಾಮಲಿಂಗರೆಡ್ಡಿ ಸೂಚನೆ ಕೊಟಿದ್ದಾರೆ. ಭಕ್ತರಿಗೆ ಅಗತ್ಯ ಸಹಾಯ ಮಾಡಲು ಎಲ್ಲಾ ಕ್ರಮಗಳನ್ನು  ಮುಜರಾಯಿ ಇಲಾಖೆಯಿಂದ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಇಲ್ಲಿಯ ತನಕ ಕರ್ನಾಟಕದ ಯಾವ ಭಕ್ತಾದಿಗಳಿಗೂ ತೊಂದರೆ ಆಗಿರುವ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ. ಕರ್ನಾಟಕದ ಯಾವ ಭಕ್ತಾದಿಗೂ ತೊಂದರೆ ಆಗಿಲ್ಲ ಎಂದು ರಾಮಲಿಂಗ ರೆಡ್ಡಿ ಹೇಳಿದ್ದಾರೆ.