ಮನೆ Latest News ರಾಷ್ಟೀಯ ಭೂಮಾಪನ ದಿನಾಚರಣೆ ಸಮಾರಂಭ; ಇಲಾಖೆಯ ಎರಡು ವರ್ಷದ ಸಾಧನೆಯ ಕೈಪಿಡಿ ಬಿಡುಗಡೆ ಮಾಡಿದ ಸಿಎಂ...

ರಾಷ್ಟೀಯ ಭೂಮಾಪನ ದಿನಾಚರಣೆ ಸಮಾರಂಭ; ಇಲಾಖೆಯ ಎರಡು ವರ್ಷದ ಸಾಧನೆಯ ಕೈಪಿಡಿ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಇಂದು ರಾಷ್ಟೀಯ ಭೂಮಾಪನ ದಿನಾಚರಣೆ ಸಮಾರಂಭ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ನಡೆಯಿತು. ಭೂಮಾಪಕ,‌‌ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಇಲಾಖೆಯ ಎಲ್ಲಾ ನೌಕರರ ಸಂಘಗಳ ವತಿಯಿಂದ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ ಭಾಗಿಯಾಗಿದ್ದರು.

ಈ ವೇಳೆ ಇಲಾಖೆಯ ಎರಡು ವರ್ಷದ ಸಾಧನೆಯ ಕೈಪಿಡಿಯನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಹಾಗೆಯೇ ಭೂ ಮಾಪನ ಇಲಾಖೆಯ ಸುತ್ತೊಲೆಯ ಸಂಪುಟ ಬಿಡುಗಡೆ ಮಾಡಲಾಯಿತು. ಭೂ ಮಾಪಕರಿಗೆ ಆಧುಕಿನ ಸರ್ವೇ ಉಪಕರಣ ರೋವರ್ ಗಳ ವಿತರಣೆ ಮಾಡಲಾಯಿತು. ಸ್ವಮಿತ್ವ ಯೋಜನೆಯ ಅಡಿ ಗ್ರಾಮೀಣ ಪ್ರದೇಶದ ನಕ್ಷೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಡ್ರೋನ್ ಮೂಲಕ ಕಂದಾಯ ಸಿಬ್ಬಂದಿ ಸರ್ವೇ ಕಾರ್ಯಮಾಡಿದ್ದಾರೆ. ಸ್ವಮಿತ್ವ ಯೋಜನೆ ಅಡಿ ಗ್ರಾಮೀಣ ಜನವಸತಿ ಪ್ರದೇಶದ ನಕ್ಷೆ ಬಿಡುಗಡೆ ಮಾಡಲಾಯಿತು. ಸಾಂಕೇತಿಕವಾಗಿ ಹಲವು ಗ್ರಾಮದ ನಕ್ಷೆ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ೭ ವರ್ಷ ಗಳಿಂದ ಭೂ ಮಾಪನ ದಿನಾಚರಣೆ ಆಚರಿಸಿರಲಿಲ್ಲ.ಆದ್ರೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದೊಡ್ಡ ಕಾರ್ಯಕ್ರಮ ನಡೀತಿದೆ.  ರೈತರ‌ ಕೆಲಸ ಸರ್ಕಾರದ ಮೊದಲ ಆದ್ಯತೆ. ಸರ್ವೇ ದಿನ ಇಂದು ಉದ್ಘಾಟನೆ‌ಯನ್ನ ಸಿಎಂ ಮಾಡಿದ್ದಾರೆ. ೧೮೦೨ ರಲ್ಲಿ ಸರ್ವೇ ನಡೆದಿದೆ, ವೈಜ್ಞಾನಿಕ ವಾಗಿ ಸರ್ವೇ ಮಾಡಬೇಕು ಎಂದ್ಹೇಳಿ ಸರ್ವೇ ಮಾಡಿದ್ದಾರೆ. ಕನ್ಯಾಕುಮಾರಿ ಯಿಂದ ಬೆಂಗಳೂರಿನವರೆಗೂ ಸರ್ವೇ ಮಾಡಲಾಗಿತ್ತು. ಅದೇ ರೀತಿ ಅಕ್ಕಪಕ್ಕದ ದೇಶಗಳಿಗೂ ಇದೇ ದಿನ ಸರ್ವೇ ದಿನ ಆಚರಣೆ ಮಾಡ್ತಾ ಬಂದಿದ್ದೇವೆ. ದಕ್ಷಿಣ ಏಷ್ಯದ ವೈಜ್ಞಾನಿಕ ಸರ್ವೇ ಆರಂಭವಾಗಿದ್ದೇ ಇದೇ ದಿನ. ಇದಕ್ಕೂ ಮುನ್ನ ಸರ್ವೇ ಆ್ಯಂಡ್ ಸಟಲ್ಮೇಂಟ್ ಡಿಪಾರ್ಟ್ಮೆಂಟ್ ಎಂದು ಕರೀತಿದ್ದರು.ಸರ್ವೇ ಮಾಡಿದಾಗಲೇ ಜಮೀನಿಗೆ ಅಸ್ತಿತ್ವ ಬರುತ್ತದೆ. ಆಡಳಿತ ವ್ಯವಸ್ಥೆ ಗೆ ಅಡಿಪಾಯ ಹಾಕಿದ್ದೇ ಸರ್ವೇ ಇಲಾಖೆ ಎಂದರು.

ಸಿಎಂ ಸಿದ್ದರಾಮಯ್ಯ ಮಾತನಾಡಿ  ರಾಜ್ಯದಲ್ಲಿ ಅತೀ ಹೆಚ್ಚು ಕೊಲೆ,‌ ಜಗಳ ನಡೀತಿರೋದೇ ಈ ಮೂರು ಕಾರಣಗಳಿಂದ  ಹೆಚ್ಚು ಜಗಳ ಆಗ್ತಿರೋದೇ ಹೆಣ್ಣು, ಮಣ್ಣು ಮತ್ತು ಹೊನ್ನು. ಕಲಹ ಆಗ್ತಿರೋದೇ ಈ ಮೂರು ವಿಷ್ಯಕ್ಕೆ. ಇದಕ್ಕೆ ಎಷ್ಟು ಬೇಗ ಪರಿಹಾರ ಆಗುತ್ತೋ ಅಷ್ಟು ಒಳ್ಳೆಯದು. ಹಣಕಾಸಿನ ಕೊರತೆ ಇಲ್ಲ, ಎಲ್ಲಾ ರೀತಿಯಲ್ಲಿ ಸಹಾಯ ಮಾಡುತ್ತೇವೆ.ಸರ್ವೇಯರ್ ಅಪಾಂಟ್ಮೆಂಟ್, ಸರ್ವೇ ಮಾಡೋದು ಇರೋದು ಎಲ್ಲವೂ ಮಾಡುತ್ತೇವೆ. ನಾನು ಕೃಷ್ಣಭೈರೇಗೌಡ ಗೆ ಹೇಳಿದ್ದೇವೆ.ಒತ್ತುವರಿ ಮಾಡಿಕೊಳ್ಳೋದು ಅಭ್ಯಾಸ, ರೋಗದಂತೆ ಆಗಿದೆ. ಕೆರೆ ಕಟ್ಟೆ ಒತ್ತುವರಿ ಮಾಡಿಕೊಂಡಿದೆ ಎಂದರು.

ಇವತ್ತು ರಾಷ್ಟ್ರೀಯ ಭೂಮಾಪನ ದಿನ ಆಚರಣೆ ಮಾಡಲಾಗ್ತಿದೆ.ನಾನು ಹಿಂದೆ ಸಿಎಂ ಆಗಿದ್ದಾಗಲು ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಹಿಂದೆ ಇದ್ದವರು ಯಾರು ಆಚರಣೆ ಮಾಡಲಿಲ್ಲ. ಪ್ರತಿವರ್ಷ ಭೂಮಾಪನ‌ ದಿನಾಚರಣೆ ಮಾಡಬೇಕು ಎಂದು ಭೂಮಾಪನ, ಕಂದಾಯ ವ್ಯವಸ್ಥೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಕೃಷ್ಣ ಬೈರೇಗೌಡ್ರು ಇಲಾಖೆಯನ್ನ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ. ಪ್ರತಿ ಸಚಿವರು ಇಲಾಖೆಯನ್ನ ಅರ್ಥಮಾಡಿಕೊಂಡಾಗ ದಕ್ಷತೆ ಹೆಚ್ಚಾಗುತ್ತೆ.ಆಗ ಮಾತ್ರ ಸಮರ್ಥವಾಗಿ ಇಲಾಖೆ ಕೆಲಸ ನಡೆಸಿ ಜನರಿಗೆ ಸ್ಪಂದಿಸಬಹುದು.ಸಚಿವರಾಗೋದು ಮುಖ್ಯ ಅಲ್ಲಾ, ಜನಪರ ಕಾಳಜಿ ಬದ್ದತೆ ಇರಬೇಕು. ಕೃಷ್ಣ ಬೈರೇಗೌಡರಿಗೆ ಇಲಾಖೆಯ ಜವಾಬ್ದಾರಿ ಕೊಟ್ಟ ಮೇಲೆ ಕೆಲಸ ಚೆನ್ನಾಗಿ ನಡೆಯುತ್ತಿದೆ. ಕಂದಾಯ ಇಲಾಖೆ ಸರ್ಕಾರ ವ್ಯವಸ್ಥೆಯಲ್ಲಿ ಪ್ರಮುಖ ಇಲಾಖೆ.ಕಂದಾಯ ಇಲಾಖೆಯ ಜೊತೆ ರೈತರು ಹೆಚ್ಚು ಸಂಪರ್ಕ ಇಟ್ಟುಕೊಂಡಿರುತ್ತಾರೆ. ಸರಿಯಾಗಿ ಸ್ಪಂದಿಸಿದ್ರೆ ೫೦% ಸರ್ಕಾರದ ಮೇಲೆ ಇರುವ ಜವಾಬ್ದಾರಿ ನಿರ್ವಹಿಸಿದಂತಾಗುತ್ತೆ.ಜನತಾ ದರ್ಶನ ಮಾಡಿದಾಗ ಕಂದಾಯ ಇಲಾಖೆಯದ್ದೆ ಹೆಚ್ಚು ಅರ್ಜಿಗಳು ಬರ್ತಾವೆ. ಕಂದಾಯ ಇಲಾಖೆಯಲ್ಲಿ ಇನ್ನು ಹೆಚ್ಚು ಕೆಲಸ ಆಗಬೇಕಾಗುತ್ತೆ ಅನ್ನೊದು ಇದರ ಅರ್ಥ.ಸರ್ವೆ ಕಂದಾಯ ಇಲಾಖೆ ರೈತರಿಗೆ ಸಮಸ್ಯೆ ಇಲ್ಲದಾಗೆ ನೋಡಿಕೊಳ್ಳಬೇಕು.ಹೆಚ್ಚು ಕೊಲೆ ಅಕ್ರಮ ನಡೆಯೊದೇ ಹೆಣ್ಣು ಹೊನ್ನು ಮಣ್ಣು ಅನ್ನೊ ಗಾದೆ ಮಾತಿದೆ ಎಂದ್ರು.

ಮಣ್ಣಿನ ಕೆಲಸ ಕಲಹಗಲನ್ನ ಉಂಟುಮಾಡುತ್ತೆ. ಇದನ್ನ ನಿವಾರಣೆ ಆಗಬೇಕಾದ್ರೆ ಮಣ್ಣಿನ ಕೆಲಸ ಅಂದ್ರೆ ರೈತರ ಕೆಲಸ ಆಗಬೇಕಲ್ವಾ. ೧೯೭೮ ತಾಲ್ಲೂಕ್ ಅಭಿವೃದ್ಧಿಯಲ್ಲಿ ಸದಸ್ಯನಾಗಿದ್ದೆ. ೧೯೮೩ ರಲ್ಲಿ ಶಾಸಕನಾಗಿ ನಂತರ ಸಚಿವನಾದೆ.ಎರಡು ಬಾರಿ ಡಿಸಿಎಂ ಅಗಿದ್ದೆ.ಕಂದಾಯ ಇಲಾಖೆಯ ಸಮಸ್ಯೆಗಳನ್ನ ಬಗೆಹರಿಸೋದಕ್ಕೆ ಅಗಿರಲಿಲ್ಲ.ತಾಲ್ಲೂಕು ಕಚೇರಿಗಳಲ್ಲಿ ತ್ವರಿತಗತಿಯಲ್ಲಿ ಕೆಲಸ ಆದ್ರೆ ಜನ, ರೈತರ ಮೆಚ್ಚುಗೆ ಪಡೆಯಬಹುದು.ಎಲ್ಲರು ಕೆಲಸ ಮಾಡ್ತಿದ್ದಿರಾ, ಇನ್ನೂ ಹೆಚ್ಚಿನ ಕೆಲಸ ಮಾಡಿ. ೨೦೧೩-೧೮ ರವರೆಗೆ ಸರ್ಕಾರ ನಡೆಸಿದ್ದೇವೆ. ಇಗ ಎರಡು ವರ್ಷ ಸರ್ಕಾರ ನಡೆಸುತ್ತಿದ್ದೇವೆ. ಹಣಕಾಸಿನ ಕೊರತೆ ಇಲ್ಲಾ ಅಂತ ಕೃಷ್ಣ ಬೈರೇಗೌಡರಿಗೆ ಹೇಳಿದ್ದೇನೆ. ಸರ್ವೆಯರ್ ನೇಮಕಾತಿ, ಸರ್ವೆ ಮಾಡೋದಕ್ಕೆ ಇರಬಹುದು. ಸರ್ವೆ ಕೆಲಸ , ಪೋಡಿ ಮುಕ್ತ ಗ್ರಾಮಗಳಾಗಬೇಕು. ಕೆರೆಕಟ್ಟೆಗಳನ್ನ ಒತ್ತುವರಿ ಮಾಡೊದು ಜನರಿಗೆ ಅಭ್ಯಾಸ ರೋಗ ಅಂತ ಕರೆಯಬೇಕಾ ಗೊತ್ತಿಲ್ಲ.ಅದನ್ನ ಕಡಿಮೆ ಮಾಡಬೇಕಾದ್ರೆ ದುರಸ್ತಿ ಆಗಬೇಕು. ಕೆರೆ ಕಟ್ಟೆಗಳು ಒತ್ತುವರಿ ಜಾಗಗಳನ್ನ ದರ್ಕಾಸ್ತ್ ಮಾಡಬೇಕು.ಸರ್ವೇ, ಸಟಲ್ಮೆಂಟ್ ಇಲಾಖೆ ಇರೋದು ಸರ್ವೇ ಮಾಡಿ ಸಟಲ್ಮೆಂಟ್ ಮಾಡಬೇಕು.೬೫೦ ಸರ್ವೇಯರ್ ಹುದ್ದೆ ಭರ್ತಿ ಮಾಡಿ ಎಂದು ಹೇಳಿದ್ದೇವೆ ಎಂದು ತಿಳಿಸಿದ್ರು.