ಮನೆ ಕ್ರೀಡೆ ಕ್ರಿಕೆಟ್​ ನ ಮುಳುಗಿಸುತ್ತಾ ಐಪಿಎಲ್​?

ಕ್ರಿಕೆಟ್​ ನ ಮುಳುಗಿಸುತ್ತಾ ಐಪಿಎಲ್​?

0

ಕ್ರಿಕೆಟ್. ಭಾರತ ಕ್ರೀಡೆಯ ಅವಿಭಾಜ್ಯ ಅಂಗ. ಕ್ರಿಕೆಟ್​ ಭಾರದಲ್ಲಿ ಬರೀ ಕ್ರೀಡೆಯಲ್ಲ, ಅದೊಂದು ಭಾವನೆ. ಒಂದು ಕಾಲದಲ್ಲಿ ಕ್ರಿಕೆಟ್​ ನಲ್ಲಿ ವಿಪರೀತ ಹಣದ ಹರಿವು ಇರ್ಲಿಲ್ಲ. ಕ್ರಿಕೆಟ್​ ತಾರೆಯರಿಗೆ ಮೋಜು ಮಸ್ತಿಗೆ ಹೆಚ್ಚಿನ ಅವಕಾಶ ಇರ್ಲಿಲ್ಲ. ಆದ್ರೆ ಕಾಲ ಬದಲಾದಂತೆ ಎಲ್ಲವೂ ಬದಲಾಗ್ತಿದೆ. ಐಪಿಎಲ್​ ಎಂಟ್ರಿ, ಎಲ್ಲವನ್ನೂ ಬದಲಿಸ್ತಿದೆ. ಟೆಸ್ಟ್ ಕ್ರಿಕೆಟ್​, ಒನ್​ ಡೇ ಕ್ರಿಕೆಟ್​ ನ ಹಂತಹಂತವಾಗಿ ನುಂಗಿ ಹಾಕುವ ಹಾಗೆ ಕಾಣಿಸ್ತಿದೆ. ಐಪಿಎಲ್​ ಅಂದ್ರೆ ಹಣದ ಸುರಿಮಳೆ, ಮೋಜು ಮಸ್ತಿ ಎನ್ನುವಂತಾಗಿದೆ. ಆಟಗಾರರಿಗೆ ಈ ಹಿಂದೆ ಇದ್ದ ಶಿಸ್ತು, ಕ್ರಿಕೆಟ್​ ಎಂದರೆ ಇದ್ದ ದೈವಿಕ ಭಾವನೆ ಅದ್ಯಾವುದು ಇದ್ದ ಹಾಗೆ ಕಾಣಿಸ್ತಿಲ್ಲ. ಹಣಕ್ಕಾಗಿ ಆಡು ಎನ್ನುವಂತಾಗಿದೆ. ಹೀಗಾಗಿ ಅದೆಷ್ಟೋ ಆಟಗಾರರಿಗೆ ಭಾರತ ತಂಡದಲ್ಲಿ ಆಡ್ಬೇಕು ಎನ್ನುವ ಮಹದಾಸೆಗಿಂತ ಐಪಿಎಲ್​ ಆಡಿ ಕೋಟಿ ಬೇಬಿಗಿಳಿಸಿಕೊಂಡ್ರೆ ಸಾಕು ಎನ್ನುವಂತಾಗಿದೆ. ಈ ಐಪಿಎಲ್​ ನ ಹುಚ್ಚು, ಕ್ರಿಕೆಟ್​ ನ ಎಲ್ಲಿಗೆ ಕೊಂಡೊಯ್ಯುತ್ತೋ ಎನ್ನುವ ಆತಂಕ ನಿಜವಾದ ಕ್ರಿಕೆಟ್​ ಪ್ರೇಮಿಗಳಲ್ಲಿ ಶುರುವಾಗಿದೆ. ಹೀಗಾಗಿ ಐಪಿಎಲ್​ ಗೂ ಒಂದಷ್ಟು ಕಠಿಣ ನಿಯಮ ತರಲೇಬೇಕಿದೆ. ಈ ಹಣ, ಮೋಜು ಮಸ್ತಿ ಕ್ರೀಡೆಯನ್ನು ಮುಳುಗಿಸುತ್ತೇ ಹೊರತು ಬೆಳೆಸುವುದಿಲ್ಲ.