ಮನೆ ಸಿನಿಮಾ ಕನ್ನಡ ಚಿತ್ರರಂಗ ಬಂದ್​! ಸ್ಟಾರ್​ ನಟರೇ ಎಲ್ಲಿದ್ದೀರಿ?

ಕನ್ನಡ ಚಿತ್ರರಂಗ ಬಂದ್​! ಸ್ಟಾರ್​ ನಟರೇ ಎಲ್ಲಿದ್ದೀರಿ?

0

ಬಂಧುಗಳೇ ನಮಸ್ಕಾರ. ಕನ್ನಡ ಚಿತ್ರರಂಗ, ದಿಗ್ಗಜರು ಕಟ್ಟಿ ಬೆಳೆಸಿದ ಇಂಡಸ್ಟ್ರಿ. ಆದ್ರೆ ಸದ್ಯ ಸ್ಯಾಂಡಲ್​ ವುಡ್​ ಬಂದ್ ಆಗುವ ಹಂತಕ್ಕೆ ಬಂದಿದೆ. ಇದಕ್ಕೆ ಕಾರಣ ಸಿನಿಮಾಗಳ ಕೊರತೆ. ಹೊಸಬರ ಸಿನಿಮಾ ಬಂದ್ರೂ, ಜನ ಚಿತ್ರಮಂದಿರಗಳಿಗೆ ಹೋಗ್ತಿಲ್ಲ. ಸಿನಿಮಾ ಮಾಡಿ ಜನ್ರನ್ನ ಸೆಳಿಯಬೇಕಾದ ಸ್ಟಾರ್​ ನಟರು ಸಿನಿಮಾ ಮಾಡ್ತಿಲ್ಲ. ಹೀಗಾಗಿ ಇಡೀ ಇಂಡಸ್ಟ್ರಿಯೆ ಬಡವಾಗಿದೆ. ಉದಾಹರಣೆಗೆ ನಟ ಸುದೀಪ್, ದರ್ಶನ್, ಯಶ್​, ಉಪೇಂದ್ರರಂತಹ ಸ್ಟಾರ್​ ನಟರು ಎಡರು ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಹೆಚ್ಚು ಎನ್ನುವಂತಾಗಿದೆ. ಪ್ಯಾನ್ ಇಂಡಿಯಾ ಮೋಹಕ್ಕೆ ಜೋತು ಬಿದ್ದು ಹೆಚ್ಚು ಸಿನಿಮಾ ಮಾಡ್ತಿಲ್ಲ. ಇಂಡಸ್ಟ್ರಿಯಿಂದ ಎಲ್ಲಾ ಪಡೆದ ಈ ನಟರು, ಸದ್ಯ ಇಂಡಸ್ಟ್ರಿ ಕಡೆಗೆ ಗಮನಕೊಡ್ತಿಲ್ಲ. ಇದ್ರ ಪರಿಣಾಮ ಕಾರ್ಮಿಕರಿಗೆ ಕೆಲ್ಸ ಇಲ್ಲ, ಸಣ್ಣ ಕಲಾವಿದರಿಗೂ ಒದ್ದಾಟ, ಥಿಯೇಟರ್​ ಗಳು ಮುಚ್ಚೋ ಪರಿಸ್ಥಿತಿ ಎದುರಾಗಿದೆ. ಸದ್ಯ ಇದಕ್ಕೆ ಪರಿಹಾರ, ಪ್ಯಾನ್ ಇಂಡಿಯಾ ಮೋಹದಿಂದ ಹೊರಬಂದು, ಹೆಚ್ಚೆಚ್ಚು ಸಿನಿಮಾ ಮಾಡಿ ಜನ್ರನ್ನ ಸೆಳಿಬೇಕಾಗಿದೆ.