ಬಂಧುಗಳೇ ನಮಸ್ಕಾರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂದಿಗೂ ವ್ಯಕ್ತಿ ಪೂಜೆ ಒಳ್ಳೆಯದಲ್ಲ. ವ್ಯಕ್ತಿ ಪೂಜೆ ಸರ್ವಾಧಿಕಾರದ ಲಕ್ಷಣ. ಆದ್ರೆ ಇಂದು ಭಾರದ ಬದಲಾಗ್ತಿದೆ. ವ್ಯಕ್ತಿ ಪೂಜೆ ಆಕಾಶದೆತ್ತರಕ್ಕೆ ಏರ್ತಿದೆ. ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ. ಎಲ್ಲಿವರೆಗೆ ಈ ದೇಶದಲ್ಲಿ ಮೋದಿಯನ್ನು ಅಭಿಮಾನಿಸುವವರು ಇದ್ದಾರೆ ಅಂದ್ರೆ, ಮೋದಿ ವಿರೋಧಿಸಿದ್ರೆ ದೇಶವನ್ನೇ ವಿರೋಧಿಸಿದಂತೆ ಎನ್ನುವವರಿದ್ದಾರೆ. ದೇಶ ಪ್ರೇಮವಂದ್ರೆ ಮೋದಿ ಪ್ರೀತಿ, ಮೋದಿ ವಿರೋಧ ಅಂದ್ರೆ ದೇಶ ದ್ರೋಹಿ ಎನ್ನುವಷ್ಟರಮಟ್ಟಿಗೆ ಭಾರತ ಬದಲಾಗ್ತಿದೆ. ಈ ಬೆಳವಣಿಗೆ ಯಾವುದೇ ದೇಶಕ್ಕೂ ಒಳ್ಳೆಯದಲ್ಲ. ಮೋದಿ ಮೇಲೆ ಪ್ರೀತಿ ಇರಲಿ. ಆದ್ರೆ ಅಂಧಾಭಿಮಾನ ಬೇಡ. ಮಾಡಿದ್ದೆಲ್ಲವೂ ಸರಿ ಎನ್ನುವ ಭಾವನೆ ಬೇಡ. ಸರಿಯಿದ್ದಾಗ ಸರಿ ಎನ್ನಿ, ತಪ್ಪಿದ್ದಾಗ ತಪ್ಪೆಂದು ಛಾಟಿ ಬೀಸಿ. ಅದೇ ಪ್ರಜಾಪ್ರಭುತ್ವ, ಅದೇ ಪ್ರಜಾಪ್ರಭುತ್ವದ ಅಂದ. ದೇಶದಿಂದ ಮೋದಿಯೇ ಹೊರತು, ಮೋದಿಯೇ ದೇಶವಲ್ಲ. ಮೊದಲು ಭಾರತಕ್ಕೊಂದು ಅಸ್ಥಿತ್ವ ಇತ್ತು, ಜಗತ್ತಿನಲ್ಲೊಂದು ಗೌರವ ಇತ್ತು. ರಸ್ತೆ ಕಟ್ಟಡ, ವಿವಿ ಎಲ್ಲವೂ ಇದ್ದವು. ಮೋದಿ ಆ ಹೊಳಪನ್ನ ಹೆಚ್ಚಿಸಿರಬಹುದಷ್ಟೇ. ಹೊಸ ಭಾರತವನ್ನೇ ಮೋದಿ ಸೃಷ್ಟಿ ಮಾಡಿಲ್ಲ. ಆದ್ರೆ ವಾಟ್ಸಪ್ ವಿವಿ ನಮ್ಮ ತಲೆಯನ್ನೇ ಮಲಿನಗೊಳಿಸ್ತಿದೆ. ಮೊದಲು ಅದ್ರಿಂದ ಹೊರಬನ್ನಿ. ದೇಶವನ್ನು ಪ್ರೀತಿಸಿ. ದೇಶ ಶಾಶ್ವತವೇ ಹೊರತು, ವ್ಯಕ್ತಿಯಲ್ಲ.